ಅಲಸಂದೆಯ ಎಳೆಯ ಕಾಯಿಗಳನ್ನು ತರಕಾರಿಯಾಗಿ ಉಪಯೋಗಿಸಲಾಗುತ್ತಿದೆ. ಇದರ ಕಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಸಸಾರಜನಕ, ಅನ್ನಾಂಗ `ಬಿ' ಮತ್ತು ಲವಣಾಂಶಗಳನ್ನು ಹೊಂದಿರುತ್ತವೆ.[೧]

BlackEyedPeas.JPG
Black-eyed pea pods on plant in Hong Kong.jpg

ಮಣ್ಣುಸಂಪಾದಿಸಿ

ಇದನ್ನು ಹೆಚ್ಚಾಗಿ ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಮಣ್ಣುಗಳಲ್ಲಿ ಬೆಳೆಯಬಹುದು.

ಕಾಲಸಂಪಾದಿಸಿ

ವರ್ಷದಲ್ಲಿ ಈ ಬೆಳೆಯನ್ನು ಎರಡು ಸಲ ಬೆಳೆಯಬಹುದು. ಈ ಬೆಳೆಯನ್ನು ಮೇ-ಜುಲೈ ಮತ್ತು ಡಿಸೆಂಬರ್- ಜನವರಿ ತಿಂಗಳುಗಳಲ್ಲಿ ಪ್ರಾರಂಭಿಸಬಹುದು. ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ - ಫೆಬ್ರವರಿ ಸೂಕ್ತ ಕಾಲ. ಕರಾವಳಿ ಪ್ರದೇಶದಲ್ಲಿ ಬತ್ತದ ಕಟಾವಿನ ಅನಂತರ ಗದ್ದೆಗಳಲ್ಲಿ ಈ ಬೆಳೆಯನ್ನು ಬೆಳೆಸಬಹುದು.

ತಳಿಗಳುಸಂಪಾದಿಸಿ

ದಕ್ಷಿಣ ಒಣ ಪ್ರದೇಶಗಳಿಗೆಸಂಪಾದಿಸಿ

1. ಪುಸಾ ಫಲ್ಗುಣಿ : ಗಿಡಗಳು ಗಿಡ್ಡವಾಗಿದ್ದು ಪೊದೆಯಾಕಾರದಲ್ಲಿವೆ. ಈ ತಳಿಯು ಚಳಿಗಾಲಕ್ಕೆ ಉತ್ತಮವಾದ ತಳಿ. ಕಾಯಿಗಳು 12.5 ಸೆಂಮೀ ಉದ್ದವಿದ್ದು ದಟ್ಟ ಕಡುಹಸುರು ಬಣ್ಣದ್ದಾಗಿವೆ. ಬಿತ್ತನೆ ಮಾಡಿದ 60 ದಿವಸಗಳ ನಂತರ ಕಾಯಿಗಳು ಕೊಯ್ಲಿಗೆ ಬರುತ್ತವೆ. 2. ಪುಸಾ ಬರಸಾತಿ : ಇದು ಬೇಗನೆ ಕಟಾವಿಗೆ ಬರುವ ತಳಿಯಾಗಿದೆ (45 ದಿನಗಳು) ಮತ್ತು ಮಳೆಗಾಲಕ್ಕೆ ಸೂಕ್ತವಾಗಿದೆ. 3. ಪುಸಾ ದೋ ಫಸಲಿ : ಇದು ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು ಮಳೆಗಾಲ ಚಳಿಗಾಲಕ್ಕೆ ಯೋಗ್ಯವಾಗಿದೆ. 4. ಎಸ್. -288 : ಇದು ಶೀಘ್ರ ಕಟಾವಿಗೆ ಬರುವ ತಳಿಯಾಗಿದೆ (55 ದಿನಗಳು). ಈ ತಳಿಯನ್ನು ವರ್ಷದ ಯಾವುದೇ ಕಾಲದಲ್ಲೂ ಬೆಳೆಯಬಹುದು. 5. ಅರ್ಕಾ ಗರಿಮೆ : ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಗಿಡಗಳು ಎತ್ತರವಾಗಿದ್ದು ಪೊದೆಯಾಕಾರದಲ್ಲಿ ಬೆಳೆಯುತ್ತವೆ. ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಎಲೆಗಳು ತಿಳಿ ಹಸುರು ಬಣ್ಣವನ್ನು ಹೊಂದಿರುತ್ತವೆ. ಹೂವಿನ ಬಣ್ಣ ನೇರಳೆ, ಕಾಯಿಗಳು ಉದ್ದವಾಗಿದ್ದು, ಗುಂಡಾಗಿದ್ದು, ದಪ್ಪವಾಗಿದ್ದು, ತಿಳಿ ಹಸಿರು ಬಣ್ಣವನ್ನು ಹೊಂದಿದ್ದು ರಸಭರಿತವಾಗಿರುತ್ತವೆ ಹಾಗೂ ನಾರು ಇರುವುದಿಲ್ಲ, ತರಕಾರಿಯಾಗಿ ಉಪಯೋಗಿಸಲು ಸೂಕ್ತ. ಈ ತಳಿಗೆ ಅತಿ ಉಷ್ಣತೆ ಮತ್ತು ನೀರಿನ ಕೊರತೆಯನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 90 ದಿವಸಗಳು. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು. 6. ಅರ್ಕಾ ಸುಮನ್ : ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಗಿಡಗಳು ಪೊದೆಯಾಕಾರವಾಗಿದ್ದು, ನೇರವಾಗಿ ಬೆಳೆಯುತ್ತವೆ. ವರ್ಷದ ಎಲ್ಲಾ ಕಾಲಗಳಲ್ಲೂ ಬೆಳೆಯಬಹುದು. ಇದು ಅಲ್ಪಾವಧಿ ತಳಿ (70-75 ದಿವಸಗಳು) ಹಾಗೂ ಕಾಯಿಗಳು ಗಿಡದ ಮೇಲ್ಭಾಗದಲ್ಲಿ ಇರುತ್ತವೆ. ಕಾಯಿಗಳು ಮಧ್ಯಮ ಉದ್ದವಿದ್ದು, ಮೃದುವಾಗಿ ಇರುತ್ತವೆ ಮತ್ತು ರಸಭರಿತವಾಗಿರುತ್ತವೆ. ನಾರಿನ ಅಂಶ ಇರುವುದಿಲ್ಲ. ಒಳ್ಳೆಯ ಅಡುಗೆ ಗುಣಗಳನ್ನು ಹೊಂದಿದೆ. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು. 7. ಅರ್ಕಾ ಸಮೃದ್ಧಿ : ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರು ಅಭಿವೃದ್ಧಿಪಡಿಸಿದೆ. ಗಿಡಗಳು ಪೊದೆಯಾಕಾರವಾಗಿದ್ದು ನೇರವಾಗಿ ಬೆಳೆಯುತ್ತವೆ. ವರ್ಷದ ಎಲ್ಲ ಕಾಲಗಳಲ್ಲೂ ಬೆಳೆಯಬಹುದು. ಇದು ಅಲ್ಪಾವಧಿ ತಳಿ (70-75 ದಿವಸಗಳು). ಕಾಯಿಗಳು ಗಿಡದ ಮೇಲ್ಭಾಗದಲ್ಲಿರುತ್ತವೆ. ಕಾಯಿಗಳು ಹಸುರಾಗಿದ್ದು, ಮಧ್ಯಮ ಉದ್ದವಿದ್ದು ಗುಂಡಾಗಿರುತ್ತವೆ ಹಾಗೂ ಮೃದುವಾಗಿದ್ದು, ರಸಭರಿತವಾಗಿದ್ದು ನಾರಿನ ಅಂಶ ಇರುವುದಿಲ್ಲ. ಒಳ್ಳೆಯ ಅಡುಗೆ ಗುಣಗಳನ್ನು ಹೊಂದಿದೆ. ಒಂದು ಹೆಕ್ಟೇರಿಗೆ 19 ಟನ್ ಇಳುವರಿ ಪಡೆಯಬಹುದು.

