ಅಷ್ಟಾಂಗಿಕ ಮಾರ್ಗ
'ಅಷ್ಟಾಂಗಿಕ ಮಾರ್ಗ' ಎಂದರೆ ಬೌದ್ದ ಧರ್ಮದ ಒಂದು ಪ್ರಮುಖ ಸಿದ್ಧಾಂತ.ಇದು ಬೌದ್ಧ ಧರ್ಮದಲ್ಲಿ ಬಳಕೆಯಲ್ಲಿರುವ ಧರ್ಮಚಕ್ರದ ಎಂಟು ಅರೆಗಳಾಗಿವೆ. ಅಷ್ಟಾಂಗ ಮಾರ್ಗಗಳಂದರೆ ಒಳ್ಳೆಯ ನಡತೆ, ಒಳ್ಳೆಯ ಯೊಚನೆ, ಒಳ್ಳೆಯ ಮಾತು ಒಳ್ಳೆಯ ಕೆಲಸ ಕಾಯಕಗಳನ್ನು ಅನುಸರಿಸಿಬೇಕಾಗುತ್ತದೆ. ಹೀಗೆ ಬೌದ್ದಧರ್ಮದ ಅಷ್ಟಾಂಗ ಮಾರ್ಗಗಳಾಗಿದೆ ಎಂದು ಹೇಳ ಬಹುದಾಗಿರುತ್ತದೆ. ಅಷ್ಟಾಂಗ ಮಾರ್ಗ - ಒಳ್ಳೆಯ ನಂಬಿಕೆ, ಪ್ರಯತ್ನ
ವಿಭಾಗಗಳು
ಬದಲಾಯಿಸಿಶ್ರೇಷ್ಠ ಅಷ್ಟಾಂಗಿಕ ಮಾರ್ಗವನ್ನು ಕೆಲವೊಮ್ಮೆ ಈ ಕೆಳಗಿನಂತೆ ಮೂರು ಮುಖ್ಯ ಗುಂಪುಗಳಾಗಿ ವಿಭಾಗಿಸುತ್ತಾರೆ:[೧][೨]
ವಿಭಾಗಗಳು | ಅಷ್ಟಾಂಗಿಕ ಮಾರ್ಗ | ಸಂಪಾದಿಸಿದ ಅಂಶಗಳು |
---|---|---|
ಪ್ರಜ್ಞೆ (ಸಂಸ್ಕೃತ: ಪ್ರಜ್ಞಾ, ಪಾಲಿ: ಪನ್ನಾ) | 1. ಸರಿಯಾದ ದೃಷ್ಟಿ | 9. ಶ್ರೇಷ್ಠವಾದ ಸರಿಯಾದ ಜ್ಞಾನ |
2. ಸರಿಯಾದ ಉದ್ದೇಶ | 10. ಶ್ರೇಷ್ಠವಾದ ಮುಕ್ತಿ | |
ಶೀಲ (ಸಂಸ್ಕೃತ: ಶೀಲ, ಪಾಲಿ: ಸೀಲ) | 3.ಸರಿಯಾದ ವಾಕ್ಕು | |
4. ಸರಿಯಾದ ಕಾರ್ಯ | ||
5. ಸರಿಯಾದ ಬಾಳುವೆ | ||
ಸಮಾಧಿ ಸ್ಥಿತಿ(ಸಂಸ್ಕೃತ ಮತ್ತು ಪಾಲಿ: ಸಮಾಧಿ) | 6. ಸರಿಯಾದ ಪ್ರಯತ್ನ | |
7. ಸರಿಯಾದ ಎಚ್ಚರಿಕೆ | ||
8. ಸರಿಯಾದ ಸಮಾಧಿಸ್ಥಿತಿ |
-
- ೪. ದುಃಖ ನಿರೋಧ ಗಾಮಿನಿ ಪ್ರತಿಪತ್ : ದುಃಖವನ್ನು ನಿರೋಧಿಸಲು ಮಾರ್ಗವಿದೆ-ಎಂಬ ಸತ್ಯ. >
- ಸುಖ ಲೋಲುಪತೆ ,- ಅತಿ ದೇಹ ದಂಡನೆ, ಈ ಎರಡರ ಬದಲು ಮಧ್ಯಮಾರ್ಗ ಉತ್ತಮವಾದುದು. ಅದಕ್ಕೆ ಎಂಟು ಮೆಟ್ಟಿಲು.
- ಆರ್ಯ ಅಷ್ಟಾಂಗಿಕ ಮಾರ್ಗ
- ಅವು : ಸವ್ಮ್ಯಕ್ ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು); ಸಮ್ಯಕ್ ಸಂಕಲ್ಪ (ದೃಢ ನಿಶ್ಚಯ) : ಸಮ್ಯಕ್ ವಚನ (ಸತ್ಯ ವಚನ) : ಸಮ್ಯಕ್ ಕರ್ಮಾಂತ (ಅಹಿಂಸೆ - ಸತ್ಕರ್ಮ) ; ಸಮ್ಯಕ್ ಆಜೀವ (ನ್ಯಾಯ ಜೀವನ) ; ಸಮ್ಯಕ್ ವ್ಯಾಯಾಮ (ಸತತ ಪ್ರಯತ್ನ) ; ಸಮ್ಯಕ್ ಸ್ಮ ತಿ (ಸತ್ ಚಿಂತನೆ) ; ಮತ್ತು ಸಮ್ಯಕ್ ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ) ಇವು ಆರ್ಯ ಅಷ್ಟಾಂಗಿಕ ಮಾರ್ಗ. ಇದರಿಂದ ಮೋಕ್ಷ . ದಮ್ಮಪದದಲ್ಲಿ ಮೂರು ಮಾರ್ಗ ಹೇಳಿದೆ. ಅವು : ಪಾಪಾಕರಣ ; ಪುಣ್ಯ ಸಂಚಯ ; ಚಿತ್ತ ಪರಿಶುದ್ಧಿ . ಇವನು (ಗೌತಮ ಬುದ್ಧ) ಭವ ರೋಗಕ್ಕೆ ವ್ಶೆದ್ಯ ಶಾಸ್ತ್ರದ ನಿಯಮದಂತೆ ಪರಿಹಾರ ಹೇಳಿರುವುದರಿಂದ ಗೌತಮ ಬುದ್ಧನಿಗೆ -ಮಹಾಭಿಷಕ್ ಎಂದರೆ ವ್ಶೆದ್ಯರಾಜನೆಂದಿದೆ (ವ್ಶೆದ್ಯ ಶಾಸ್ತ್ರದ ನಿಯಮ- ರೋಗ, ರೋಗಮೂಲ, ನಿರೋಧ, ಬೈಷಜ ಎಂದರೆ ಔಷಧಿ)
ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Culavedalla S".
- ↑ Bhikkhu Bodhi. "The Noble Eightfold Path: The Way to the End of Suffering". Access to Insight. Retrieved 2010-07-10.