ಅರ್ನ್‌ಸ್ಟ್ ಅಟ್ಟೊ ಫಿಷರ್

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಅರ್ನ್‌ಸ್ಟ್ ಅಟ್ಟೊ ಫಿಷರ್ರವರು ೧೯೧೮ರ ನವೆಂಬರ್ ೧೦ರಂದು ಮ್ಯುನಿಚ್‌ನಲ್ಲಿ ಜನಿಸಿದರು. ಫಿಷರ್ರವರು ನೇಚರ್ ಪತ್ರಿಕೆಯಲ್ಲಿ ‘ಫೆರ್ರೋಸೀನ್’ (ferrocene) ಎಂಬ ನಿಗೂಢವಾದ ಸಂಶ್ಲೇಷಿಯ ಸಂಯುಕ್ತವಸ್ತುವಿನ ಬಗ್ಗೆ ಬಂದಿದ್ದ ಪ್ರಕಟನೆಯನ್ನು ೧೯೫೧ರಲ್ಲಿ ಓದಿದರು. ನಂತರದ ಪ್ರಯೋಗಗಳಲ್ಲಿ ಅದರ ಬಗ್ಗೆ ಒಂದು ವಿಷಯವನ್ನು ಕಂಡುಹಿಡಿದರು. ಫೆರ್ರೋಸೀನ್ ಒಂದು (ಕಾರ್ಬನ್ ಅಡಕವಾಗಿರುವ) ಜೈವಿಕ-ಲೋಹದ ಸಂಯುಕ್ತವಸ್ತುವಾಗಿದೆ (organometallic compounds). ಫೆರ್ರೋಸೀನ್‌ನ ಪ್ರತಿಯೊಂದು ಅಣುವಿನಲ್ಲಿಯೂ ಒಂದು ಏಕ ಕಬ್ಬಿಣದ ಪರಮಾಣುವಿನ ಮೇಲೆ ಮತ್ತು ಕೆಳಗೆ ಎರಡು ಪಂಚಭುಜಾಕೃತಿಯ ಕಾರ್ಬನ್ ಉಂಗುರಗಳ ಪರಮಾಣುಗಳಿರುತ್ತವೆ. ಅಂದರೆ ಎರಡು ಕಾರ್ಬನ್ ಉಂಗುರಗಳ ಮಧ್ಯೆ ಒಂದು ಕಬ್ಬಿಣದ ಪರಮಾಣು ‘ಸ್ಯಾಂಡ್ ವಿಚ್’ ಆಗಿರುತ್ತದೆ ಎಂಬುದಾಗಿ ಅವರು ಕಂಡುಹಿಡಿದರು. ಅವರ ಸಂಶೋಧನೆ ಅಂತಹ ಇತರ ಸ್ಯಾಂಡ್‌ವಿಚ್ ರಚನೆಗಳ ಸಂಶೋಧನೆಗೆ ನಾಂದಿಯಾಯಿತು. ಫಿಷರ್ರವರ ಪ್ರಯೋಗಗಳನ್ನು ಸ್ವತಂತ್ರವಾಗಿ ನಡೆಸಿದ ಜಿಯೋಫ್ರೀ ವಿಲ್ಕಿನ್‌ಸನ್‌ರವರೂ (೧೯೨೧-೧೯೯೬) ಸಹ ಫಿಷರ್ರವರು ಕಂಡುಹಿಡಿದ ವಿಷಯಗಳನ್ನೇ ಅದೇ ಅವಧಿಯಲ್ಲಿಯೇ ಕಂಡುಹಿಡಿದರು. ಹಾಗಾಗಿ ೧೯೭೩ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಇಬ್ಬರು ವಿಜ್ಞಾನಿಗಳಿಗೂ ಜಂಟಿಯಾಗಿ ನೀಡಲಾಯಿತು.[] ಫಿಷರ್ರವರು ೨೦೦೭ರ ಜುಲೈ ೨೩ರಂದು ಮ್ಯೂನಿಚ್‌ನಲ್ಲಿ ನಿಧನರಾದರು.

ಅರ್ನ್‌ಸ್ಟ್ ಅಟ್ಟೊ ಫಿಷರ್
ಅರ್ನ್‌ಸ್ಟ್ ಅಟ್ಟೊ ಫಿಷರ್
ಜನನ
ಅರ್ನ್‌ಸ್ಟ್ ಅಟ್ಟೊ ಫಿಷರ್

೧೦ ನವೆಂಬರ್ ೧೯೧೮
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಉಲ್ಲೇಖಗಳು

ಬದಲಾಯಿಸಿ