(ಹಿಂದಿ : आलोक नाथ) (೧೦, ಜುಲೈ, ೧೯೫೬) ಭಾರತೀಯ ಬಾಲಿವುಡ್ ನ ಹಿಂದಿ-ಚಲನಚಿತ್ರಗಳಲ್ಲೂ ಕಾಣಿಸಿಲೊಂಡಿದ್ದಾರೆ. ’ರಮೇಶ್ ಸಿಪ್ಪಿಯವರ ಟೆಲಿವಿಶನ್ ಧಾರಾವಾಹಿ, ಬುನಿಯಾದ್’ ನಲ್ಲಿ ’ಹವೇಲಿರಾಮ್'ನ ಪಾತ್ರದಲ್ಲಿ, ಮಿಂಚಿದರು. ಇದಾದ ಮೇಲೆ ಅವರು ಹಿಂತಿರುಗಿ ನೋಡಲಿಲ್ಲ.

ಚಿತ್ರ:Aloknath1.jpg
'ಅಲೋಕ್ ನಾಥ್'
ಅಲೋಕ್ ನಾಥ್

ಬಾಲ್ಯ ಮತ್ತು ವೃತ್ತಿಜೀವನ

ಬದಲಾಯಿಸಿ

'ಅಲೋಕ್ ನಾಥ್, ಬೊಂಬಾಯಿನಲ್ಲಿ ಹುಟ್ಟಿದರು. ಚಿಕ್ಕವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯವನ್ನು ಶುರುಮಾಡಿದ್ದರು. ಅಭಿನಯವೇ ಅಷ್ಟೇನೂ ದೊಡ್ಡದೆಂದು ಅವರು ಪರಿಗಣಿಸಿರಲಿಲ್ಲ. ೧೯೭೩ ರಿಂದ ೧೯೯೫ ರವರೆಗೆ ಅವರು ಕಿಟ್ ಪ್ಲೈ ಕಂಪೆನಿಯಲ್ಲಿ ನೌಕರಿಯಲ್ಲಿದ್ದರು. ಒಮ್ಮೆ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ, ಅದರಿಂದ ಹೊರಗೆಬರಲು ಸಾಧ್ಯವಾಗಲಿಲ್ಲ.

ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದಾಗ

ಬದಲಾಯಿಸಿ

೧೯೮೭ ರಲ್ಲಿ ಅತಿ-ದೀರ್ಘಕಾಲ ಪ್ರಸಾರವಾದ ಅತಿ-ಜನಪ್ರಿಯ ಟೆಲಿವಿಶನ್ ಧಾರಾವಾಹಿ,'ಬುನಿಯಾದ್'ನಲ್ಲಿ ಅಭಿನಯಿಸಿದ ಬಳಿಕ, ಅವರು ಪ್ರಸಿದ್ಧಿಹೊಂದಿದರು. ೧೯೮೯ ಯಲ್ಲಿ ಮೈನೆ ಪ್ಯಾರ್ ಕಿಯ ಚಿತ್ರದಲ್ಲಿ, ನಟಿ ಭಾಗ್ಯಶ್ರಿ ಪ್ರಧಾನ್ ರವರ ಪಾತ್ರ.ಸುಮನ್, ತಂದೆಯಾಗಿ, ಹಲವಾರು ಅತಿ ಪ್ರಸಿದ್ಧ ಚಿತ್ರಗಳಲ್ಲೂ ಸಹಾಯಕ ಪಾತ್ರ, ತಂದೆ, ಅಂಕಲ್ ಇತ್ಯಾದಿಗಳಲ್ಲಿ, ಕಾಣಿಸಿಕೊಂಡಿದ್ದಾರೆ. ಅವರ ವಿಶೇಷತೆ, ತೀರ ಆರ್ತರಾದ ದಯಾವಂತ ವ್ಯಕ್ತಿಯ ಪಾತ್ರಗಳು. ಉದಾಹರಣೆಗಳು, ತಾಲ್, ಮೈನೆ ಪ್ಯಾರ್ ಕಿಯ, ಪರ್ದೇಸ್, ವಿವಾಹ್ಗಳಲ್ಲಿ ನಟಿಸಿದ್ದಾರೆ. ಖಳನಾಯಕನ ಪಾತ್ರಗಳೂ ಅವರ ಪಾಲಿಗೆ ಬಂದಿವೆ. ಉದಾಹರಣೆಗೆ ಅಲೋಕ್ ನಾಥ್ ಅಭಿನಯಿಸಿದ, "ಬೋಲ್ ರಾಧ ಬೋಲ್". ಈ ಚಿತ್ರದಲ್ಲಿ, ಅಲೋಕ್ ನಾಥ್, ತಮ್ಮಮೇಲೆಯೇ ಕೋಪಗೊಂಡು, ಕಣ್ಣೀರು ಕರೆಯುತ್ತಾ, ತಮ್ಮ-ಆತ್ಮ ನಿಂದನೆಮಾಡಿಕೊಂಡು ಕೊರಗುವ ಪಾತ್ರ ಅನನ್ಯವಾಗಿದೆ.ಇಂಥ ಪಾತ್ರಗಳಿಗೆ ಮನಸ್ಸಿನ ಮೇಲೆ ಹತೋಟಿಯ ಅಗತ್ಯವಿದೆ. ತನ್ನ ಅಸಹಕಾಯತೆ, ತನ್ನ ಪ್ರಯನ್ತಗಳು ವಿಫಲವಾಗಿ ಎಲ್ಲರ ಕಣ್ಣಿನಲ್ಲಿ, ನಗೆಪಾಟಲಾಗಿದ್ದಕ್ಕೆ, ಹಾಗೂ ಯಾರಿಂದಲಾದರೂ ದೂಷಣೆಗೆ ಸಿದ್ಧರಾಗಿರುವ, ಪಾತ್ರ ಎಲ್ಲರ ಗಮನಸೆಳೆಯುತ್ತದೆ. ಈ ತರಹದ ಪಾತ್ರಗಳನ್ನು 'ಅಲೋಕ್ ನಾಥ ರಷ್ಟು ಸಂಪೂರ್ಣ ಸಮರ್ಪಣಾಭಾವದಿಂದ ಮಾಡುವವರು ಅತಿವಿರಳ.

'ಅಲೋಕ್ ನಾಥ್', ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ, 'ಗಾಂಧಿ'ಯಲ್ಲಿ ಅಭಿನಯಿಸಿದ್ದಾರೆ

ಬದಲಾಯಿಸಿ

ಸನ್, ೧೯೮೨, ರ, ಅಂತಾರಾಷ್ಟ್ರೀಯ ಚಿತ್ರ ರಿಚರ್ಡ್ ಅಟೆನ್ ಬೊರೊ ನಿರ್ದೇಶಿಸಿದ ಚಿತ್ರ ಗಾಂಧಿಯಲ್ಲಿ, ಪಾತ್ರವಹಿಸಿದ್ದಾರೆ. ಅಲೋಕ್ ನಾಥ ರ ಚಿಕ್ಕಪ್ಪನ ಪಾತ್ರ,ವಿವಾಹ್ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಎಲ್ಲರ ಬಾಯಿನಲ್ಲಿ ಹೊಗಳಿಕೆಗೆ ಪಾತ್ರವಾಯಿತು. ಅವರು ೨೦೦೭ ರಿಂದ ಸತತವಾಗಿ ನಡೆಯುತ್ತಿರುವ,ಸ್ಟಾರ್ ಪ್ಲಸ್, ಟೆಲಿವಿಶನ್ ಧಾರಾವಾಹಿ,ಸಪ್ನಾ ಬಾಬುಲ್ ಕ, ಬಿದಾಯಿ,ಗಳಲ್ಲಿ ಅಭಿನಯಿಸುತ್ತಿದ್ದಾರ‍ೆ.