ಅರೆಭಾಷೆ
ಅರೆಭಾಷೆಯು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಪರಿಸರದಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಮತ್ತು ಕಾಸರಗೋಡಿನ ಬಂದಡ್ಕ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಕನ್ನಡದ ಒಂದು ಸಾಮಾಜಿಕ ಉಪ ಭಾಷೆಯಾಗಿದೆ. ಅರೆಭಾಷೆಯು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗೌಡ ಜನಾಂಗದ ಮಾತೃಭಾಷೆಯಾಗಿದೆ.
ಅರೆಭಾಷೆ ಗೌಡ ಕನ್ನಡ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಪ್ರದೇಶ: | ಸುಳ್ಯ, ಕೊಡಗು ಮತ್ತು ಕಾಸರಗೋಡು | |
ಒಟ್ಟು ಮಾತನಾಡುವವರು: |
೪೦೦,೦೦೦[೧] | |
ಭಾಷಾ ಕುಟುಂಬ: | ದಕ್ಷಿಣ ದ್ರಾವಿಡ ತುಳು ಕನ್ನಡ ಭಾಷೆಗಳು ಅರೆಭಾಷೆ | |
ಬರವಣಿಗೆ: | ಕನ್ನಡ ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | — | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಇತಿಹಾಸ
ಬದಲಾಯಿಸಿಈ ಭಾಷೆಯಲ್ಲಿ ಇಂದಿಗೂ ಕಾಣಸಿಗುವ ಕೆಲವು ವಿಶಿಷ್ಟ ಪದಗಳು ಸಾವಿರ ವರ್ಷಗಳಿಗೂ ಹಳೆಯವು ಹೌದಾದರೂ, ಅವು ಅರೆಭಾಷೆಯ ರೂಪದಲ್ಲಿ ಕಾಣಿಸಿಕೊಂಡು 500 ವರ್ಷಗಳಷ್ಟು ಹಳೆಯದು.[೨] ಏಕೆಂದರೆ ಅರೆಭಾಷೆಯನ್ನು ಪ್ರಧಾನವಾಗಿ ಮಾತಾಡುವ ಸುಳ್ಯ ಪರಿಸರದ ಗೌಡ ಸಮುದಾಯದ ಜನರು, ಮೇಲೆ ಹೇಳಿದ ಭೌಗೋಳಿಕ ಪರಿಸರದ ಮೂಲ ನಿವಾಸಿಗಳೇನೂ ಅಲ್ಲ. ಅವರು ಈಗಿನ ಹಾಸನ ಪರಿಸರದಲ್ಲಿರುವ ಐಗೂರು ಪ್ರಾಂತ್ಯದಿಂದ ಕರಾವಳಿಯ ಕಡೆಗೆ ವಲಸೆ ಹೋದವರು. ಈ ವಲಸೆಗೆ ನಿರ್ದಿಷ್ಟ ಕಾರಣಗಳೇನು? ಈ ವಲಸೆ ಯಾವಾಗ ನಡೆಯಿತು ಎಂದೆಲ್ಲಾ ಹೇಳಲು ಲಿಖಿತ ಆಧಾರಗಳೇನೂ ಇಲ್ಲ. ಮೌಖಿಕ ಆಧಾರಗಳ ಸಹಾಯದಿಂದ ಇದು 15-16ನೇ ಶತಮಾನದಲ್ಲಿ ನಡೆದಿರಬಹುದಾದ ಘಟನೆ ಎಂದು ಊಹಿಸಬಹುದು.ಅಂದಿನಂತೆ ಇಂದಿಗೂ ಹಾಸನ ಪರಿಸರದಲ್ಲಿ ಅರೆ ಭಾಷೆ ಪ್ರಚಲಿತದಲ್ಲಿ ಇಲ್ಲ. ಇದು ಹೌದಾದರೆ ಅರೆ ಭಾಷೆಗೆ ಹೆಚ್ಚೆಂದರೆ 400ರಿಂದ 500 ವರ್ಷಗಳ ದಾಖಲೆಗಳ ಇತಿಹಾಸವಿದೆ. ಅರೆಭಾಷೆಯಲ್ಲಿರುವ ಅನೇಕ ಪದಗಳು ಮೂಲ ದ್ರಾವಿಡದ ಕಾಲಕ್ಕೆ ಹೋಗಬಹುದು, ಆದರೆ ಅದರ ಆ ಭಾಷೆಯ ಈಗಿನ ಸ್ವರೂಪ ಅಷ್ಟು ಹಳೆಯದಲ್ಲ.
ಸಾಮಾಜಿಕ ಹಿನ್ನೆಲೆ
ಬದಲಾಯಿಸಿಈ ಅರೆಭಾಷಿಕ ಗೌಡರು ಇತರ ಸಮುದಾಯದ ಜನರೊಂದಿಗೆ ಸೇರಿಕೊಂಡು ಕೊಡಗಿನಿಂದ ಬ್ರಿಟಿಷರನ್ನು ಪದಚ್ಯುತಗೊಳಿಸಲು ಸುಮಾರು 5 ವರ್ಷಗಳ ಕಾಲ (1832-37) ಹೋರಾಡಿದ್ದು ಇದೀಗ 'ಕಲ್ಯಾಣಪ್ಪನ ಕಾಟುಕಾಯಿ' ಎಂದು ಪ್ರಸಿದ್ಧವಾಗಿದೆ. ಈ ಹೋರಾಟದಿಂದ ಬ್ರಿಟಿಷರ ಅವಕ್ರಪೆಗೆ ಒಳಗಾದ ಸುಳ್ಯ ಪರಿಸರವು ಅಭಿವದ್ಧಿಯಾಗದೆ ಹಿಂದೆ ಬಿತ್ತು. 1970-80ರ ದಶಕದಲ್ಲಿ ಅಡಿಕೆಗೆ ಒಳ್ಳೆಯ ಮಾರುಕಟ್ಟೆ ದೊರಕಿದ ಆನಂತರ ಸುಳ್ಯವು ಅಭಿವದ್ಧಿಯಾಯಿತು. ಇಂಥ ಬೆಳವಣಿಗೆಗೆಳ ಜತೆಗೆ ಅರೆಭಾಷೆ- ಸಾಹಿತ್ಯಗಳ ಬಗೆಗೂ ನಿಧಾನವಾಗಿ ಜನರಲ್ಲಿ ತಿಳಿವಳಿಕೆ ಹೆಚ್ಚತೊಡಗಿತು.
ಶಬ್ದ ಅರ್ಥ
ಬದಲಾಯಿಸಿಅರೆ ಭಾಷೆಯೆಂಬ ಪದ ಕನ್ನಡವು ಅರ್ಧರೂಪದಲ್ಲಿ ಉಳಿದಿರುವುದರಿಂದ ಅದನ್ನು ಅರೆಭಾಷೆಯೆಂದು ಕರೆದಿರಬಹುದು. ಉದಾಹರಣೆಗೆ 'ಹೋಗುತ್ತೇನೆ' ಎಂಬ ಕನ್ನಡ ಪದವು ಅರೆಭಾಷೆಯಲ್ಲಿ 'ಹೋನೆ'; 'ಬರುತ್ತೇನೆ-ಬನ್ನೆ'; 'ತಿನ್ನುತ್ತೇನೆ' ಎಂಬುದು 'ತಿಂದನೆ' ಎಂದೆಲ್ಲಾ ಆಗುತ್ತದೆ. ಕನ್ನಡದಿಂದ ಇದೀಗ ಮರೆಯಾಗುತ್ತಿರುವ ಙ, ಞ, ಗಳೆಲ್ಲ ಈ ಭಾಷೆಯಲ್ಲಿ ಈಗಲೂ ಉಳಿದಿದೆ.ಹಳೆಗನ್ನಡದ ಶಬ್ದಗಳು ಅರೆಭಾಷೆಯಲ್ಲಿ ಬಳಕೆಯಲ್ಲಿದೆ.
