ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ
ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ ಅಮೇರಿಕ ದೇಶದ ಉಚ್ಚ ಕಾನೂನನ್ನು ಉಳ್ಳ ಸಂವಿಧಾನ. ಪ್ರಥಮ ಬಾರಿಗೆ ಇದು ಸೆಪ್ಟಂಬರ್ ೧೭, ೧೭೮೭ರಂದು ಫಿಲಡೆಲ್ಫಿಯದಲ್ಲಿನ ಸಂವಿಧಾನ ರಚನ ಸಭೆಯಲ್ಲಿ ಅಂಗೀಕಾರಗೊಂಡು ಮುಂದೆ ಸಂವಿಧಾನದಲ್ಲಿ ನಮೂದಿತ ಎಲ್ಲಾ ರಾಜ್ಯಗಳಿಂದ ಒಪ್ಪಿಗೆ ಪಡೆಯಿತು.[೧][೨] ಇಂದಿಗೂ ಜಾರಿಯಲ್ಲಿರುವ ಲಿಖಿತ ಸಂವಿಧಾನಗಳಲ್ಲಿ ಇದೇ ಅತ್ಯಂತ ಹಳೆಯದು.