ಆಂಡ್ರೊಮಿಡ
ಆಂಡ್ರೊಮಿಡ ಗ್ರೀಕ್ ಪುರಾಣದಲ್ಲಿ ಇಥಿಯೋಪಿಯದ ರಾಜಕುಮಾರಿ[೧]; ಆಕಾಶದಲ್ಲಿ ಒಂದು ನಕ್ಷತ್ರಪುಂಜದ (ಕಾನ್‍ಸ್ಟೆಲ್ಲೇಷನ್) ಮತ್ತು ಅದೇ ವಲಯದಲ್ಲಿರುವ ಸುಪ್ರಸಿದ್ದ ನೆಬ್ಯುಲದ ಹೆಸರು. ಪುರಾಣದ ಪ್ರಕಾರ ಈಕೆಯ ತಾಯಿ ಕೆಶ್ಯಿಯೋಪಿಯ, (ನೋಡಿ- ಕೆಶ್ಯಿಯೋಪಿಯ) ತನ್ನ ಸೌಂದರ್ಯದಿಂದ ಮತ್ತಳಾಗಿ ಸಮುದ್ರರಾಜನ ಮಗಳಂದಿರಾದ ನೀರೇಯ್ಡ್ ಸಹೋದರಿಯರಿಗಿಂತಲೂ ತಾನು ಸುಂದರಿ ಎಂದು ಘೋಷಿಸಿದಳು. ಈ ಅಪಮಾನದ ಸೇಡು ತೀರಿಸಲು ಸಮುದ್ರರಾಜ ಪೋಸಿóಡನ್ ಪ್ರಳಯ ಸಮುದ್ರತರಂಗಗಳಿಂದ ಇಥಿಯೋಪಿಯವನ್ನು ನಾಶಮಾಡತೊಡಗಿದ; ಮತ್ತು ಸಿಟಸ್ ಹೆಸರಿನ ಭೀಕರ ಪ್ರಾಣಿಯನ್ನು ರಾಜ್ಯದ ಮೇಲೆ ಎರಗಲು ಅಟ್ಟಿದ. ಆಂಡ್ರೋಮಿಡಳ ತಂದೆ ಸಿಫಿಯಸ್ ರಾಜ ಈ ಉತ್ಪಾತಪರಂಪರೆಯಿಂದ ಕಂಗೆಟ್ಟು ಪರಿಹಾರಾರ್ಥ ಝಯನ್ ಅವವ್ಮಾಮ್‍ನ ದಿವ್ಯವಾಣಿಯ ಮರೆಹೊಕ್ಕ. ಅದರ ಆದೇಶದ ಪ್ರಕಾರ ಆಂಡ್ರೊಮಿಡಳನ್ನು ಸರಪಳಿಗಳಿಂದ ಬಂಧಿಸಿ ಸಿಟಸ್‍ಗೆ ಬಲಿಯಾಗಿ ಒಪ್ಪಿಸಿದ. ದು:ಖಾರ್ತ ಆಂಡ್ರೊಮಿಡಳ ಹಲುಬುವಿಕೆ, ಅದೇವೇಳೆಯಲ್ಲಿ ಗಗನಗಾಮಿಯಾಗಿದ್ದ ಸುಂದರ ವೀರ ಪರ್ಸಿಯಸ್‍ನ (ನೋಡಿ- ಪರ್ಸಿಯಸ್) ಗಮನವನ್ನು ಆ ಕಡೆಗೆ ಸೆಳೆಯಿತು. ಆಂಡ್ರೊಮಿಡಳಲ್ಲಿ ಪ್ರೇಮಪರವಶನಾದ ಪರ್ಸಿಯಸ್ ಆಕೆಯೊಡನೆ ವಿವಾಹವಾಗಲು ಸಿಫಿಯೆಸ್‍ನ ಅನುಮತಿ ಪಡೆದು ಕ್ರೂರಪ್ರಾಣಿ ಸಿಟಸ್ ಅನ್ನು ಸಂಹರಿಸಿದ. ಮುಂದೆ ಆಂಡ್ರೊಮಿಡ ಪರ್ಸಿಯಸ್‍ರ ವಿವಾಹ ನೆರವೇರಿತು.[೨]
ಈ ನಾಟಕದ ಪಾತ್ರಧಾರಿಗಳಾದ ಆಂಡ್ರೊಮಿಡ, ಕೆಶ್ಮಿಯೋಪಿಯ, ಸಿಫಿಯಸ್, ಸಿಟಸ್, ಪರ್ಸಿಯಸ್ ಇವರ ಹೆಸರುಗಳನ್ನು ಆಕಾಶದ ವಿವಿಧ ನಕ್ಷತ್ರಪುಂಜಗಳಿಗೆ ನೀಡಲಾಗಿದೆ. ಆಂಡ್ರೊಮಿಡ ನಕ್ಷತ್ರಪುಂಜ ಉತ್ತರಾಕಾಶದಲ್ಲಿ ಪರ್ಸಿಯನ್ ಮತ್ತು ಕೆಶ್ಮಿಯೋಫಿಯ ಪುಂಜಗಳ ನಡುವೆ ಇದೆ. ಇದರಲ್ಲಿ ಹೆಸರಿಸುವಂಥ ಪ್ರಕಾಶಮಾನ ಬಿಡಿ ನಕ್ಷತ್ರಗಳಿಲ್ಲ. ಆದರೆ ಇದೇ ವಲಯದಲ್ಲಿ ಅತಿ ದೂರದಲ್ಲಿರುವ ನೆಬ್ಯುಲಕ್ಕೆ ಆಂಡ್ರೊಮಿಡ ನೆಬ್ಯುಲವೆಂದೇ ಹೆಸರು. ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸುವ ಪರಮಾವಧಿ ದೂರದ ಮಿತಿ ಈ ನೆಬ್ಯುಲ. ಮಸಕುಬೆಳಕಿನ ಮಚ್ಚೆಯಂತೆ ತೋರುವ ಇದರ ದೂರ ಸುಮಾರು 2,000,000 ಜ್ಯೋತಿರ್‍ವರ್ಷಗಳು.
ಚಾಲ್ರ್ಸ್ ಮೆಸ್ಸಿಯರ್‍ನ ಆಕಾಶಕಾಯಗಳ ಪಟ್ಟಿಯಲ್ಲಿ ಆಂಡ್ರೊಮಿಡ ನೆಬ್ಯುಲದ ಸ್ಥಾನ ಸೂಚ್ಯಂಕ 31 ಆಗಿದ್ದುದರಿಂದ ಈ ನೆಬ್ಯುಲವನ್ನು ಒ 31 ಎಂದೇ ಕರೆಯುವುದು ರೂಢಿಯಾಗಿದೆ. ಒ 31 ಆವರ್ತಿಸುತ್ತಿದೆ. ಇದರ ಆಕಾರ ಸುರುಳಿಯಂತೆ. ಇದರಲ್ಲಿ ಸುಮಾರು 100 ಬಿಲಿಯನ್ (1 ಬಿ=1 ಮಿಲಿಯನ್ ಮಿಲಿಯನ್) ನಕ್ಷತ್ರಗಳಿರಬಹುದೆಂದು ಅಂದಾಜು. ಒಂದರಿಂದ ಇನ್ನೊಂದು ದೂರವಾಗಿ ಧಾವಿಸುತ್ತಿರುವ ಆಕಾಶದಲ್ಲಿ ಇತರ ಎಲ್ಲ ಬ್ರಹ್ಮಾಂಡಗಳಿಗಿಂತ (ನಕ್ಷತ್ರ, ನೆಬ್ಯುಲ ಮುಂತಾದ ಆಕಾಶಕಾಯಗಳ ಮಹಾಸಮುದಾಯ ಬ್ರಹ್ಮಾಂಡ--ಗ್ಯಾಲಕ್ಸಿ) ಭಿನ್ನವಾಗಿ ಒ 31 ಮಾತ್ರ ಸೌರವ್ಯೂಹದೆಡೆಗೆ ಚಲಿಸುತ್ತಿದೆ. 100ಕ್ಕಿಂತಲೂ ಹೆಚ್ಚು ನೋವಾಗಳನ್ನು ಒ 31 ರಲ್ಲಿ ಗುರುತಿಸಲಾಗಿದೆ. ಈ ನೆಬ್ಯುಲ ರೇಡಿಯೊ ತರಂಗೋತ್ಪಾದನ ಕೇಂದ್ರವೂ ಹೌದು.[೩]