ಅಷ್ಟಮಹಾಸಿದ್ಧಿಗಳು

ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. ಇವನ್ನು ಎಂಟೆಂದು ಪರಿಗಣಿಸಿದ್ದಾರೆ

ಇವು ಯಾವುವೆಂದರೆ

  1. ಅಣಿಮಾ (ಅತಿ ಸಣ್ಣ ಆಕಾರವನ್ನು ಪಡೆಯುವುದು)
  2. ಮಹಿಮಾ (ಅತಿ ದೊಡ್ಡ ಆಕಾರವನ್ನು ಪಡೆಯುವುದು)
  3. ಗರಿಮಾ (ತುಂಬ ಭಾರವಾಗುವುದು)
  4. ಲಘಿಮಾ (ತುಂಬ ಹಗುರವಾಗಿ ಗಾಳಿಯಲ್ಲಿ ಹಾರಾಡುವುದು)
  5. ಪ್ರಾಪ್ತಿ (ಸಾಮಾನ್ಯವಾಗಿ ಪಡೆಯಲಾರದುದನ್ನು ಪಡೆಯುವುದು)
  6. ಪ್ರಾಕಾಮ್ಯ (ಸ್ವಲ್ಪವಾಗಿರುವ ಪದಾರ್ಥವನ್ನು ಹೆಚ್ಚಿಸುವ ಶಕ್ತಿ)
  7. ಈಶಿತ್ವ (ಎಲ್ಲ ಸಂದರ್ಭ ಗಳಲ್ಲಿಯೂ ಒಡೆತನವನ್ನು ಮಾಡಿ ತನ್ನ ಪ್ರಭಾವವನ್ನು ಬೀರುವುದು)
  8. ವಶಿತ್ವ (ಇಂದ್ರಿಯಗಳನ್ನು ನಿಯಮನ ಮಾಡಿಕೊಳ್ಳುವುದು)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: