ಅಸ್ವಾಳ್ ಎಂಬುದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಒಂದು ಗ್ರಾಮ. ಆ ಗ್ರಾಮದ ಪಿನ್ ಕೋಡ್ ೫೭೧೧೦೮ ಆಗಿದೆ.

ಹೆಸರಿನ ಮೂಲ ಬದಲಾಯಿಸಿ

ಲೇಖಕ ಚದುರಂಗ ಅವರ ಒಂದು ಕಾದಂಬರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ, "ಹಸನಾದ ಬಾಳು" ಎಂಬ ಹೆಸರು ಈಗ ಅಸ್ವಾಳ್ ಎಂದು ಬದಲಾಗಿದೆ ಎಂದು ತಿಳಿಯುತ್ತದೆ.

ಸ್ಥಳದ ವಿವರ ಬದಲಾಯಿಸಿ

ಮೈಸೂರು ಜಿಲ್ಲೆಯಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ ಈ ಗ್ರಾಮ. ಮೈಸೂರಿನ ಬೋಗಾದಿ ಇಂದ ಗದ್ದಿಗೆ ರಸ್ತೆಯಲ್ಲಿ ಸಾಗಿದರೆ, ಈ ಗ್ರಾಮವನ್ನು ತಲುಪಬಹುದು.

ಇತರ ವಿವರಗಳು ಬದಲಾಯಿಸಿ

ಇಲ್ಲಿನ ಬಹುತೇಕ ಜನರು ಬೇಸಾಯವನ್ನೇ ಅವಲಂಬಿಸಿದ್ದಾರೆ. ಬೆಳೆಯುವ ಬೆಳೆಗಳೆಂದರೆ ಜೋಳ, ಕಬ್ಬು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲಲ್ಲಿ ಕೆರೆಗಳಿವೆ. ಒಂದು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದೆ. ಸರಿಯಾದ ವಿದ್ಯುತ್ ಸಂಪರ್ಕ ಇಲ್ಲ. ಈ ಊರಿನಲ್ಲಿ ಜಿ.ಎಚ್.ಪಿ.ಎಸ್ ಉರ್ದು ಶಾಲೆ ಇದೆ. ಇದು ೧೯೬೫ ನೇ ವರ್ಷದಲ್ಲಿ ಸ್ಥಾಪಿಸಲಾಯಿತು. ಜಿ.ಎಚ್.ಪಿ.ಎಸ್ ಉರ್ದು ಶಾಲೆಯ ನಿರ್ವಹಣೆಯ ಶಿಕ್ಷಣ ಇಲಾಖೆ ಹೊಂದಿದೆ. ಇಲ್ಲಿ ಮಾಧ್ಯಮವು ಉರ್ದು ಭಾಷೆಯಾಗಿದೆ.

"https://kn.wikipedia.org/w/index.php?title=ಅಸ್ವಾಳ್&oldid=719383" ಇಂದ ಪಡೆಯಲ್ಪಟ್ಟಿದೆ