ಅಕ್ಷರಮಾಲೆ
ಬದಲಾಯಿಸಿಅರೆಭಾಷೆ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
ಸ್ವರಗಳು | ||||||||
---|---|---|---|---|---|---|---|---|
ಹ್ರಸ್ವ | ಅ | ಇ | ಉ | ಋ | ಎ | ಒ | ||
ದೀರ್ಘ | ಆ | ಈ | ಊ | ೠ | ಏ | ಐ | ಓ | ಔ |
ಯೋಗವಾಹಗಳು | ಅಂ (ಅನುಸ್ವಾರ) | ಅಃ (ವಿಸರ್ಗ) |
ವರ್ಗೀಯ ವ್ಯಂಜನಗಳು | |||
---|---|---|---|
ಕಂಠ್ಯ (ಕವರ್ಗ) | ಕ | ಗ | ಙ |
ತಾಲವ್ಯ (ಚವರ್ಗ) | ಚ | ಜ | ಞ |
ಮೂರ್ಧನ್ಯ (ಟವರ್ಗ) | ಟ | ಡ | ಣ |
ದಂತ್ಯ (ತವರ್ಗ) | ತ | ದ | ನ |
ಓಷ್ಠ್ಯ (ಪವರ್ಗ) | ಪ | ಬ | ಮ |
ಅವರ್ಗೀಯ ವ್ಯಂಜನಗಳು | ||||||
---|---|---|---|---|---|---|
ಯ | ರ | ಲ | ವ | ಸ | ಹ | ಳ |
ಬಳಕೆ
ಬದಲಾಯಿಸಿಕನ್ನಡ | ಅರೆಭಾಷೆ |
---|---|
ನಾನು | ನಾ |
ನಾವು | ನಾವ್ |
ನೀನು | ನೀ |
ನೀವು | ನೀವ್ |
ಅವನು | ಅಂವ |
ಅವಳು | ಅದ್ |
ಅದು | ಅದ್ |
ಅವರು | ಅವು |
ಅವು | ಅವು |
ಅರೆಭಾಷೆ ಕನ್ನಡಿಗರು
ಬದಲಾಯಿಸಿಅರೆಭಾಷೆ ಗೌಡರು ಸುಳ್ಯ ತಾಲೂಕು ಹಾಗೂ ಗಡಿಗ್ರಾಮಗಳಾದ ಕಾಸರಗೋಡಿನ ಬಂದಡ್ಕ, ದೇಲಂಪಾಡಿ, ಪನತ್ತಡಿ ಅಥವಾ ಕೊಡಗು ಗೌಡರು ಮಡಿಕೇರಿ ಮತ್ತು ಸೋಮವಾರ ಪೇಟೆ ಮತ್ತು ತುಳು ಗೌಡರು ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಮಂಗಳೂರು, ಕಡಬ ಭಾಗಗಳಲ್ಲಿ ಒಂದು ಪ್ರಮುಖ ಜನಾಂಗದ ಗುಂಪಾಗಿದ್ದಾರೆ. ಆದ್ದರಿಂದ, ಕೆಲವು ಬಾರಿ ಕೊಡಗು (ಕೂರ್ಗ್) ಭಾಗವಾದ ಸುಳ್ಯದಲ್ಲಿ ಬದುಕುತ್ತಿರುವ ತುಳುವರು ಮತ್ತು ದಕ್ಷಿಣ ಕನ್ನಡ ಗೌಡರನ್ನು ಕೊಡಗು ಮತ್ತು ದಕ್ಷಿಣಕನ್ನಡದ ಗೌಡರು ಎಂದು ಕರೆಯಲಾಗುತ್ತದೆ.
ಅರೆಭಾಷೆ ಬರಹಗಾರರು
ಬದಲಾಯಿಸಿ- ಯಶವಂತ ಕುಡೆಕಲ್ಲು- ತೊಂಬರ, ಜೇನೆರಿ (ಪದ್ಯ ಪುಸ್ತಕಗಳು)
- ಬಾರಿಯಂಡ ಜೋಯಪ್ಪ - ಚಾಂಪ (ಕತೆ ಪುಸ್ತಕ)
- ಹೊದ್ದೆಟ್ಟಿ ಭವಾನಿಶಂಕರ್- ಕವನ ಸಂಕಲನಗಳು
- ತೇಜಕುಮಾರ ಬಡ್ಡಡ್ಕ(ಕುಡೆಕಲ್ಲು)
- ಕಾವೇರಮ್ಮ ಮಾವಜಿ
- ಡಾ.ಕೋಡಿ ಕುಶಾಲಪ್ಪ ಗೌಡ
- ಪುನೀತ್ ರಾಘವೇಂದ್ರ ಕುಂಟುಕಾಡು
- ವಿನೋದ್ ಮೂಡಗದ್ದೆ
- ಗುತ್ತಿಮುಂಡನ ಇಂದಿರಾ-ಅರೆಭಾಷೆಸುಪ್ರಭಾತ.ಕವನ.ಕಥೆ
- ಚಂದ್ರಾವತಿ ಬಡ್ಡಡ್ಕ
- ಭವಾನಿಶಂಕರ ಅಡ್ತಲೆ
- ಎಡಕೇರಿ ವಿಶ್ವನಾಥ್
ಅರೆಭಾಷಾ ಅಧ್ಯಯನ
ಬದಲಾಯಿಸಿ- ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಯಲ್ಲಿ ರಾಮಾಯಣ ಕೃತಿಯನ್ನು ಬರೆದರು.
