ಅಲ್ಫಾ ಸೆಂಟಾರಿ
ನಕ್ಷತ್ರ ಪುಂಜ
'ಅಲ್ಫಾ ಸೆಂಟಾರಿ' ಸೆಂಟಾರಸ್ ನಕ್ಷತ್ರಪುಂಜದಲ್ಲಿರುವ ಅತ್ಯಂತ ಕಾಂತಿಯುತವಾದ ಒಂದೇ ನಕ್ಷತ್ರದಂತೆ ಗೋಚರಿಸುವ ನಕ್ಷತ್ರಗಳ ಗುಂಪು. ಇದರಲ್ಲಿ ಭಿನ್ನ ಕಾಂತಿಯ ಮೂರು ನಕ್ಷತ್ರಗಳಿವೆ.ಅಲ್ಫಾ ಸೆಂಟಾರಿ -ಎ ಮತ್ತು ಅಲ್ಫಾ ಸೆಂಟಾರಿ-ಬಿ ಯು ಪರಸ್ಪರ ಗುರುತ್ವಾಕರ್ಶಣೆಯಿಂದ ಅತ್ಯಂತ ಸಮೀಪವಾಗಿ ಹಿಡಿದಿಡಲ್ಪಟ್ಟು ಜೋಡಿ ನಕ್ಷತ್ರ(Binary star)ಗಳಾಗಿದ್ದರೆ ಪ್ರಾಕ್ಸಿಮಾ ಸೆಂಟಾರಿ ಎಂಬ ಮೂರನೆ ನಕ್ಷತ್ರ ಸ್ವಲ್ಪ ದೂರದಲ್ಲಿದೆ. ಈ ನಕ್ಷತ್ರಗಳ ಗುಂಪು ಭೂಮಿಯಿಂದ ೪.೩ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ.ಇವುಗಳನ್ನು ಧಕ್ಷಿಣ ಗೋಳಾರ್ಧದಿಂದ ಮಾತ್ರವೇ ನೋಡಲು ಸಾದ್ಯ. ಈ ಅಲ್ಫಾ ಸೆಂಟಾರಿ ನಕ್ಷತ್ರಗಳ ಗುಂಪು ನಮ್ಮ ಸೌರವ್ಯೂಹವನ್ನು ಸೆಕೆಂಡಿಗ ಸುಮಾರು ೨೩ ಕಿಲೋಮೀಟರ್ ವೇಗದಿಂದ ಸಮೀಪಿಸುತ್ತಿವೆ.