ಕರಾವಳಿ ಪ್ರದೇಶಗಳಿಗೆಸಂಪಾದಿಸಿ

ಪುಸಾ ಬರಸಾತಿ, ಪುಸಾ ದೋ ಫಸ್ಲಿ, ಎಸ್- 288

ಗುಡ್ಡಗಾಡು ಪ್ರದೇಶಗಳಿಗೆಸಂಪಾದಿಸಿ

ಎಸ್-288

ಬೇಸಾಯ ಸಾಮಗ್ರಿಗಳುಸಂಪಾದಿಸಿ

ಪ್ರತಿ ಹೆಕ್ಟೇರಿಗೆ: ಬೀಜ 15 ಕಿಗ್ರಾಂ; ಕೊಟ್ಟಿಗೆ ಗೊಬ್ಬರ 25 ಟನ್; ರಾಸಾಯನಿಕ ಗೊಬ್ಬರಗಳು ಸಾರಜನಕ 25 ಕಿಗ್ರಾಂ; ರಂಜಕ 75 ಕಿಗ್ರಾಂ; ಪೊಟ್ಯಾಷ್ 60 ಕಿಗ್ರಾಂ; ರೈಜೋಬಿಯಂ 375 ಗ್ರಾಂ.

ಬಿತ್ತನೆಸಂಪಾದಿಸಿ

ಭೂಮಿಯನ್ನು ಹದಮಾಡಿದ ನಂತರ 40 ಸೆಂಮೀ ಅಂತರದಲ್ಲಿ ಸಾಲುಗಳನ್ನು ಮಾಡಿ, ಶಿಫಾರಸು ಮಾಡಿದ ಪುರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರಗಳನ್ನು ಸಾಲಿನಲ್ಲಿ ಹಾಕಿ ಮಣ್ಣಿಗೆ ಸೇರಿಸಿ. ಮಳೆಗಾಲದ ಬೆಳೆಗೆ ಕರಾವಳಿ ಪ್ರದೇಶಗಳಲ್ಲಿ ಶೇ. 50 ರಷ್ಟು ಸಾರಜನಕ, ಪುರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ಮಣ್ಣಿಗೆ ಸೇರಿಸಿ. ಬಿತ್ತನೆಗಿಂತ ಮೊದಲು ಬೀಜಗಳನ್ನು ರೈಜೋಬಿಯಂ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತಿ ನೀರು ಹಾಯಿಸಬೇಕು.

ಉಲ್ಲೇಖಗಳುಸಂಪಾದಿಸಿ

  1. "ಅಲಸಂದೆ". www.sakala.gov.in.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲಸಂಡೆ&oldid=760458" ಇಂದ ಪಡೆಯಲ್ಪಟ್ಟಿದೆ