- ಕೆ.ಆರ್.ಗಂಗಾದರರು-ಶಬ್ಧಕೋಶವನ್ನು ಸಂಪಾದಿಸಿದ್ದಾರೆ.
- ಸುಳ್ಯ ಪರಿಸರದಲ್ಲಿ ಮಾತನಾಡುವ ಗೌಡಕನ್ನಡ/ಅರೆಭಾಷೆ ಯಲ್ಲಿ ನೂರಾರು ಕತೆಗಳಿವೆಯೆಂದು ಡಾ. ವಿಶ್ವನಾಥ ಬದಿಕಾನ ಅವರ (ಎಂ.ಪೀಲ್.ಪ್ರೌಡ ಪ್ರಬಂಧ) "ಗೌಡಕನ್ನಡದ ಜನಪದ ಕತೆಗಳು" ಕೃತಿಯಿಂದ ತಿಳಿದು ಬರುತ್ತದೆ.
- ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ತೊಡಗಿಸಿಕೊಂಡ ಹಲವರನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. ಪುರುಷೋತ್ತಮ ಬಿಳಿಮಲೆ, ವಿಶ್ವನಾಥ ಬದಿಕಾನ, ಪೂವಪ್ಪ ಕಣಿಯೂರು, ಕೋಡಿ ಕುಶಾಲಪ್ಪ ಗೌಡ ಮುಂತಾದವರು ಸಂಶೋಧನೆಗೆ ಅರೆಭಾಷೆಯನ್ನು ಒಳಪಡಿಸಿದ್ದಾರೆ.
ಭಾಷಾ ಬಳಕೆ
ಬದಲಾಯಿಸಿಅರೆಭಾಷೆಯು ಕೊಡಗು ಜಿಲ್ಲೆಯಲ್ಲಿ ಹಾಗೂ ದಕ್ಷಿಣ ಕನ್ನಡದ ಸುಳ್ಯ ಗೌಡರ ಮುಖ್ಯ ಭಾಷೆ, ಪುತ್ತೂರು , ಮಂಗಳೂರು ಪದ್ಧತಿಯು ತುಳುಗೌಡರಿಗೆ ಪ್ರಭಾವ ಬೀರಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಅರೆಭಾಷ ಸುದ್ದಿಯಾಗಿ ಅರೆಭಾಷೆಯನ್ನು ಮಡಿಕೇರಿ ಆಕಾಶವಾಣಿಯ ದೈನಂದಿನ ಪ್ರಸಾರದಲ್ಲಿ ರಾತ್ರಿ 7:45 ಕ್ಕೆ, ಸುಳ್ಯ ಮತ್ತು ಕೊಡಗು ಪ್ರದೇಶದಲ್ಲಿ ನಡೆದ ವಿವಿಧ ಚಟುವಟಿಕೆಗಳನ್ನು ಸ್ಥಳೀಯ ಸುದ್ದಿ ಒಳಗೊಂಡು ಪ್ರಸಾರ ಮಾಡುತ್ತಿದೆ.
ಉಲ್ಲೇಖಗಳು
ಬದಲಾಯಿಸಿ- ↑ ORGI. "Census of India: Abstract of speakers' strength of languages and mother tongues –2001". censusindia.gov.in.
- ↑ "ಆರ್ಕೈವ್ ನಕಲು". Archived from the original on 2020-10-22. Retrieved 2016-08-26.