ಅಸ್ಸೀರಿಯನ್ನರ ಕಲೆ
ಅಸ್ಸೀರಿಯನ್ನರ ಕಲೆ ಚರಿತ್ರೆಯ ಪ್ರಾರಂಭದಲ್ಲಿ ಮೆಸಪೊಟೇಮಿಯದ[೧] ನಿಮ್ನ ಪ್ರದೇಶ ಸುಮೇರೋ-ಅಕ್ಕೇಡಿಯನ್ನರ ಸಂಸ್ಕøತಿಗೆ ಸ್ಥಾನವಾಗಿತ್ತು. ಈ ಪ್ರದೇಶದ ಪೂರ್ವಭಾಗ ಸುಮೇರಿಯನ್ನರಿಗೂ ಉತ್ತರಭಾಗ ಸಿಮಿಟಿಕ್ ವಂಶದ ಅಕ್ಕೇಡಿಯನ್ನರಿಗೂ ಸೇರಿದ್ದುವು. ಕಾಲಕ್ರಮೇಣ ದಕ್ಷಿಣ ಪಥದ ಅಕ್ಕೇಡಿಯನ್ನರನ್ನು ಬ್ಯಾಬಿಲೋನಿಯನರೆಂದು ಛಾಲ್ಡಿಯನ್ನರೆಂದೂ ವಾಯುವ್ಯ ಪಥದಲ್ಲಿದ್ದವರನ್ನು ಅಸ್ಸೀರಿಯನ್ನರೆಂದೂ ಕರೆಯಲಾಯಿತು.
ಅಕ್ಕೆಡ್ ಪ್ರದೇಶದ ರಾಜನಾದ ಸಾರ್‍ಗಾನ್‍ನಿಂದ (ಕ್ರಿ.ಪೂ.೨೫೦೦) 'ಸುಮೇರಿಯನ್ನ'ರ[೨] ಕಡೆಯ ರಾಜನಾದ ಲೂಗಲ್‍ಜóಗ್ಗಿಸಿ ಪರಾಭವ ಹೊಂದಿದ ಅನಂತರ ಸಿಮಿಟಿಕ್ ರಾಜವಂಶದ ಆಳ್ವಿಕೆ ಪ್ರಾರಂಭವಾಯಿತು. ಸಿಮಿಟಿಕ್ ಅಕ್ಕೇಡಿಯನ್ನರ ವೈಭವ ಹಮ್ಮುರಾಬಿ ಆಳ್ವಿಕೆಯಲ್ಲಿ ಶಿಖರಕ್ಕೇರಿತು. ಅವನ ಕಾಲದಲ್ಲಿ ಪಿನಾಜೆಗೆ ಬೇಬಿಲನ್ನೆಂದು ಹೆಸರಾಯಿತು. ಹಮ್ಮುರಾಬಿ ಯುಫ್ರಟಿಸ್ ತೀರದ ಮರಿ ಎನ್ನುವ ಪಟ್ಟಣವನ್ನು ಅದರ ಕಡೆಯ ರಾಜನಾದ ಜಿóರೀಲಿಂನಿಂದ ಗೆದ್ದು ಅವನ ವಂಶ ಪಾರಂಪರ್ಯದಲ್ಲಿ ಸಾವಿರಾರು ವರ್ಷಗಳಿಂದ ಹೊಳೆಯುತ್ತಿದ್ದ ಬಣ್ಣಗಳಿಂದ ಶೋಭಾಯಮಾನವಾಗಿ ಚಿತ್ರಿಸಲಾದ ಅರಮನೆಯ ಮತ್ತಿತರ ಕಲಾಕೃತಿಗಳನ್ನು ನಾಶ ಮಾಡಿದ. ಈ ಚಿತ್ರಗಳಲ್ಲಿ ಕೆಲವು ಗೋಡೆಯ ಮೇಲಿನವು (ಮೂರಲ್ಸ್) ಅಂದರೆ, ಯಜ್ಞಶಾಲೆಗೆ ಕರೆದೊಯ್ಯುವ ಗೂಳಿ, ಜಲ ಮತ್ತು ಅಗ್ನಿಯ ಯಜ್ಞ ಇಷ್ಟಾರ್‍ದೇವಿಯ ರಾಜ್ಯಾಭಿಷೇಕ ಮುಂತಾದುವು (ಇವು ಈಜಿಪ್ಟಿನ ಕಲೆಯನ್ನು ಹೋಲುವುವು). ಪ್ರತಿಮೆಗಳಲ್ಲಿ ಪೈಕಿ, ಎರಡು ಕೊಂಬುಗಳುಳ್ಳ ಶಿರಸ್ತ್ರಾಣವನ್ನು ಧರಿಸಿ ಕೈಂiÀಲ್ಲಿ ಕುಂಬವನ್ನು ಹಿಡಿದಿರುವ ದೇವಿಯ ಸ್ವರೂಪ ಇವೆಲ್ಲವೂ ಮುದ್ದಾಗಿವೆ. ಇವುಗಳಲ್ಲಿ ಚಿತ್ರಗಾರರ ನೈಜತೆ, ಸೌಲಭ್ಯ ಭಾವದೃಷ್ಟಿ, ರೇಖಾವಿಲಾಸಗಳು ಮನೋಹರವಾಗಿವೆ. ಆದರೆ ಇವೆಲ್ಲವೂ ಯಥಾರ್ಥ ದೃಷ್ಟಿಂiÀಲ್ಲಿಲ್ಲ. ಕೆಲವು ಸುಮೇರರ ಆಧ್ಯಾತ್ಮಕತೆಗೆ ಸಾಂಕೇತಿಕ. ಇದೇ ಕೌಶಲದಿಂದ ಪತಾಕದ ತ್ರಿಕೋಣದ ಕೊನೆಗಳಲ್ಲಿ, ಅದರ ನಾನಾವರ್ಣದ ಫಲಕಗಳಲ್ಲಿ ರಚಿಸಲಾದ ರೂಪಗಳ ವೈಶಿಷ್ಟ್ಯವನ್ನು ಕಾಣಬಹುದು.
ಉತ್ತರ, ವಾಯುವ್ಯ, ಈಶಾನ್ಯ ದಿಕ್ಕುಗಳಿಂದ ಬಂದ ಸುತ್ತಮುತ್ತಿನ ಬುಡಕಟ್ಟಿನ ಜನರಿಂದ ಸುಮಾರು ಕ್ರಿ.ಪೂ. ೨೦೦೦ದಲ್ಲಿ ಬಾಬಿಲೋನಿಯ ರಾಜ್ಯಕ್ಕೆ ತೋಂದರೆ ಉಂಟಾಯಿತು-ಹಿಟ್ಟೈಟರಿಂದ (ಕ್ರಿ.ಪೂ.೧೭೫೦), ವಾಯುವ್ಯದ ಕಾಶ್ಶೈಟ್ಟರಿಂದ (ಕ್ರಿ.ಪೂ. ೧೫೫೦). ಕ್ರಿ.ಪೂ. ೧೫೫೦ - ೧೧೬೯ರ ವರೆಗೂ ಬಾಬಿಲೋನಿಯ ಕಾಶ್ಶೈಟ್ಟರ ಆಡಳಿತದಲ್ಲಿದ್ದು ಸುಮಾರು ಕ್ರಿ.ಪೂ. ೧೦೦೦೦ದಲ್ಲಿ ಅಸ್ಸೀರಿಯನ್ನರು ಯುದ್ಧದಲ್ಲಿ ಚತುರರು. ಅವರ ಆಡಳಿತ ಈಜಿಪ್ಟ್ ಮೇಲೆ ಕ್ರಿ.ಪೂ. ೭೦೦ರಲ್ಲಿ ಹರಡಿತು. ಬಾಬಿಲೋನಿಯದಲ್ಲಿ ಜೇಡಿಮಣ್ಣು ಎಷ್ಟು ಹೇರಳವೋ ಅಸ್ಸೀರಿಯಾದಲ್ಲಿ ಕಲ್ಲು ಅಷ್ಟು ಹೇರಳವಾಗಿದ್ದು, ಅವರು ದೇವಸ್ಥಾನ (ಜಿಗ್ಗುರಾಟ್) ಅರಮನೆ ಮುಂತಾದ ಕಟ್ಟಡಗಳಲ್ಲಿ, ಅವುಗಳ ಅತ್ಯದ್ಭುತವಾದ ಭಿತ್ತಿಚಿತ್ರಗಳ ಉಬ್ಬಿದ ಶಿಲ್ಪಾಕೃತಿಗಳ ಶೃಂಗಾರದಲ್ಲಿ, ಜೀವನದ ವೈಭವ ಮತ್ತು ಆಡಂಬರದಲ್ಲಿ ತೊಡಗಲು ಅವಕಾಶವಾಯಿತು. ಇದರ ಪರಿಣಾಮ ಅವರ ಆಡಳಿತ ಸಡಿಲಿಸಿ ನಾಶವಾಯಿತು. ಈ ರಾಜ್ಯ ಪರ್ಷಿಯನ್ ರಾಜನಾದ ಸೈರಸ್‍ನಿಂದ ಪರಾಭವ (ಕ್ರಿ.ಪೂ.೩-೧೦-೫೩೮) ಹೊಂದುವವರೆಗೂ ವೈಭವದಿಂದ ಮೆರೆಯಿತು.
