ಅರುಣಾ ಶಾ‌ನ್‌ಭಾಗ್

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರದವಳು. ೧ನೇ, ಜೂನ್, ೧೯೪೮ ರಲ್ಲಿ ಜನಿಸಿದಳು ತನ್ನೂರಿನ ಶಾಲೆಯಲ್ಲೇ ಕಲಿತು, ಕಾಯಿಲೆಯಿಂದ ಬೆಳೆದು ದೊಡ್ಡವಳಾದಳು. ಬಳಲುವ ರೋಗಿಗಳಿಗೆ ಶುಶೄಷೆ ಮಾಡುವ ಉದ್ದಿಶ್ಯದಿಂದ ಬೊಂಬಾಯಿಗೆ ಬಂದು 'ಕೆ.ಇ.ಎಮ್ ಆಸ್ಪತ್ರೆ'ಯಲ್ಲಿ ಪರಿಚಾರಿಕೆಯಾಗಿ ಸೇರಿ ತನಗೆ ಶಿಸ್ತಿನಿಂದ ನಿಭಾಯಿಸುತ್ತಿದ್ದಳು. ವಿವಾಹಿಕ ಜೀವನಕ್ಕೆ ಪಾದಾರ್ಪಣೆ ಸಿದ್ಧತೆಯಲ್ಲಿದ್ದಳು. ೨೫ ರ ಹರೆಯದ ಯುವತಿಯಾಗಿದ್ದ 'ಅರುಣಾ,' ೧೯೭೩ ರ ನವೆಂಬರ್, ತಿಂಗಳ ೨೭ ರಂದು ಆಕೆ ಕೆಲಸಮಾಡುತ್ತಿದ್ದ ಆಸ್ಪತ್ರೆಯಲ್ಲೇ ಅತ್ಯಾಚಾರಕ್ಕೆ ಬಲಿಯಾದಳು. ನಾಯಿಗಳನ್ನು ಕಟ್ಟಿಹಾಕುವಂತಹ ಸರಪಳಿಯಿಂದ ಆಕೆಯಕುತ್ತಿಗೆ ಕಟ್ಟಿ ಅತ್ಯಾಚಾರವೆಸಗಿದ್ದ ಅದೇ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದ 'ಜಾಡಮಾಲಿ ಸೋಹನ್ ಲಾಲ್ ವಾಲ್ಮೀಕಿ'ಯೆಂಬ ಎಂಬ ವ್ಯಕ್ತಿಯಿಂದ. ಅತ್ಯಾಚಾರದ ಮಿದುಳಿನಲ್ಲಿರಕ್ತಸ್ರಾವವಾಗಿ ದೃಷ್ಟಿ ಕುಂಥತವಾಗಿದ್ದಲ್ಲದೆ, ಮಾತನಾಡುವ ಶಕ್ತಿ ಹಾಗೂ ಪರಿಸರದ ಬಗ್ಗೆ ಸಂವೇದನೆಯನ್ನೂ ಘಾಸಿಗೊಳಿಸಿತು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರ ಸಹಾಯ, ಸಹಕಾರದಿಂದು ೩೭ ವರ್ಷಗಳ ಕಾಲ ಜೀವಂತಶವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ 'ನಾಲ್ಕನೆಯ ನಂಬರಿನ ವಾರ್ಡ್' ನಲ್ಲಿ ಕಾಲನೂಕುತ್ತಿದ್ದಳು. ಅತ್ಯಾಚಾರಿಗೆ ೭ ವರ್ಷ ಶಿಕ್ಷೆಯಾಯಿತು.

ಕೆ.ಇ.ಎಂ.ಆಸ್ಪತ್ರೆಯ ದಾದಿಯರ ನಿರಂತರ ಸೇವೆ

ಬದಲಾಯಿಸಿ

ಕೆ.ಇ.ಎಂ. ಆಸ್ಪತ್ರೆಯ ದಾದಿಯರು ಅತ್ಯಂತ ಕಾಳಜಿವಹಿಸಿ 'ಅರುಣಾ ಶಾನ್ ಭಾಗಳನ್ನು ಯನ್ನು ನೋಡಿಕೊಳ್ಳುತ್ತಿದ್ದರು. ಅರುಣಾ ಶಾನ್ ಭಾಗ್ ಳ ಅತ್ಯಂತ ಕರುಣಾಜನಕ ಸತ್ಯಕಥೆಯನ್ನು ಬೆಳಕಿಗೆ ತರಲು ಸತತವಾಗಿ ಪ್ರಯತ್ನಿಸುತ್ತಿರುವ ಗೆಳತಿ, 'ಪಿಂಕಿ ವಿರಾಣಿ'. ಆಕೆಯ 'ಇನ್ವೆಸ್ಟಿಗೇಟೀವ್ ಜರ್ನಲಿಸಮ್' ನ ಪದ್ಧತಿಯನ್ನು ಅಳವಡಿಸಿ ಹೆಚ್ಚಿನ ಸಂಶೋಧನೆಯ ಮೂಲಕ ಪುಸ್ತಕರೂಪದಲ್ಲಿ ದಾಖಲಿಸಿ ಪ್ರಕಟಿಸಿದ್ದಾಳೆ. ಪುಸ್ತಕದ ಮರಾಠಿ ಅನುವಾದವೂ ಸಿದ್ಧವಾಗಿದೆ. 'ಅರುಣಾಚಿ ಗೋಸ್ಟ್' ಬಿಡುಗಡೆಯಾಗಿದೆ. []

  1. ಅರುಣಾಳ ಕಥೆ, ವ್ಯಥೆ, ಮುಖಾಂತರ, ಪ್ರಿಯತಮ, ಕರ್ನಾಟಕ ಮಲ್ಲ ದಿನ ಪತ್ರಿಕೆ, ಮಂಗಳವಾರ,೧೫, ಮಾರ್ಚ್, ೨೦೧೧, ಪುಟ-೪