ಅರಸಿನಗುಂಡಿ ಜಲಪಾತ
ಅರಸಿನಗುಂಡಿ ಜಲಪಾತ[೧]ವು ಕೊಲ್ಲೂರಿನಿಂದ ೬ ಕಿಮೀ ದೂರದಲ್ಲಿದೆ. ಇದು ಕೊಡಚಾದ್ರಿ ಪ್ರದೇಶದ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಕೊಡಚಾದ್ರಿ ಬೆಟ್ಟಗಳ ಬುಡದಿಂದ ಮುಂದೆ ಸಾಗಬಹುದು. ಚಾರಣದ ಅಪಾಯದ ಮಟ್ಟ ಮಧ್ಯಮವಾಗಿದೆ. ಸೂರ್ಯನ ಬೆಳಕು ನೀರಿನಲ್ಲಿ ಬೀಳುವ ಸಮಯದಲ್ಲಿ ನೀರು ಸುಂದರವಾದ ಮಳೆಬಿಲ್ಲನ್ನು ರೂಪಿಸುತ್ತದೆ. ನೆಲವನ್ನು ಸ್ಪರ್ಶಿಸುವಾಗ ಉಂಟಾಗುವ ಅರಸಿನ (ಹಳದಿ) ಬಣ್ಣದಿಂದಾಗಿ ಜಲಪಾತಕ್ಕೆ ಅರಸಿನಗುಂಡಿ ಎಂಬ ಹೆಸರು ಬಂದಿದೆ.
ಈ ಜಲಪಾತವು ಕಾಡಿನೊಳಗೆ ಆಳವಾಗಿದೆ ಮತ್ತು ಕೊಡಚಾದ್ರಿ ಬೆಟ್ಟಗಳಿಗೆ ಬಹಳ ಹತ್ತಿರದಲ್ಲಿದೆ. ಕೊಲ್ಲೂರಿನಿಂದ ೨ ಕಿಮೀ ನಂತರ ಪ್ರಾರಂಭವಾಗುವ ಕಾಡಿನೊಳಗೆ ಪ್ರವೇಶಿಸಲು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಅರಣ್ಯಾಧಿಕಾರಿಗಳ ಅನುಮತಿ ತೆಗೆದುಕೊಳ್ಳಬೇಕು. ಜಲಪಾತವನ್ನು ತಲುಪಲು ಮೂಕಾಂಬಿಕಾ ದೇವಸ್ಥಾನದಿಂದ ಸುಮಾರು ೬ ಕಿಲೋಮೀಟರ್ ಪ್ರಯಾಣಿಸಬೇಕು. ಜಲಪಾತದ ಸಮೀಪದಲ್ಲಿ ಜಿಗಣೆಗಳ ಸಂಖ್ಯೆ ಅಧಿಕವಾಗಿದೆ.
[೨] ಈ ಸ್ಥಳವು ಚಾರಣಕ್ಕೆ ಪ್ರಸಿದ್ದವಾಗಿದೆ. ಪರಿಶೋಧಕರು ನಕ್ಷೆ ಮತ್ತು ಇತರ ನಿರ್ದೇಶನ ಸೂಚನೆಗಳನ್ನು ಕೊಂಡೊಯ್ಯಲು ಸೂಚಿಸುತ್ತಾರೆ. ಜಲಪಾತವನ್ನು ತಲುಪಲು ಮಾರ್ಗವು ವಿಶೇಷವಾಗಿ ಮಳೆಗಾಲದಲ್ಲಿ ಗೊಂದಲಮಯವಾಗಿರುತ್ತದೆ ಇಂತಹ ಸಂದರ್ಭದಲ್ಲಿ ಸ್ಥಳೀಯ ಮಾರ್ಗದರ್ಶಿಗಳು ದಾರಿ ತಿಳಿಯಲು ಸಹಕರಿಸುತ್ತಾರೆ. ಇದು ಮೂಕಾಂಬಿಕಾ ಅರಣ್ಯ ಸಂರಕ್ಷಿತ ಪ್ರದೇಶವಾಗಿದೆ.