ಅರ್ಕೇಶ್ವರ ದೇವಸ್ಥಾನ

ಕೃಷ್ಣರಾಜನಗರ ತಾಲ್ಲೂಕು ಮೈಸೂರು ಜಿಲ್ಲೆಯ ಪ್ರಮುಖ ತಾಲ್ಲೂಕಾಗಿದ್ದು , ಇದು 'ಭತ್ತದ ಕಣಜ'ವೆಂದು ಪ್ರಸಿದ್ದವಾಗಿದೆ. ಇದು ಮೈಸೂರು ಜಿಲ್ಲೆಯ ಹಲವು ಭಾಗಕ್ಕೆ ಭತ್ತವನ್ನು ಪೂರೈಸುತ್ತದೆ. ಕನ್ನಡನಾಡೀನ ಜೀವನಾಡಯಾದ ಕಾವೇರಿಯ ಬಹುಪಾಲು ಈ ತಾಲ್ಲೂಕಿನಲ್ಲಿ ಸೇರಿದೆ. ಇದನ್ನು ೧೯೨೫ರ ಸುಮಾರಿನಲ್ಲಿ ಕೃಷ್ಣರಾಜ ಒಡಯರು ಎಡತೊರೆ ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ಮುಂದೆ ಅದು ೩ಕಿ,ಮೀ, ಎತ್ತರವಾದ ಪ್ರದೆಶದಲ್ಲಿ ಕೃಷ್ಣರಾಜನಗರ ಎ೦ಬ ಹೆಸರಿನಿಂದ ಸ್ಠಾಪನೆಯಾಯಿತು. ಈ ತಾಲ್ಲೂಕಿನಲ್ಲಿ ಅರ್ಕೆಶ್ವರ ಸ್ವಾಮಿ ದೇವಸ್ಠಾನವಿದೆ. ಇದನ್ನು ಸೂರ್ಯ ಉದಯನಾಡೆಂದು ಕರೆಯುತ್ತಿದ್ದರು. ಈ ತಾಲ್ಲೂಕಿನಲ್ಲಿ ಹಲವು ಗ್ರಾಮಗಳೂ ಸೇರಿವೆ. ಈ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ೮೮ ಹಾದು ಹೋಗಿದೆ ಮೈಸೂರು-ಹಾಸನಗಳ ರೈಲು ಸಂಪರ್ಕ ಈ ತಾಲ್ಲೂಕಿನ ಮೂಲಕ ಸಾಗಿದೆ. ರಸ್ತೆಗಳೂ ಸುಗಮವಾಗಿವೆ.