ಅರ್ಸಿನಿಯ ಅನೆತಾಯ್ಡಿಸ್
ದಕ್ಷಿಣ ಆಫ್ರಿಕದ, ಬೇಸಗೆಯಲ್ಲಿ ಹೂ ಬಿಡುವ, ವಾರ್ಷಿಕ ಸಸ್ಯ. 18" ಎತ್ತರ ಬೆಳೆಯುತ್ತದೆ. ಹೂಗಳು ಡೈಸಿಯದಂತೆ ಬಹುಸುಂದರ. ಬಣ್ಣ ಕಿತ್ತಳೆ ಹಳದಿ ಮತ್ತು ನೀಲಿ. ಗಿಡ ಬಹಳ ದಿನಗಳವರೆಗೆ ಹೂ ಬಿಡುತ್ತಿರುತ್ತದೆ. ಬಿಡಿಹೂಗಳಾಗಿ ಉಪಯೋಗಿಸಲು ಇವು ಅನುಕೂಲವಾಗಿವೆ. ಬೀಜವನ್ನು ಮಡಿಗಳಲ್ಲಿ ಇಲ್ಲವೆ ಕುಂಡಗಳಲ್ಲಿ ಬಿತ್ತನೆ ಮಾಡಿ ಬೆಳೆಸಬೇಕು. ಸಸಿಗಳನ್ನು ನಾಟಿಮಾಡಿ ಬೆಳೆಸುವುದು ಕಷ್ಟ. ಮೈದಾನಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ.