ಅಲ್ ಉಬೈದ್
ಮೆಸಪೊಟೇಮಿಯದ ಪುರಾತನ ಸಂಸ್ಕೃತಿಗಳಲ್ಲಿ ಒಂದು. ಇರಾಕ್‌ನ ಅಲ್ ಉಬೈದ್ ಗ್ರಾಮದ ಬಳಿ ನಡೆದ ಭೂ ಸಂಶೋಧನೆಯಿಂದ ಮೊದಲು ಗುರುತಿಸಲ್ಪಟ್ಟಿತು. ಪ್ರ.ಶ.ಪೂ. 4000 ವರ್ಷಗಳ ಸುಮಾರಿನಲ್ಲಿ ದಕ್ಷಿಣ ಭಾಗದಿಂದ ಮೆಸಪೊಟೇಮಿಯಕ್ಕೆ ವಲಸೆ ಬಂದ ಈ ಸಂಸ್ಕೃತಿಯ ಜನರಿಗೆ ಲೋಹದ ಉಪಯೋಗ ಅಲ್ಪಸ್ವಲ್ಪ ತಿಳಿದಿತ್ತು. ಚಕ್ರದ ಬಳಕೆಯಲ್ಲದೆ ಕೈಯಿಂದ ಮಡಕೆಗಳನ್ನು ಮಾಡುವ ವಿಧಾನವೂ ಇವರಿಗೆ ತಿಳಿದಿತ್ತು. ಮಣ್ಣಿನ ಇಟ್ಟಿಗೆಯ ತಯಾರಿಕೆ, ದೇವಾಲಯಗಳ ಕಟ್ಟಡ ಮುಂತಾದುವನ್ನು ರೂಢಿಗೆ ತಂದ ಈ ಜನ ಮೆಸಪೊಟೇಮಿಯದ ನಾಗರಿಕತೆಗೆ ಅಡಿಗಲ್ಲು ಹಾಕಿದರೆಂದು ಹೇಳಬಹುದು.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: