ಅವಲುಮ್ ಪೆನ್ ತಾನೆ
ಅವಲುಮ್ ಪೆನ್ ತಾನೆ (ಅನುವಾದ: ಅವಳೂ ಹೆಣ್ಣು ತಾನೆ) ೧೯೭೪ ರ ಭಾರತೀಯ ತಮಿಳು ಭಾಷೆಯ ಚಲನಚಿತ್ರವಾಗಿದ್ದು, ದುರೈ ಅವರು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುಮಿತ್ರಾ, ಆರ್.ಮುತ್ತುರಾಮನ್ ಮತ್ತು ಎಂ.ಆರ್.ಆರ್.ವಾಸು ನಟಿಸಿದ್ದಾರೆ. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿತು. [೧] [೨]
ಅವಲುಮ್ ಪೆನ್ ತಾನೆ | |
---|---|
ಚಿತ್ರ:Avalum Penn Thaane.jpg | |
Directed by | ದುರೈ |
Written by | ದುರೈ |
Produced by | ಪಂಡರಿ ಬಾಯಿ |
Starring | ಸುಮಿತ್ರಾ ಆರ್.ಮುತ್ತುರಾಮನ್ ಎಂ.ಆರ್.ಆರ್. ವಾಸು ಪಂಡರಿ ಬಾಯಿ |
Cinematography | ಮನೋಹರ್ |
Edited by | ಎಂ.ಉಮಾನಾಥ್ |
Music by | ವಿ.ಕುಮಾರ್ |
Production company | ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ |
Release date | 13 ಡಿಸೆಂಬರ್ 1974 |
Running time | 164 ನಿಮಿಷಗಳು |
Country | ಭಾರತ |
Language | ತಮಿಳು |
ಪಾತ್ರವರ್ಗ
ಬದಲಾಯಿಸಿಸೀತೆಯಾಗಿ ಸುಮಿತ್ರಾ
ಮುತ್ತು ಪಾತ್ರದಲ್ಲಿ ಆರ್.ಮುತ್ತುರಾಮನ್
ಸೀತಾಳ ದಲ್ಲಾಳಿ ಪಾತ್ರದಲ್ಲಿ ಎಂ.ಆರ್.ಆರ್.ವಾಸು
ಉಮಾ ಅವರ ತಂದೆಯಾಗಿ ಎಸ್.ವಿ.ಸಹಸ್ರನಾಮಂ
ಮುತ್ತುವಿನ ತಾಯಿಯಾಗಿ ಪಂಡರಿ ಬಾಯಿ
ತೆಂಗೈ ಶ್ರೀನಿವಾಸನ್
ವಿ.ಕೆ. ರಾಮಸ್ವಾಮಿ
ರುಕು ಪಾತ್ರದಲ್ಲಿ ಕೆ.ಆರ್.ಇಂದಿರಾ ದೇವಿ
ಮನೋರಮಾ
ಎಸ್.ವಿ.ರಾಮದಾಸ್
ಸುಬ್ಬು ಪಾತ್ರದಲ್ಲಿ ಎಂ.ಎನ್.ರಾಜಂ
ಮೈನಾವತಿ
ಉಮಾ ಪಾತ್ರದಲ್ಲಿ ರಾಮಪ್ರಭಾ
ಪೊನ್ನಮ್ಮನಾಗಿ ಗಾಂಧಿಮತಿ [೩]
ಉತ್ಪಾದನೆ
ಬದಲಾಯಿಸಿಅವಲುಮ್ ಪೆನ್ ತಾನೆ ದುರೈ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಚಿತ್ರಕಥೆಯನ್ನೂ ಅವರೆ ಬರೆದಿದ್ದಾರೆ. [೪] ಇದನ್ನು ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪಂಡರಿ ಬಾಯಿ ನಿರ್ಮಿಸಿದ್ದರು. ಅವರು ಈ ಚಿತ್ರದಲ್ಲಿ ಆರ್.ಮುತ್ತುರಾಮನ್ ಅವರ ಪಾತ್ರದ ತಾಯಿಯಾಗಿಯೂ ನಟಿಸಿದ್ದಾರೆ. ಸುಮಿತ್ರಾ ಈ ಚಿತ್ರದಲ್ಲಿ ವೇಶ್ಯೆಯ ಪಾತ್ರವನ್ನು ನಿರ್ವಹಿಸುವ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. [೫]ಈ ಚಿತ್ರವು ಮನೋಹರ್ ಅವರ ಛಾಯಾಗ್ರಹಣವನ್ನು ಹೊಂದಿತ್ತು ಮತ್ತು ಇದನ್ನು ಎಂ.ಉಮಾನಾಥ್ ಸಂಪಾದಿಸಿದರು. ವಿಕ್ರಮ್ ಮತ್ತು ವಾಸು ಸ್ಟುಡಿಯೋದಲ್ಲಿ ಈ ಸಿನೆಮಾದ ಚಿತ್ರೀಕರಣ ನಡೆಯಿತು. [೬] ಸಹಾಯಕ ನಿರ್ದೇಶಕರಾಗಿದ್ದ ದಿನಗಳಲ್ಲಿ ದುರೈ ಅವರು ಮೈಸೂರಿನಲ್ಲಿ ಚಿತ್ರೀಕರಣದಲ್ಲಿದ್ದಾಗ, ಅಲ್ಲಿ ವೇಶ್ಯೆಯರ ಗುಂಪು ಅವಕಾಶಕ್ಕಾಗಿ ಹುಡುಕುತ್ತಿರುವ ಸಿಬ್ಬಂದಿಯನ್ನು ನೋಡುತ್ತಿರುವುದನ್ನು ನೋಡಿದಾಗ ಈ ಪರಿಕಲ್ಪನೆಗೆ ಸ್ಫೂರ್ತಿ ಸಿಕ್ಕಿತು, ಇದಕ್ಕೆ ದುರೈ ಅವರ ಬಗ್ಗೆ ಸಹಾನುಭೂತಿ ಹೊಂದಿದ್ದರು ಮತ್ತು ಇದು ಅವಲುಮ್ ಪೆನ್ ತಾನೆಗೆ ಆಧಾರವಾಯಿತು. ದುರೈ ಚಿತ್ರವನ್ನು ಲಘುವಾಗಿ ಕೊನೆಗೊಳಿಸಲು ಬಯಸಿದರೂ, ಮದುವೆಯ ನಂತರ ಹುಡುಗಿ ಹೊಸದಾಗಿ ಹೊಸ ಜೀವನವನ್ನು ಪ್ರಾರಂಭಿಸುವ ತೀರ್ಮಾನವನ್ನು ಪ್ರೇಕ್ಷಕರು ತಿರಸ್ಕರಿಸುತ್ತಾರೆ ಎಂದು ವಿತರಕರು ಪಟ್ಟುಹಿಡಿದರು, ಆದ್ದರಿಂದ ದುರೈ ಇಷ್ಟವಿಲ್ಲದೆ ಚಿತ್ರವನ್ನು ದುರಂತ ರೀತಿಯಲ್ಲಿ ಕೊನೆಗೊಳಿಸಿದರು. [೭]
ಸೂಕ್ಶ್ಮ ಕಥೆ
ಬದಲಾಯಿಸಿಅವಲುಮ್ ಪೆನ್ ಥಾನೆ ಲೈಂಗಿಕ ವೃತ್ತಿಗೆ ಒತ್ತಾಯಿಸಲ್ಪಟ್ಟು, ಅನಾಥಳಾಗಿ ನಂತರ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಕಥೆಯಾಗಿದೆ. ಮೊದಲಿಗೆ ಒ೦ದು ಹೆಣ್ಣು ಒಂದು ದುಃಸ್ವಪ್ನದಿಂದ ತಪ್ಪಿಸಿಕೊಂಡು ಮತ್ತೊಂದು ದುಃಸ್ವಪ್ನದಲ್ಲಿ ತನ್ನನ್ನು ಕಂಡುಕೊಳ್ಳುವ , ತದನ೦ತರ ಲೈಂಗಿಕ ಕೆಲಸಕ್ಕೆ ಒತ್ತಾಯಿಸಲ್ಪಡುವ ಯುವತಿಯ ಕಥೆಯಾಗಿದೆ. ಅವಳು ಒಳ್ಳೆಯ ಹೃದಯದ ವ್ಯಕ್ತಿಯನ್ನು ಪ್ರೀತಿಸುತ್ತಾಳೆ ಮತ್ತು ಅವನನ್ನು ಮದುವೆಯಾಗುತ್ತಾಳೆ. ಅವಳ ಅತ್ತೆ ಕೂಡ ಅವಳನ್ನು ಸ್ವೀಕರಿಸುತ್ತಾಳೆ. ಆದರೆ ದುರೈ ತನಗೆ ಜೀವನದಲ್ಲಿ ಎರಡನೇ ಅವಕಾಶವನ್ನು ನೀಡಲಾಗಿದೆ ಎಂದು ತೋರಿಸಲು ಬಯಸಿದ್ದರು ಮತ್ತು ಆ ಪಾತ್ರಕ್ಕೆ ಉತ್ತಮ ಜೀವನವನ್ನು ನೀಡಲು ಬಯಸಿದ್ದರು. ಆದರೆ, ಸಿನೆಮಾ ವಿತರಕರು ಇದಕ್ಕೆ ಒಪ್ಪಲಿಲ್ಲ. ಅವರು ನಿರ್ದೇಶಕರನ್ನು ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸುವಂತೆ ಮಾಡಿದರು ಮತ್ತು ಅವಳು ಉತ್ತಮ ಜೀವನವನ್ನು ನಡೆಸುವುದನ್ನು ತೋರಿಸಿದರೆ ಪ್ರೇಕ್ಷಕರು ಖ೦ಡಿತವಾಗಿಯೂ ಸ್ವೀಕರಿಸುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಬದಲಾಗಿ, ಚಲನಚಿತ್ರವು ದುರಂತ ಅಂತ್ಯವನ್ನು ತೋರಿಸುತ್ತದೆ, ಅಲ್ಲಿ ಅವಳು ಬೇರೆ ದಾರಿ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. [೮]
ಸಂಗೀತ
ಬದಲಾಯಿಸಿಈ ಸಿನೆಮಾಕ್ಕೆ ವಿ.ಕುಮಾರ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನು ವಾಲಿ ಅವರು ಬರೆದಿದ್ದಾರೆ. ಹಿನ್ನೆಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲಾ ಮತ್ತು ಕೆ.ಜಮುನಾ ರಾಣಿ. [೯]ಈ ಚಿತ್ರದಲ್ಲಿ ಕೇವಲ ಎರಡು ಹಾಡುಗಳಿದ್ದವು. [೧೦]
ಸ್ವೀಕಾರ
ಬದಲಾಯಿಸಿಅವಲುಮ್ ಪೆನ್ ತಾನೆ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಕಂಡಿತು. [೧೧] ಕಲ್ಕಿಯ ಕಾಂತನ್ ಅವರು ಮುತ್ತುರಾಮನ್, ಸುಮಿತ್ರಾ, ಎಂ.ಆರ್.ಆರ್.ವಾಸು ಅವರ ಅಭಿನಯವನ್ನು ಶ್ಲಾಘಿಸಿದರು ಮತ್ತು ದುರೈ ಬರೆದ ಸಂಭಾಷಣೆಗಳಿಗೆ ನೂರು ಅಂಕಗಳನ್ನು ನೀಡಬೇಕು ಎಂದು ಬಯಸಿದ್ದರು. ಅವರು ಈ ಚಿತ್ರವನ್ನು ಧೈರ್ಯದಿಂದ ಕಲ್ಪಿತ ಚಿತ್ರ ಅಥಾವ ಕಾಲ್ಪನಿಕ ಎಂದು ಕರೆದರು ಮತ್ತು ನಟನೆ ಮತ್ತು ನಿರ್ದೇಶನದ ಬೆಂಬಲದಿಂದಾಗಿ A one ಪ್ರಮಾಣೀಕೃತ ಚಿತ್ರಕ್ಕೆ ಅಭಿಮಾನಿಗಳು ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ತೀರ್ಮಾನಿಸಿದರು. [೧೨]
ಉಲ್ಲೇಖಗಳು
ಬದಲಾಯಿಸಿ- ↑ Rajadhyaksha, Ashish; Willemen, Paul (1998) [1994]. Encyclopaedia of Indian Cinema. British Film Institute and Oxford University Press. p. 420. ISBN 0-19-563579-5.
- ↑ Guy, Randor (31 August 2017). "Avalum Penn Thaane (1974)". The Hindu. Archived from the original on 2 September 2017. Retrieved 2 September 2017.
- ↑ Rajadhyaksha, Ashish; Willemen, Paul (1998) [1994]. Encyclopaedia of Indian Cinema. British Film Institute and Oxford University Press. p. 420. ISBN 0-19-563579-5.
- ↑ Rajadhyaksha, Ashish; Willemen, Paul (1998) [1994]. Encyclopaedia of Indian Cinema. British Film Institute and Oxford University Press. p. 420. ISBN 0-19-563579-5.
- ↑ Guy, Randor (31 August 2017). "Avalum Penn Thaane (1974)". The Hindu. Archived from the original on 2 September 2017. Retrieved 2 September 2017.
- ↑ Guy, Randor (31 August 2017). "Avalum Penn Thaane (1974)". The Hindu. Archived from the original on 2 September 2017. Retrieved 2 September 2017
- ↑ "உதவுபடியான உருவகங்கள்". Kalki (in Tamil). 22 April 1979. pp. 55–56. Archived from the original on 14 March 2023. Retrieved 14 March 2023.
- ↑ https://www.news18.com/movies/when-durai-had-to-give-a-tragic-ending-to-his-1974-film-avalum-penn-thaane-because-8703422.html
- ↑ Guy, Randor (31 August 2017). "Avalum Penn Thaane (1974)". The Hindu. Archived from the original on 2 September 2017. Retrieved 2 September 2017.
- ↑ askaran, S. Theodore (1996). The Eye of the Serpent: An Introduction to Tamil Cinema. East West Books. pp. 144–145. OCLC 243920437.
- ↑ Guy, Randor (31 August 2017). "Avalum Penn Thaane (1974)". The Hindu. Archived from the original on 2 September 2017. Retrieved 2 September 2017.
- ↑ காந்தன் (2 February 1975). "அவளும் பெண்தானே". Kalki (in Tamil). p. 43. Archived from the original on 27 July 2022. Retrieved 30 November 2022