ಅಮೇರಿಕನ್ ಇಂಟರನ್ಯಾಷನಲ್ ಗ್ರುಪ್

ಅಮೇರಿಕನ್ ಇಂಟರನ್ಯಾಷನಲ್ ಗ್ರುಪ್ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಜಗತ್ತಿನ ಅತಿ ದೊಡ್ಡ ವಿಮಾ ಕಂಪನಿಗಳಲ್ಲೊಂದು. ಇತ್ತೀಚೆಗೆ ಈ ಕಂಪನಿಯು ದಿವಾಳಿಯ ಅಂಚಿನಲ್ಲಿತ್ತು. ಇದರ ಮುಖ್ಯ ಕಚೇರಿಯು ನ್ಯೂಯಾರ್ಕ ನಗರದಲ್ಲಿದೆ. ೨೦೦೮ರ ಫೋರ್ಚ್ಯುನ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ಇದು ೧೮ನೇಯ ಸ್ಥಾನದಲ್ಲಿತ್ತು. ೧೬ ಸೆಪ್ಟಂಬರ್ ೨೦೦೮ರಂದು ಅಮೇರಿಕ ದೇಶದ ಫೆಡರಲ್ ರಿಜರ್ವ್ ೮೫ ಬಿಲಿಯನ್ ಡಾಲರ್ ಸಾಲವನ್ನು ಈ ಕಂಪನಿಯನ್ನು ಉಳಿಸಿತು, ಇದರಿಂದಾಗಿ ಅಮೇರಿಕಾ ಸರಕಾರ ಈ ಕಂಪನಿಯಲ್ಲಿ ೭೯.೯ಶೇಕಡಾ ಅಧಿಕಾರವನ್ನು ಪಡೆಯಿತು. ಈ ಕಂಪನಿಯು ಮೂಲತಃ ಚೀನಾದಲ್ಲಿ ಜನ್ಮ ತಳೆದಿತ್ತು.

ನ್ಯೂಯಾರ್ಕ್ ನಗರದಲ್ಲಿರುವ ಏಐಜಿ ಕಂಪನಿಯ ಕಟ್ಟಡ

ಬಾಹ್ಯ ಸಂಪರ್ಕ

ಬದಲಾಯಿಸಿ