ಅಲಂಕಾರದ ಎಲೆಸಸ್ಯ. ಹಬ್ಬುವ (ಕ್ರೀಪಿಂಗ್) ಗುಪ್ತ ಕಾಂಡವಿದೆ. ಎಲೆ ನೀಳಾಕಾರ, ನಯವಾದ ಅಂಚು, ಮೊನಚು ಅಥವಾ ಲಂಬಾಗ್ರ ತುದಿ. ಮಿಶ್ರ ಹೂಗೊಂಚಲು, ಹೂ ಎಲೆ ಹೂ ದಳ ಕೂಡಿಕೆ 6, ಎರಡು ವೃತ್ತ, ಮೊದಲನೆಯ ವೃತ್ತ 3, ಕೊಳವೆ ಆಕಾರದ ಎರಡನೆಯ ವೃತ್ತ 3. ಅಸಮಭಾಗ ಕೆಳಭಾಗ ದೊಡ್ಡದು; ಮತ್ತು ಉಳಿದ ಎರಡು ಪಕ್ಕ ಭಾಗ ಸಮ. ಈ ಅಸಮ ಭಾಗಗಳಿಂದ ಕೂಡಿದ ಹೂವು ಬಲು ಸುಂದರ. ಕೇಸರಗಳು 2; ಇವುಗಳಲ್ಲಿ ಒಂದು ಅಗಲವಾದ ದಳಕೇಸರ, ಇನ್ನೊಂದು ಸಣ್ಣ ಬಂಜೆ ಕೇಸರ. ಹಣ್ಣುಮೂರು ಕೋಶದ ಕ್ಯಾಪ್ಸೂಲ್. ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಕುಂಡಗಳಲ್ಲಿಯೂ ತೇವಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಸಬಹುದು. ಅಲ್ಪಿನಿಯ ಸ್ಯಾಂಕಿರೆ (ನ್ಯೂಗಿನಿಯದ ಮೂಲವಾಸಿ), ಅಲ್ಪನಿಯ ಗಲಾಂಗ, ಅಲ್ಪನಿಯ ಸ್ಪಿಸೀಯೋಸ ಮುಖ್ಯ ಪ್ರಭೇದಗಳು. ಅಲ್ಪಿನಿಯ ಕುಲದಲ್ಲಿ 150 ಬಹುವಾರ್ಷಿಕ ಜಾತಿ ಪರ್ಣಸಸಿಗಳಿವೆ. ಈ ಸಸ್ಯಗಳನ್ನು ಗುಪ್ತಕಾಂಡ ತುಂಡುಗಳಿಂದ ಸುಲಭವಾಗಿ ವೃದ್ಧಿಸಬಹುದು. ಹೆಚ್ಚು ಫಲವತ್ತಾದ ಮಣ್ಣಿನಲ್ಲಿ ಬೆಳೆಸಿದರೆ, ಎಲೆಗಳ ಮೇಲೆ ಅಲಂಕಾರದ ಬಣ್ಣದ ಗೆರೆಗಳು ನಶಿಸಿಹೋಗುತ್ತವೆ. ಜೌಗಿಲ್ಲದ ಸದಾ ತೇವವಾಗಿರುವ ಸ್ಥಿತಿ ಅನುಕೂಲಕರ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: