ಅಮರೇಶ ನುಗಡೋಣಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕನ್ನಡ ಕಥೆಗಾರರಾದ ಪ್ರೊ. ಅಮರೇಶ ನುಗಡೋಣಿಯವರು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ' ನುಗಡೋಣಿ' ಯಲ್ಲಿ ೦೨.೦೬.೧೯೫೯ರಲ್ಲಿ ಜನಿಸಿದರು. ಎಂ.ಎ., ಪಿಎಚ್.ಡಿ ಪದವೀಧರರು. ಪ್ರಸ್ತುತ ಹೊಸಪೇಟೆಯಲ್ಲಿ ವಾಸವಾಗಿದ್ದಾರೆ.
ವೃತ್ತಿ
ಬದಲಾಯಿಸಿಕಥೆಗಾರರು, ಕಾದಂಬರಿಕಾರರು, ನಿವೃತ್ತ ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕೃತಿಗಳು
ಬದಲಾಯಿಸಿ೧. ಕಥೆ, ಕಾದಂಬರಿಗಳು
1. ಮಣ್ಣು ಸೇರಿತು ಬೀಜ (ಕಥಾಸಂಕಲನ), ೧೯೯೧, ೧೯೯೭, ೨೦೦೭
2. ತಮಂಧದ ಕೇಡು (ಕಥಾಸಂಕಲನ), ೨೦೦೭
3. ಸವಾರಿ (ಕಥಾಸಂಕಲನ), ೨೦೦೭
4. ಒಡಲ ಹಂಗು (ಕಥಾಸಂಕಲನ), ೨೦೧೪
5. ಚುಕ್ಕಿ ಮದುವೆ ಪ್ರಸಂಗ (ಕಥಾಸಂಕಲನ), ೨೦೧೭
6.ಬುತ್ತಿ (ಬಾಲ್ಯದ ಅನುಭವ ಕಥನಗಳು), ೨೦೧೭
7. ದಡ ಸೇರಿಸು ತಂದೆ (ಕಥಾಸಂಕಲನ), ೨೦೧೯
8. ದಂದುಗ (ಕಾದಂಬರಿ), ೨೦೨೦
9. ಗೌರಿಯರು (ಕಾದಂಬರಿ), ೨೦೨೧
*೨. ವಿಮರ್ಶೆ, ಸಂಶೋಧನೆಗಳು*
1. ಅರಿವು ನವಸಾಕ್ಷರಿಗಾಗಿ (ಕಥೆಗಳು), ೧೯೯೪, ಪ್ರ. ಕ.ವಿ.ವಿ. ಹಂಪಿ.
2. ಶ್ರೀಕೃಷ್ಣ ಆಲನಹಳ್ಳಿ (ವಿಮರ್ಶೆ), ೧೯೯೫, ಪ್ರ. ಕ.ವಿ.ವಿ. ಹಂಪಿ.
3. ನುಡಿವ ಬೆಡಗು (ತತ್ವಪದ ಸಾಂಸ್ಕೃತಿಕ ಅಧ್ಯಯನ), ೧೯೯೯, ಪ್ರ. ಕ.ವಿ.ವಿ. ಹಂಪಿ.
4. ರಾಯಚೂರು ಜಿಲ್ಲೆಯಲ್ಲಿ ಹೈ, ಕ. ವಿಮೋಚನಾ ಚಳುವಳಿ, ೨೦೦೦, ಪ್ರ. ಕ.ವಿ.ವಿ. ಹಂಪಿ.
5. ಹೈದ್ರಾಬಾದು ಕರ್ನಾಟಕ ಹಾಡುಪಾಡು, ೨೦೦೩, ಪ್ರ. ಕ.ವಿ.ವಿ. ಹಂಪಿ.
6. ನುಡಿವ ಪಾಡು (ವಿಮರ್ಶೆ), ೨೦೧೧.
7. ನುಡಿ ದಂದುಗ (ಸಾಹಿತ್ಯ ಅಧ್ಯಯನ), ೨೦೧೪.
