ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್
ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್ ಜರ್ಮನಿಯಲ್ಲಿ ಹುಟ್ಟಿ ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಅಲೆಕ್ಸಾಂಡರ್ ಫ್ರೆಡರಿಕ್ ಲಿಂಡೆಮನ್‌ರವರು ವಿನ್‍ಸ್ಟನ್ ಚರ್ಚಿಲ್|ವಿನ್‍ಸ್ಟನ್ ಚರ್ಚಿಲರ ಕಾಲದಲ್ಲಿ ಬ್ರಟನ್ನಿನ ವೈಜ್ಞಾನಿಕ ಸಲಹಗಾರರಾಗಿದ್ದರು.
The Right Honourable The Viscount Cherwell | |
---|---|
ಚಿತ್ರ:Lindemann Frederick.jpg | |
ಅಧಿಕಾರ ಅವಧಿ 1942 – 1945 | |
ಪೂರ್ವಾಧಿಕಾರಿ | Sir William Jowitt |
ಉತ್ತರಾಧಿಕಾರಿ | Vacant Next holder Arthur Greenwood |
ಅಧಿಕಾರ ಅವಧಿ 1951 – 1953 | |
ಪೂರ್ವಾಧಿಕಾರಿ | The Lord Macdonald of Gwaenysgor |
ಉತ್ತರಾಧಿಕಾರಿ | The Earl of Selkirk |
ವೈಯಕ್ತಿಕ ಮಾಹಿತಿ | |
ಜನನ | 5 April 1886 Baden-Baden, Germany |
ಮರಣ | 3 July 1957 (aged 71) |
ಅಭ್ಯಸಿಸಿದ ವಿದ್ಯಾಪೀಠ | University of Berlin |
ಬಾಲ್ಯ
ಬದಲಾಯಿಸಿಲಿಂಡೆಮನ್ರವರು ೧೮೮೬ರ ಏಪ್ರಿಲ್ ೫ರಂದು ಜರ್ಮನಿಯ ಬಾಡೆನ್-ಬಾಡೆನ್‌ನಲ್ಲಿ ಜನಿಸಿದರು.
ವೈಜ್ಞಾನಿಕ ಸಂಶೋಧನೆಗಳು
ಬದಲಾಯಿಸಿಲಿಂಡೆಮನ್ರವರು ತಮ್ಮ ಸಹಾಯಕ ನೆರ್ಸ್ಟ್‌ರವರ ಜೊತೆ ಸೇರಿಕೊಂಡು ೧೯೧೧ರಲ್ಲಿ ವಿಶೇಷ ಕ್ಯಾಲರಿಮಾಪಕವನ್ನು ತಯಾರಿಸಿ, ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ ವಿಶಿಷ್ಟ ಉಷ್ಣವನ್ನು (specific heat) ಅಳೆಯಲು ಕ್ವಾಂಟಮ್ ಸಿದ್ಧಾಂತದಲ್ಲಿ ಹೆಚ್ಚಿನ ಪ್ರಯೋಗಗಳನ್ನು ನಡೆಸಿ, ಕ್ವಾಂಟಮ್ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದರು. ಹಾಗೆಯೇ ಅವರುಗಳು ಆಲ್ಬರ್ಟ್ ಐನ್‌ಸ್ಟೈನ್‌ರವರು (೧೮೭೯-೧೯೫೫) ೧೯೦೭ರಲ್ಲಿ (ಘನವಸ್ತುಗಳ ವಿಶಿಷ್ಟ ಉಷ್ಣ ನಿರಪೇಕ್ಷ ಶೂನ್ಯತೆಯಲ್ಲಿ ಶೂನ್ಯವಾಗುತ್ತದೆ ಎಂದು ಪ್ರತಿಪಾದಿಸಿ) ರೂಪಿಸಿದ್ದ ವಿಶಿಷ್ಟ ಉಷ್ಣ ಸಮೀಕರಣಗಳನ್ನು ತಮ್ಮ ಪ್ರಯೋಗಗಳಿಂದ ದೃಢಪಡಿಸಿದರು. ವಿಮಾನ ನಿಯಂತ್ರಣ ತಪ್ಪಿ ಏಕೆ ಗಿರಕಿ ಹೊಡೆಯುತ್ತದೆ ಎಂಬುದನ್ನು (ಮೊದಲನೆಯ ವಿಶ್ವಸಮರದ ಕಾಲದಲ್ಲಿ) ವಿವರಿಸಲು ಲಿಂಡೆಮನ್ ಸಿದ್ಧಾಂತವನ್ನು ಮಂಡಿಸಿದರು. ನಂತರ ವಿಮಾನ ಗಿರಕಿ ಹೊಡೆದ ಮೇಲೆ ಅದರಿಂದ ಮೊದಲ ಸ್ಥಿತಿಗೆ ಬರಲು ಏನು ಮಾಡಬೇಕು ಎನ್ನುವುದರ ಬಗ್ಗೆ ವಿವರಿಸಿದ ಲಿಂಡೆಮನ್‌ರವರು ತಾವೇ ವಿಮಾನದಲ್ಲಿ ಕುಳಿತು ತಾವು ನೀಡಿದ್ದ ಪರಿಹಾರವನ್ನು ಯಶಸ್ವಿಯಾಗಿ ಪರೀಕ್ಷಿಸಿದರು.
ನಿಧನ
ಬದಲಾಯಿಸಿಲಿಂಡೆಮನ್ರವರು ೧೯೫೭ರ ಜುಲೈ ೩ರಂದು ಆಕ್ಸ್‌ಫರ್ಡ್‌ನಲ್ಲಿ ನಿಧನರಾದರು.