ಕಟ್ಟಡದ ನಿರ್ಮಾಣದಲ್ಲಿ, ಅದರ ಅಲಂಕಾರದಲ್ಲಿ, ಅಸ್ಸೀರಿಯನ್ನರು ಸುಮೇರಿಯನ್ನರಿಗಿಂತಲೂ, ದಕ್ಷಿಣ ಅಕ್ಕೇಡಿಯನ್ನರಿಗಿಂತಲೂ ಹೆಚ್ಚಾದ ನೈಪುಣ್ಯವನ್ನು ಸಾಧಿಸಿದರು. ಇವರ ಶೈಲಿ ವಿಶಿಷ್ಟ ರೂಪಗಳನ್ನು ತಾಳಿದ್ದರೂ ಬೇಬಿಲೋನಿಯ ಸಂಪ್ರದಾಯಕ್ಕೇ ಹೊಂದಿಕೊಂಡಿದೆ. ಚಿತ್ರಗಳು ಉಚ್ಚಮಟ್ಟವು. ಇವರು ಅಲಂಕಾರವನ್ನು ಅಂತಃಪುರಗಳಿಗೂ ಮಹಾದ್ವಾರಗಳಿಗೂ ಮಾನಸ್ತಂಭ ಮುಂತಾದ ಸ್ಮಾರಕ ಕಟ್ಟಡಗಳಿಗೂ ಹೆಚ್ಚಾಗಿ ಉಪಯೋಗಿಸಿದರು. ಸುಮೇರ್ ಅಕೇಡಿಯನ್ನರ ಪುರಾಣ, ಇತಿಹಾಸಗಳು ಅವರ ಸಾಂಕೇತಿಕಶಾಸ್ತ್ರದೊಂದಿಗೆ ಯುದ್ಧದ ದೃಶ್ಯಗಳು, ಅರಮನೆಯ ಕ್ರೀಡಾಚಟುವಟಿಕೆಗಳು, ಬೇಟೆ ಮುಂತಾದುವು ಹೇರಳವಾಗಿ ವಿವರಣೆ ಸಹಿತ ಚಿತ್ರಿಸಲಾಯಿತು.
ಕ್ರಿ.ಪೂ. ೬೮೯ರಲ್ಲಿ ಸೆನ್ನಚರೀಬ್ ಬ್ಯಾಬಿಲೋನಿಯವನ್ನು ನಾಶಮಾಡಿದರು ಅವನ ತರುವಾಯ ಬಂದ ರಾಜರಾದ ನೇಬೋಫೋಲಾಜ್ಹಾರ್ ಅವನ ಮಗ ಎರಡನೆಯ ನೇಬೂಛಡ್‍ನೆಜ್ಹಾರ್ ಇವರುಗಳಿಂದ ಪುನರುಜ್ಜೀವಿತವಾಯಿತು; ತನ್ನ ಕಲಾಔನ್ನತ್ಯವನ್ನು ಪುನಃ ಪಡೆಯಿತು (ಕ್ರಿ.ಪೂ. ೬೦೫ - ೫೬೨). ಬ್ಯಾಬಿಲೋನ್ ಪಟ್ಟಣದ ವೈಶಾಲ್ಯ ೧೫ ಮೈಲುಗಳ ಚತುರಸ್ರ; ಅದರ ತೂಗುದ್ಯಾನಗಳು; ಕಂದಕದ ಗೋಡೆಗಳು ೫೦ ಮೊಳಗಳ ದಪ್ಪ ೨೦೦ ಮೊಳಗಳ ಎತ್ತರ; ಅದರ ಮರ್ದೂರ್ ದೇವಾಲಯದ ಆವರಣದಲ್ಲಿ ಸುಮೇರರ ದೇವಾಲಯದಂತೆ ನಿರ್ಮಿತವಾದ ಏಳು ಅಂತಸ್ತಿನ ಜಿಗ್ಗುರಾಟ್ ದೇವಾಲಯ; ಅದರ ಪೂರ್ವಕ್ಕೆ ನಿರ್ಮಿಸಲಾದ ಪ್ರದಕ್ಷಿಣೆ ಕೈಸಾಲೆ; ಅದರ ಗೋಡೆಗಳ ಮೇಲೆ ಸುಟ್ಟ ಹೆಂಚುಗಳಿಂದ ಹಾಸಲಾದ ಹಿನ್ನೆಲೆಯಲ್ಲಿ ಚಿತ್ರಿಸಿದ ಸಿಂಹಗಳ ಶ್ರೇಣಿಗಳು; ಇಷ್ಟಾರ್ ಮಹಾದ್ವಾರದ ಮುಖದಲ್ಲಿ ಘೋರ ಸರ್ಪಾಕೃತಿಗಳಿಂದ ಕೂಡಿದ ಹೋರಿ ರೂಪಾಲಂಕಾರ; ಘನತರವಾದ ಇತರ ದೇವಾಲಯಗಳು, ಅರಮನೆಗಳು, ಮತ್ತು ಅವುಗಳ ಮೇಲ್ಮಟ್ಟದ ಶೃಂಗಾರ--ಇವೆಲ್ಲವೂ ಮರೆಯಲಾಗದ ಬೇಬಿಲೋನಿಯ ಅಸ್ಸಿರಿಯನ್ನರ ವೈಭವವನ್ನು ಸಾರುತ್ತವೆ. ಉಪಯೋಗಿಸಿದ ಬಣ್ಣಗಳ ಪೈಕಿ ಮುಖ್ಯವಾದುವು ಆಕಾಶ, ಊದಾ, ಮತ್ತು ಶ್ವೇತ ಬಣ್ಣಗಳು. ಈ ಚಿತ್ರಗಳು ಇಂದಿನ ಪೋಸ್ಟರ್ ಚಿತ್ರಗಳಂತೆ ಕಂಡುಬಂದರೂ ಅವುಗಳ ರೇಖಾವಿಲಾಸದ ನೈಜತೆ, ಲಾವಣ್ಯ ಪ್ರಶಂಸನೀಯವಾಗಿವೆ.
