'ಸಣ್ಣ ಕಥೆಗಳ ಒಡತಿ' ಎಂದೇ ಖ್ಯಾತವಾದ ಕೆನಾಡದ ಲೆಖಕಿ ಅಲೈಸ್ ಮನ್ರೊ ೨೦೧೩ ನೆ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ..ಇವರಿಗೆ ಡಿಸೆಂಬರ್ ೧೦ ರಂದು ಸ್ಟಾಕ್ ಹೊಮ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು,,ಇವರು ೭.೭೮ ಕೋಟಿ ರೂ ಬಹುಮಾನ ಪಡೆಯಲಿದ್ದಾರೆ,ಜಗತ್ತಿನ ಅತೀ ಶ್ರೇಷ್ಠ ಪ್ರಶಸ್ತಿ ಎನಿಸಿಕೊಂಡಿರುವ ನೊಬೆಲ್ ಗೆ ಪಾತ್ರರಾಗಿರುವ ಮನ್ರೊ ರವರು ಕೆನಡಾ ದ ಮೊದಲ ಮತ್ತು ಜಗತ್ತಿನ ೧೩ ನೇ ಮಹಿಳೆಯಾಗಿದ್ದಾರೆ, ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಕೆನಡಾದ ಮೊದಲ ಪ್ರಜೆಯಾಗಿದ್ದಾರೆ, ಈ ಸಾಲಿನ ನೊಬೆಲ್ ಪ್ರಶಸ್ತಿಗಾಗಿ ಭಾರತೀಯ ಸಾಹಿತಿಗಳಾದ ಮಹಾಶ್ವೆತಾ ದೇವಿ,ಝಂಪಾ ಲಹರಿ,ಸಲ್ಮಾನ್ ರಶ್ದಿ ಸ್ಪರ್ಧೆಯಲ್ಲಿದ್ದರು.

ಅಲೈಸ್ ಮನ್ರೊ
ಜನನಅಲೈಸ್ ಆನ್ ಲೇಯ್ಡ್‌ಲಾ
(೧೯೩೧-೦೭-೧೦)೧೦ ಜುಲೈ ೧೯೩೧
ವಿಂಘಮ್, ಕ್ಯಾನಡಾ
ವೃತ್ತಿಲೇಖಕಿ
ಭಾಷೆಇಂಗ್ಲೀಷ್
ರಾಷ್ಟ್ರೀಯತೆಕೆನೇಡಿಯನ್
ಪೌರತ್ವಕೆನಡ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಪಶ್ಚಿಮ ಒಂಟಾರಿಯೊ ವಿಶ್ವವಿದ್ಯಾಲಯ[೧]
ಪ್ರಕಾರ/ಶೈಲಿಸಣ್ಣ ಕಥೆಗಳು
ಪ್ರಮುಖ ಪ್ರಶಸ್ತಿ(ಗಳು)ಗವರ್ನರ್ ಜನರಲ್‍ರ ಪ್ರಶಸ್ತಿ (1968, 1978, 1986)
ಗಿಲರ್ ಪ್ರಶಸ್ತಿ (1998, 2004)
ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ (2009)
ನೊಬೆಲ್ ಸಾಹಿತ್ಯ ಪ್ರಶಸ್ತಿ (2013)
ಬಾಳ ಸಂಗಾತಿಜೇಮ್ಸ್ ಮನ್ರೊ (1951–1972)
ಗೆರಾಲ್ಡ್ ಫ಼್ರೆಮ್ಲಿನ್ (1976–2013, ಅವರ ಮರಣ)
ಮಕ್ಕಳು3

ಅಲೈಸ್ ಮನ್ರೊ ರವರ ಸಾಧನೆ ಮತ್ತು ಕೊಡುಗೆಗಳುಸಂಪಾದಿಸಿ

ಕೆನಡಾ ದೇಶದ ಲೇಖಕಿ ಅಲೈಸ್ ಮನ್ರೊರವರು ಸಮಕಾಲೀನ ಸಣ್ಣ ಕಥೆಗಳ ಮೂಲಕ ಮನುಷ್ಯ ನ ದುರ್ಬಲತೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ, ಮನುಷ್ಯನ ಬದುಕು,ಕಾಡುವ ಅಸ್ಥಿರತೆಗಳನ್ನು ಸಣ್ಣ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದಾರೆ. ಇವರು ವಾಸ್ತವಾಂಶವನ್ನು ಸ್ಪಷ್ಟವಾಗಿ ಸಣ್ಣ ಕಥೆಗಳ ಪಾತ್ರಗಳಲ್ಲಿ ಉತ್ತಮ ಶೈಲಿಯಲ್ಲಿ ಹೆಣೆದಿದ್ದಾರೆ, ಆದ್ದರಿಂದ ಇವರನ್ನು "ಕೆನಡಾದ ಚೆಕೊವ್" ಎಂಥಲೂ ಕರೆಯಲಾಗುತ್ತದೆ, ಮಾನವನ ದುರ್ಬಲತೆಗಳನ್ನು ಕೆಂದ್ರೀಕರಿಸಿ ಬರೆದಿರುವ ಸಣ್ಣ ಕಥೆಗಳಿಗಾಗಿ ಮನ್ರೊರವರು ಶಾಂತಿ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಮನ್ರೂರವರ ಸಣ್ಣ ಕಥೆಗಳು ನಗರಗಳ ಸಮಕಾಲಿನ ಒಟ್ಟು ಜೀವನ ಶೈಲಿಯನ್ನು ವಿವರಿಸುತ್ತದೆ. ಸಾಮಜಿಕ ಮಾನ್ಯತೆಗಾಗಿ ನಡೆಸುವ ಹೋರಾಟ, ತಲೆಮಾರುಗಳ ಅಂತರದಿಂದ ಉಂಟಾಗುವ ನೈತಿಕ ಹೋರಾಟ ಸೇರಿದಂತೆ ವಿವಧ ಆಯಾಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ೮೨ ವರ್ಷದ ಕೆನಡಾ ದೇಶದ ಲೇಖಕಿ ಅಲೈಸ್ ಮನ್ರೊರವರು ಸಣ್ಣ ಕಥೆ ವಿಭಾಗದಲ್ಲಿ ರಚೆಸಿದ ಕೃತಿಗಳಿಗಾಗಿ ೨೦೧೩ ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ."ಸಣ್ಣ ಕಥೆಗಳ ಮಾಸ್ತಾರ್", ಸಮಕಾಲೀನ ಸಣ್ಣ ಕಥೆಗಳ ಒಡತಿ" ಎಂದೆ ಬಣ್ಣಿಸಲಾಗುತ್ತಿರುವ ಅಲೈಸ್ ಮನ್ರೊರವರು ಕೆನಡಾ ದೇಶದ ಪ್ರಖ್ಯಾತ ಲೇಖಕಿ. ೧೯೩೧ ಜುಲೈ ೧೦ರಂದು ಕೆನಡಾದ ವಿಂಗಾಮ್ ನಲ್ಲಿ ಜನಿಸಿದರು, ಇವರ ತಂದೆ ರಾಬರ್ಟ ಎರಿಕ್ ಲೈಡ್ಲಾ ರವರು ಕೋಳಿ ಸಾಕಣೆಯಲ್ಲಿ ತೊಡಗಿದ್ದರು, ತಾಯಿ ಪುಟ್ಟ ಪಟ್ಟಣದಲ್ಲಿ ಟಿಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ೧೧ ವರುಷ ತುಂಬುವ ವೇಳೆಗೆ ಅಲೈಸ್ ಮನ್ರೊರವರು ಲೇಖಕಿಯಾಗುವ ಬಯಕೆ ಹೊಂದ್ದಿದ್ದರು. ಸಣ್ಣ ಕಥೆಗಳ ಮೂಲಕ ವಾಸ್ತವಾಂಶ ತೆರೆದಿಡುವ ಶಕ್ತಿ ಹೊಂದ್ದಿದ್ದರು. ಅಲೈಸ್ ಮನ್ರೊರವರನ್ನು ಕೆನಡಾದ ಸುಪ್ರಸಿದ್ದ ಲೆಖಕ "ಕೆನಡಾದ ಚೆಕೊವ್"ರವರಿಗೆ ಹೊಲಿಸಲಾಗಿದೆ. ೨೦೧೨ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಶ್ತಿಯು ಚೀನಾದ ಕಾದಂಬರಿಕಾರ ಮೂಯಾನ್ ಗೆ ಬಂದ್ದಿತ್ತು,"ಮೊಯಾನ್" ಎಂಬ ಕಾವ್ಯನಾಮದಲ್ಲಿ ಬರೆಯುವ ಚೀನಾ ಕಾದಂಬರಿಕಾರ 'ಗುಅನ್ ಮೊಯೆ'ರವರು ನೂಬೆಲ್ ಪಡೆದ ಮೊದಲ ಚೀನಾ ಪ್ರಜೆ.

ಉಲ್ಲೇಖಗಳುಸಂಪಾದಿಸಿ

  1. Preface. Dance of the Happy Shades. Alice Munro. First Vintage contemporaries Edition, August 1998. ISBN 0-679-78151-X Vintage Books, A Division of Random House, Inc. New York.
  2. A Conversation with Alice Munro. Bookbrowse. Retrieved on: 2 June 2009.