ಅಲೋಪತಿ
ಅಲೋಪತಿ ಈ ಶಬ್ದವನ್ನು ಹೋಮಿಯೋಪತಿ ಪದ್ಧತಿಯ ಸ್ಥಾಪಕ ಸ್ಯಾಮ್ಯುಯೆಲ್ ಹಾನಿಮನ್ ಪ್ರಥಮವಾಗಿ ಆ ಕಾಲದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಬಳಕೆಯಲ್ಲಿದ್ದ ಎಲ್ಲಾ ವೈದ್ಯ ಪದ್ಧತಿಗಳನ್ನು ತನ್ನ ವೈದ್ಯಪದ್ದತಿಯಾದ ಹೋಮಿಯೋಪತಿಗಿಂತ ಪ್ರತ್ಕೇಕಿಸಲು ಉಪಯೋಗಿಸಿದರು. ನಾವು ಈಗ ಇದನ್ನು ಕಾಯಿಲೆಯ ಪರಿಣಾಮಕ್ಕಿಂತ ಭಿನ್ನವಾದ ಪರಿಣಾಮವನ್ನು ದೇಹದಲ್ಲಿ ಉಂಟುಮಾಡಿ ರೋಗವನ್ನು ಗುಣಪಡಿಸುವ ವೈದ್ಯಪದ್ಧತಿ ಎಂದು ಕರೆಯಬಹುದಾಗಿದೆ.ಇದು ಮುಖ್ಯವಾಗಿ ಪಾಶ್ಚಾತ್ಯ ದೃಷ್ಟಿಕೋನವನ್ನು ಹೊಂದಿದೆ.