ಅಸ್ಸೀರಿಯನ್ನರ ಕಲೆಯಲ್ಲಿ ಅಂಗಸಂಯೋಗ, ಪರಿಮಾಣ, ವಿವಿಧ ರೂಪಗಳ ವಿವರಣೆ, ಬಣ್ಣಿಸಿದ ರೂಪಗಳಿಗೂ, ಬಣ್ಣಿಸದ ಖಾಲಿಜಾಗಗಳಿಗೂ ಇರುವ ಮಧುರಾತ್ಮಕ ಸಂಬಂಧ, ಉಡುಪುಗಳಲ್ಲಿ, ಒಡವೆಗಳಲ್ಲಿ ಪ್ರತ್ಯೇಕಿಸಲಾದ ರೇಖಾಲಂಕಾರ, ದೈಹಿಕ ವರ್ಣನೆ (ಹಣೆಯ ಸುಕ್ಕುಗಳು ಹಸ್ತರೇಖೆಗಳು) ಮುಂತಾದುವು ಮನೋಹರವಾಗಿವೆ. ಖಾಲಿ ಜಾಗದಲ್ಲಿ ವಿಷಯಾಂಶಕ್ಕೆ ಸೇರದ ಶೃಂಗಾರ ಅತ್ಯಲ್ಪ. ಇವರ ಕಲಾಧೋರಣೆಯಲ್ಲಿ, ಕೆಲಸದಲ್ಲಿ, ನಿಷ್ಠತೆ, ಘನತೆ ತುಂಬಿದೆ. ಮನುಷ್ಯಾಕೃತಿಗಳಲ್ಲಿ ಮಾಂಸಖಂಡಗಳ ಪಟುತ್ವ ಎದ್ದು ಕಾಣುತ್ತದೆ. ರಾಜರ ಆಕೃತಿಗಳಿಗೆ ಗರುಡನ ಪಕ್ಕೆಗಳನ್ನು ಜೋಡಿಸಿ ಅವುಗಳ ಬೆಡಗನ್ನು ಸಾಂಪ್ರಕಾಯಿಕ ಮುದ್ರೆ ಸಹಿತ ರೂಪಿಸಿದ್ದಾರೆ. ನರಸಿಂಹಾವತಾರದ ರಿತಿಯಲ್ಲಿ ಅವರ ದೈವಿಕ ಸ್ವರೂಪ ಮಾನುಷ ಮುಖವನ್ನೂ ಎತ್ತಿನ ಅಥವಾ ಸಿಂಹದ ದೇಹವನ್ನೂ ಗರುಡನ ಪಕೆÀ್ಕಗಳನ್ನೂ ಕೊಟ್ಟು ರಮಣೀಯವಾಗಿ ಚಿತ್ರಿಸಿದ್ದಾರೆ. ಉಬ್ಬುಕೆತ್ತನೆ ಕೆಲಸದಲ್ಲಿ ಅಸ್ಸೀರಿಯನ್ನರ ಶಿಲ್ಪಾಕೃತಿಗಳು ವಿಶೇಷವಾಗಿ ದುಂಡುದುಂಡಾದುವು ಬಹಳ ಕಡಿಮೆ. ಇವುಗಳಲ್ಲೆಲ್ಲ ಶಕ್ತಿಯುತವಾದ ಒಂದು ರೀತಿಯ ತೀವ್ರತೆ, ಹಿಂಸಾತ್ಮಕದೃಷ್ಟಿ, ಜೀವಕಳೆ, ತುಂಬಿತುಳುಕಾಡುತ್ತಿದ್ದರೂ ಅವು ಈಜಿಪ್ಷಿಯನ್ನರ ಶಿಲ್ಪಗಳಂತೆ ಶಾಂತತೆಯನ್ನಾಗಲೀ ಪ್ರಚಂಡಾಕೃತಿಯನ್ನಾಗಲೀ ಪರಾದೃಷ್ಟಿಯನ್ನಾಗಲೀ ಹೊಂದಿಲ್ಲ. ಗ್ರೀಕರ ಸೂಕ್ಷ್ಮ ಹಸ್ತ ಕೌಶಲ ಅವುಗಳಲಿಲ್ಲ. ಅಸ್ಸೀರಿಯನ್ನರ ಅತ್ಯಂತ ದೊಡ್ಡ ಆಕೃತಿ 18' ಎತ್ತರ ಮೀರಿಲ್ಲ. ಆದರೆ ಗಾಂಭೀರ್ಯ, ನಿರ್ದಿಷ್ಟ ಭಾವಸಂಪತ್ತು ಅವಕ್ಕಿವೆ. ಅಸ್ಸಿರಿಯನ್ನರ ಅಲಂಕಾರ ಧೋರಣೆಗಳನ್ನು ಗ್ರೀಕರ ಶಿಲ್ಪಾಕೃತಿಗಳು ಉದ್ಯೋಗದಲ್ಲಿ ಹಿರಿಮೆಯನ್ನು ಸಾಧಿಸಿದರೆ, ಅಸ್ಸೀರಿಯನ್ನರ ಶಿಲ್ಪ ಭಾವಸಂಪತ್ತನ್ನು ಹೊಂದಿದೆ.
(ಪಿ.ಎಸ್.)
ಉಲ್ಲೇಖಗಳು
ಬದಲಾಯಿಸಿ