ಅಂತರಜಾಲ ಸುರಕ್ಷತೆ

(ಅ೦ತರಜಾಲ ಸುರಕ್ಷತೆ ಇಂದ ಪುನರ್ನಿರ್ದೇಶಿತ)

ಅಂತರಜಾಲ ಸುರಕ್ಷತೆ

ವೆಬ್ ಸುರಕ್ಷತೆ, ಅಥವಾ ಆನ್ಲೈನ್ ಸುರಕ್ಷತೆ ಅಥವಾ ಇಂಟರ್ನೆಟ್ ಸುರಕ್ಷತ ಬಳಕೆದಾರರ ವೈಯಕ್ತಿಕ ಸುರಕ್ಷತೆ ಮತ್ತು ಮಾಹಿತಿ ಸುರಕ್ಷತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ವಿಶ್ವಾದ್ಯಂತ ಬೆಳೆಯುತ್ತಿದ್ದಂತೆ , ಮಾಹಿತಿ, ಅಂತರಜಾಲ ಸುರಕ್ಷತೆ ಪ್ರತಿಯೊಬ್ಬ ಬಳಕೆದಾರನಿಗೆ ಅದರಲ್ಲೂ ಪ್ರಮುಖವಾಗಿ ಮಕ್ಕಳಿಗೆ ಬಹು ದೊಡ್ಡ ಸಮಸ್ಯೆಯಾಗಿದೆ.

ಸ್ಪ್ಯಾಮ್, ಫಿಶಿಂಗ್, ಸೈಬರ್ ನಿಂದನೆ (Cyberstalking), ಮಾಲ್ವೇರ್, ಕಂಪ್ಯೂಟರ್ ವೈರಸ್ಗಳು, ಇತ್ಯಾದಿ ಮತ್ತು ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯ, ಗುರುತು ಕಳ್ಳತನ, ದುರುದ್ದೇಶಪೂರಿತ ಬಳಕೆದಾರರು ಇತ್ತೀಚಿಗಿನ ದಿನಗಳಲ್ಲಿ ತುಂಬಾ ಕಳವಳಕಾರಿ ವಿಷಯಗಳಾಗಿವೆ. ಹೆಚ್ಚಿನ ಸಾಮಾಜಿಕ ನೆಟ್ವರ್ಕಿಂಗ್ ಮತ್ತು ಚಾಟ್ ಸೈಟುಗಳು ಸುರಕ್ಷತೆ ಬಗ್ಗೆ ಒಂದು ಪುಟ ಹೊಂದಿರುತ್ತವೆ. ಹಲವಾರು ಗುಂಪುಗಳು, ಸರ್ಕಾರ, ಸಂಘ ಸಂಸ್ಥೆಗಳು ಇಂಟರ್ನೆಟ್ ಬಳಸುವ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.ಸುರಕ್ಷಿತ ಇಂಟರ್ನೆಟ್ ಡೇ ಇಂಟರ್ನೆಟ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಫೆಬ್ರವರಿಯಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ.

ಮಾಹಿತಿಯ ಸುರಕ್ಷತೆ(Information security)

ಬದಲಾಯಿಸಿ

ವೈಯಕ್ತಿಕ ಮಾಹಿತಿ, ಗುರುತು ಹಾಗೂ ಪಾಸ್ವರ್ಡ್ ಗಳಂತಹ ಸೂಕ್ಷ್ಮವಾದ ಮಾಹಿತಿ, ಉದಾಹರಣೆಗೆ, ಬ್ಯಾಂಕ್ ಖಾತೆಗಳು ಭದ್ರತಾ ಸೋರಿಕೆಗೆ ಒಳಗಾಗಬಹುದು. ಗುರುತಿನ ಕಳ್ಳತನ, ಅನಧಿಕೃತ ಪ್ರವೇಶ ಖಾಸಗಿ ಮಾಹಿತಿಯ ದುರ್ಬಳಕೆಗೆ ಕಾರಣವಾಗಬಹುದು.

ಫಿಶಿಂಗ್

ಬದಲಾಯಿಸಿ

ಫಿಶಿಂಗ್ ಇಂಟರ್ನೆಟ್ ನಲ್ಲಿ ನಡೆಯುವ ಹಗರಣಗಳಲ್ಲಿ ಒಂದು ವಿಧ, ಫಿಶಿಂಗ್ ನಲ್ಲಿ ಹಗರಣಕೋರರು ನಂಬಿಕಾರ್ಹ ಮೂಲದಂತೆ ವೇಷ ಬದಲಿಸಿ ಬಳಕೆದಾರರ ಕ್ರೆಡಿಟ್ ಕಾರ್ಡ್ , ಪಾಸ್ವರ್ಡ್ ನಂತಹ ಖಾಸಗಿ ಮಾಹಿತಿಯನ್ನು ಇಂಟರ್ನೆಟ್ ಮೂಲಕ ಪಡೆಯುವ ಪ್ರಯತ್ನ ಮಾಡುತ್ತಾರೆ. ಫಿಶಿಂಗ್ ಸಾಮಾನ್ಯವಾಗಿ ಈಮೇಲ್ ಮತ್ತು ಇನ್ಸ್ಟೆಂಟ್ ಮೆಸೇಜಿಂಗ್ ಮೂಲಕ ಸಂಭವಿಸುತ್ತದೆ. ಫಿಶಿಂಗ್ ಈಮೇಲ್ ಗಳು ಹಗರಣಕೋರರ ವೆಬ್ಸೈಟ್ಗಳಿಗೆ ಕೊಂಡಿಗಳನ್ನು ಒಳಗೊಂಡಿರಬಹುದು, ಇಂತಹ ಕೊಂಡಿಗಳು ಬಳಕೆದಾರರು ತಮ್ಮ ಖಾಸಗಿ ಮಾಹಿತಿಯನ್ನು ನಮೂದಿಸುವಂತೆ ಪ್ರೇರೇಪಿಸುತ್ತವೆ . ಈ ನಕಲಿ ವೆಬ್ಸೈಟುಗಳನ್ನು ಬಳಕೆದಾರರಿಗೆ ಕಾನೂನುಬದ್ಧವಾಗಿ ಕಾಣುವಂತೆ ವಿನ್ಯಾಸಿಸುತ್ತಾರೆ ಈಮೂಲಕ ಹಗರಣಕೋರರು ಬಳಕೆದಾರರಿಗೆ ಅನುಮಾನ ಬರದಂತೆ ನೋಡಿಕೊಳ್ಳುತ್ತಾರೆ .

ಇಂಟರ್ನೆಟ್ ವಂಚನೆಗಳು

ಬದಲಾಯಿಸಿ

ಇಂಟರ್ನೆಟ್ ನಲ್ಲಿ ಬಳಕೆದಾರರನ್ನು ಮೋಸಗೊಳಿಸಲು ತರತರದ ಯೋಜನೆಗಳು ಇವೆ, ಇಂತಹ ಯೋಜನೆಗಳು ಬಳಕೆದಾರರ ಜ್ಞಾನದ ಕೊರತೆಯ ಲಾಭ ಪಡೆಯುವ ಪ್ರಯತ್ನ ಮಾಡುತ್ತವೆ. ಇಂಟರ್ನೆಟ್ ವಂಚನೆಗಳು ಸಾಮಾನ್ಯವಾಗಿ ಸುಳ್ಳು ಭರವಸೆ ಮತ್ತು ವಿಶ್ವಾಸ ತಂತ್ರಗಳ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪರೋಕ್ಷವಾಗಿ ಪಡೆಯುವ ಗುರಿ ಹೊಂದಿರುತ್ತವೆ.

ಮಾಲ್ವೇರ್

ಬದಲಾಯಿಸಿ

ಮಾಲ್ವೇರ್ ಮೂಲತಃ ಅಸಲಿ ತಂತ್ರಾಂಶದಂತೆ ಕಾಣುವಂತೆ ವಿನ್ಯಾಸಗೊಳಿಸಲಾದ ದುರುದ್ದೇಶಪೂರಿತ ತಂತ್ರಾಂಶ. ಮಾಲ್ವೇರ್ಗಳನ್ನು ಬಳಕೆದಾರರ ಖಾಸಗಿ ಮಾಹಿತಿಯನ್ನು ಅವರ ಸಮ್ಮತಿ ಅಥವಾ ಜ್ಞಾನವಿಲ್ಲದೆ ಸಂಗ್ರಹಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಿರುತ್ತಾರೆ. ಮಾಲ್ವೇರ್ಗಳನ್ನು ಸಾಮಾನ್ಯವಾಗಿ ಇಮೇಲ್, ಅನಧಿಕೃತ ವೆಬ್ ತಾಣಗಳು ಮತ್ತು ಫೈಲ್ ಗಳ ಮೂಲಕ ವಿತರಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಒಂದು ಕಡತವನ್ನು (file) ಮಾಲ್ವೇರ್ ಎಂಬುದನ್ನು ನಿರ್ಧರಿಸಲು ಕಷ್ಟ ಸಾಧ್ಯವಾಗಿರುವುದರಿಂದ ಅವುಗಳು ಭಧ್ರತೆಯ ದೃಷ್ಟಿಯಿಂದ ತುಂಬಾ ಪ್ರಾಮುಖ್ಯತೆ ಪಡೆದಿವೆ.

ವೈಯಕ್ತಿಕ ಸುರಕ್ಷತೆ

ಬದಲಾಯಿಸಿ

ಇಂಟರ್ನೆಟ್ ನ ಬೆಳೆವಣಿಗೆಯಿಂದ ಅನೇಕ ಪ್ರಮುಖ ಸೇವೆಗಳು ಎಲ್ಲರಿಗೂ ಸುಲಭವಾಗಿ ಎಟಕುವಂತಾಗಿದೆ. ಡಿಜಿಟಲ್ ಸಂವಹನ(communication) ಈ ತರಹದ ಪ್ರಮುಖ ಸೇವೆಗಳಲ್ಲಿ ಒಂದು, ಈ ಸೇವೆಯಿಂದ ಬಳಕೆದಾರರು ಒಬ್ಬರೊನೊಬ್ಬರು ತ್ವರಿತವಾಗಿ ಸಂಪರ್ಕಿಸಲು ಸಾಧ್ಯವಾಯಿತಾದರೂ ಅದರೊಂದಿಗೆ ದುರುದ್ದೇಶಪೂರಿತ ಬಳಕೆದಾರರು ವೈಯಕ್ತಿಕ ಲಾಭಕ್ಕಾಗಿ ಇಂಟರ್ನೆಟ್ ಬಳಸಲು ಅವಕಾಶವಾಯಿತು. ಹಣಕಾಸು, ಪ್ರಾಪಂಚಿಕ ಲಾಭ ಅದರಲ್ಲೂ ಮುಖ್ಯವಾಗಿ ಮಕ್ಕಳು ಈ ದುರುದ್ದೇಶಪೂರಿತ ಬಳಕೆದಾರರ ಗುರಿ ಎಂಬ ವಿಷಯ ಮಕ್ಕಳು ಮತ್ತು ಪೋಷಕರು ಆತಂಕ ಪಡುವಂತಾಗಿದೆ.

ಸೈಬರ್ ನಿಂದನೆ(Cyberstalking)

ಬದಲಾಯಿಸಿ

ಇಂಟರ್ನೆಟ್ ಅಥವಾ ಯಾವುದೇ ರೀತಿಯ ವಿದ್ಯುನ್ಮಾನ ಮಾಧ್ಯಮದ ಮುಖಾಂತರ ಒಬ್ಬ ವ್ಯಕ್ತಿ , ಗುಂಪು ಅಥವಾ ಸಂಸ್ಥೆಗೆ ಕೊಡುವ ಕಿರುಕಳ ಕೊಡುವುದನ್ನು ಅಥವಾ ಬೆದರಿಕೆ ಹಾಕುವುದನ್ನು Cyberstalking ಅಥವಾ ಸೈಬರ್ ನಿಂದನೆ ಎನ್ನಲಾಗುತ್ತದೆ. ಸುಳ್ಳು ಆರೋಪ ಹೊರಿಸುವುದು ಅಥವಾ ಸುಳ್ಳು ಹೇಳಿಕೆ ಕೊಡುವುದು , ಬೆದರಿಕೆ ಹಾಕುವುದು , ಗುರುತು ಕಳ್ಳತನ , ಮಾಹಿತಿಗೆ ಅಥವಾ ಉಪಕರಣಗಳಿಗೆ ಹಾನಿ ಉಂಟು ಮಾಡುವುದು, ಅಪ್ರಾಪ್ತ ವಯಸ್ಸಿನವರಿಗೆ ಲೈಂಗಿಕ ಕಿರುಕಳ ಕೊಡುವುದು ಹಾಗೂ ವಯ್ಯಕ್ತಿಕ ಮಾಹಿತಿ ಕಲೆಹಾಕಿ ಅದನ್ನು ಕಿರುಕಳ ಕೊಡಲು ಬಳಸುವುದು ಇವೆಲ್ಲವನ್ನು ಸೈಬರ್ ನಿಂದನೆ ಅಥವಾ Cyberstalking ಎನ್ನುತ್ತಾರೆ.

ಸೈಬರ್ ಬುಲ್ಲಿಯಿಂಗ್

ಬದಲಾಯಿಸಿ

ತ್ವರಿತ ಸಂದೇಶ( Instant messaging ), ಸಾಮಾಜಿಕ ಮಾಧ್ಯಮ, ಇಮೇಲ್ ನಂತಹ ವಿದ್ಯುನ್ಮಾನ ಸಂವಹನ ವಿಧಾನದ ಮೂಲಕ ಒಬ್ಬ ವ್ಯಕ್ತಿ ಅಥವಾ ಗುಂಪಿನ ಮೇಲೆ ದಾಳಿ ಮಾಡುವುದು , ಬೆದರಿಸುವುದು ಅಥವಾ ಬಲಾತ್ಕಾರದಿಂದ ಸ್ವಾದೀನ ಪಡಿಸುವುದನ್ನು ಸೈಬರ್ ಬುಲ್ಲಿಯಿಂಗ್ ಎನ್ನುತ್ತಾರೆ.

ಆನ್ಲೈನ್ ಪ್ರಿಡೆಶನ್

ಬದಲಾಯಿಸಿ

ಅಪ್ರಾಪ್ತ ಮಕ್ಕಳೊಂದಿಗೆ ಇಂಟರ್ನೆಟ್ ಮೂಲಕ ಲೈಂಗಿಕ ಸಂಬಂಧಗಳನ್ನು ಬೆಳೆಸುವ ಕ್ರಮವನ್ನು ಆನ್ಲೈನ್ ಪ್ರಿಡೆಶನ್ ಎನ್ನುತ್ತಾರೆ. ಅಂತರಜಾಲ ಅಪರಾಧಿಗಳು ಚಾಟ್ ಕೊಠಡಿಗಳು ಅಥವಾ ಅಂತರಜಾಲ ವೇದಿಕೆಗಳ ಮೂಲಕ ಅಪ್ರಾಪ್ತ ವಯಸ್ಸಿನವರನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಬಹುದು.

ಅಶ್ಲೀಲ / ಆಕ್ಷೇಪಾರ್ಹ ವಿಷಯಗಳು

ಬದಲಾಯಿಸಿ

ಅಂತರಜಾಲದಲ್ಲಿ ಹಲವಾರು ವೆಬ್ ಸೈಟ್ ಗಳು ಮನ ನೋಯಿಸುವ , ಅಸಹ್ಯ , ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಹೊಂದಿರುವ ಸಾಧ್ಯತೆ ಇದೆ, ಇದು ಬಳಕೆದಾರರ ಇಚ್ಛೆಗೆ ವಿರುದ್ದವಾಗಿರಬಹುದು. ಇಂತಹ ವೆಬ್ ತಾಣಗಳು ದ್ವೇಷ ಬಿತ್ತುವಂತಹ ಮಾಹಿತಿ , ಪ್ರಚೋದನಕಾರಿ ಅಥವಾ ಕೆರಳಿಸುವ ಭಾಷಣಗಳನ್ನು ಹೊಂದಿರಬಹುದು. ಈ ವೆಬ್ ತಾಣಗಳು ಪಾಪ್ ಅಪ್ ಜಾಹೀರಾತು ಹಾಗೂ ಸಂದೇಹ ಬಾರದ ರೀತಿಯ ಅಪರಿಚಿತ ಕೊಂಡಿಗಳ ಮೂಲಕ ತಮ್ಮ ಉದ್ದೇಶವನ್ನು ತಲುಪುವ ಪ್ರಯತ್ನ ಮಾಡುತ್ತವೆ.

ಉಲ್ಲೇಖಗಳು

ಬದಲಾಯಿಸಿ

[] [] []

ಉಲ್ಲೇಖಗಳು

ಬದಲಾಯಿಸಿ
  1. "Types of computer crimes".
  2. "ICT Facts and Figures".
  3. "Get Safe Online".