ಅರೇಹಳ್ಳಿ ಸಂಪಾದಿಸಿ

ಅರೇಹಳ್ಳಿಯೂ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲಿರುವ ಒಂದು ಗ್ರಾಮವಾಗಿದೆ. ಜಿಲ್ಲೆಯಿಂದ ೪೬ ಕಿ ಮೀ ಹಾಗೂ ರಾಜ್ಯ ರಾಜಧಾನಿಯಿಂದ ೨೨೮ ಕಿ ಮೀ ಅಂತರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ೯೫೩ ಮೀಟರ್ ಎತ್ತರದಲ್ಲಿದ್ದು ಕಾಫಿ ಇಲ್ಲಿನ ಪ್ರಮುಖ ಬೆಳೆಯಾಗಿದೆ


ಅರೇಹಳ್ಳಿ
ದೇಶ   ಭಾರತ
ರಾಜ್ಯ   ಕರ್ನಾಟಕ
ಜಿಲ್ಲೆ   ಹಾಸನ
ತಾಲ್ಲೂಕು   ಬೇಲೂರು
ಸಮಯ ವಲಯ   IST (UTC+5:30)
ನಿರ್ದೇಶಾಂಕಗಳು 13°03'N  75°50' E
ಪಿನ್ ಕೋಡ್   ೫೭೩೧೦೧
ಎಸ್.ಟಿ.ಡಿ ಕೋಡ್   ೦೮೧೭೭

ಜನಸಂಖ್ಯಾಶಾಸ್ತ್ರಸಂಪಾದಿಸಿ

೨೦೧೧ನೇ ಜನಗಣತಿಯ ಪ್ರಕಾರ ಅರೇಹಳ್ಳಿಯ ಜನಸಂಖ್ಯೆ ೭೪೬೭. ಅದರಲ್ಲಿ ೩೬೩೭ ಪುರುಷರು ಹಾಗೂ ೩೮೩೦ ಮಹಿಳೆಯರು ಇದ್ದಾರೆ.

ಸಾರಿಗೆಸಂಪಾದಿಸಿ

ಗ್ರಾಮದಲ್ಲಿ ರೈಲು ಮಾರ್ಗವಿಲ್ಲ. ರಸ್ತೆ ಮಾರ್ಗವನೇ ಅವಲಂಬಿಸಿದೆ. ಸಕಲೇಶಪುರದಿಂದ ೧೪ ಕಿ ಮೀ ಹಾಗೂ ಬೇಲೂರುನಿಂದ ೨೨ ಕಿ ಮೀ ಇದ್ದು ಬಸ್ಸಿನ ವ್ಯವಸ್ಥೆ ಇದೆ. ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಹಾಸನಕ್ಕೆ ತೆರಳಲು ರಸ್ತೆ ಮಾರ್ಗವಿದೆ.

ಕೃಷಿಸಂಪಾದಿಸಿ

ಸ್ಥಳೀಯ ರೈತರು ತಮ್ಮ ತೋಟದಲ್ಲಿ ಕಾಫಿಯನ್ನು ಬೆಳೆಯುತ್ತಾರೆ. ಇದನ್ನು ಅರೇಹಳ್ಳಿ ಕಾಫಿ ಎಂದೇ ಕರೆಯುತ್ತಾರೆ. ಇದರೊಂದಿಗೆ ಕಾಳುಮೆಣಸು, ಶುಂಠಿಯನ್ನು ಬೆಳೆಯುತ್ತಾರೆ.

ಶಿಕ್ಷಣಸಂಪಾದಿಸಿ

ಅರೇಹಳ್ಳಿ ಹಾಸನ ಜಿಲ್ಲೆ ಬೇಲೂರು ಬ್ಲಾಕ್ ನಲ್ಲಿರುವ ಒಂದು ಶಾಲಾ ಕ್ಲಸ್ಟರ್ ಆಗಿದ್ದು, ಇದರಲ್ಲಿ ಸುಮಾರು 22 ಶಾಲೆ ಗಳಿವೆ. ಅರೇಹಳ್ಳಿ ಯೂ ಅನೇಕ ಶಾಲಾ ಕಾಲೇಜುಗಳಿವೆ.

ಆಸ್ಪತ್ರೆಗಳುಸಂಪಾದಿಸಿ

ಅರೇಹಳ್ಳಿಯಲ್ಲಿ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ ಹಾಗೂ ಪಶು ಆಸ್ಪತ್ರೆ ಇದೆ

ಸಂತೆ ಮತ್ತು ಜಾತ್ರೆಸಂಪಾದಿಸಿ

ಪ್ರತಿ ಸೋಮವಾರ ಅರೇಹಳ್ಳಿಯಲ್ಲಿ ಸಂತೆ ಇರುತ್ತದೆ. ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರು ಬರುತ್ತಾರೆ ಪ್ರತಿ ವರ್ಷ ಮಾರ್ಚ್ ನಲ್ಲಿ ಶನೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ. ಕೇಂಡಸೇವೆ, ಅನ್ನಸಂತರ್ಪಣೆಯೂ ಇರುತ್ತದೆ.