8. ತತ್ವಪದ ಸಾಹಿತ್ಯ ಅಧ್ಯಯನ, ೨೦೧೪,
9. ಸಣ್ಣಕಥೆ : ಸಾಮಾಜಿಕ ವಾಸ್ತವ, ೨೦೧೬
10. ಜೇಡರ ದಾಸಿಮಯ್ಯ (ಭಾರತೀಯ ಸಾಹಿತ್ಯ ನಿರ್ಮಾಪಕರ ಮಾಲೆ), ೨೦೧೮.
11. ವಚನಗಳ ಅನುಸಂಧಾನ, ೨೦೨೧.
12. ಮಧ್ಯಕಾಲೀನ ಸಾಹಿತ್ಯ ಸಂಸ್ಕೃತಿ, ೨೦೨೨.
*೩. ವಿಚಾರ ಸಂಕಿರಣಗಳ ಲೇಖನಗಳ ಸಂಪಾದನೆಗಳು*
1. ಶೂನ್ಯ ಸಂಪಾದನೆಗಳು: ಸಾಂಸ್ಕೃತಿಕ ಮುಖಾಮುಖಿ, ೨೦೦೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
2. ಬಸವಣ್ಣನ ವಚನಗಳು: ಸಾಂಸ್ಕೃತಿಕ ಮುಖಾಮುಖಿ, ೨೦೦೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
3. ಹರಿಶ್ಚಂದ್ರ ಚಾರಿತ್ರ : ಸಾಂಸ್ಕೃತಿಕ ಮುಖಾಮುಖಿ, ೨೦೦೬, ೨೦೧೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
4. ಕನ್ನಡ ಸಂಶೋಧನೆಯ ವೈಧಾನಿಕತೆಗಳು, ೨೦೦೮, ೨೦೧೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
5. ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ, ೨೦೦೯, ೨೦೧೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
6. ನಾನೇಕೆ ಬರೆಯುತ್ತೇನೆ? ೨೦೧೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
7. ಗ್ರಾಮಾಯಣ : ಸಾಂಸ್ಕೃತಿಕ ಮುಖಾಮುಖಿ, ೨೦೧೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
8. ಅಲ್ಲಮಪ್ರಭು ವಚನಗಳು: ಸಾಂಸ್ಕೃತಿಕ ತಿಕ ಮುಖಾಮುಖಿ, ೨೦೧೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
9. ಪುರಂದರದಾಸರ ಸಾಹಿತ್ಯ ಅಧ್ಯಯನಗಳು, ೨೦೧೦, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
10. ದಿನಕರ ದೇಸಾಯಿ-೧೦೦. ಬದುಕು ಬರಹ, ೨೦೧೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
11. ಸರ್ವಜ್ಞನ ತ್ರಿಪದಿಗಳು : ಅನುಸಂಧಾನದ ನೆಲೆಗಳು, ೨೦೧೩, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
12. ಕಥೆ ಹುಟ್ಟುವ ಪರಿ, ೨೦೧೪, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
*೪. ಸಂಪಾದನೆ*
1. ಬಿಸಿಲ ಹನಿಗಳು, ೧೯೯೫, (ಹೈ.ಕ.ಕಥೆಗಾರರ ಪ್ರಾತಿನಿಧಿಕ ಕಥಾಸಂಕಲನ), ಪ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು.
2. ಸಣ್ಣಕಥೆ-೧೯೯೭, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.
3. ಅಮರಚಿಂತ (ಜಂಬಣ್ಣ ಅಮರಚಿಂತರ ಗೌರವ ಗ್ರಂಥ), ೨೦೧೫, ಸಂ. ಮಹಾಂತೇಶ ಮಸ್ಕಿ ಜೊತೆಗೆ ಸಂಪಾದನೆ, ಪ್ರ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು.
4. ಕಲ್ಯಾಣ ಕರ್ನಾಟಕ, ೨೦೧೬, ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ನೆನಪಿನ ಸಂಪುಟ, ಪ್ರ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು.
5. ನುಡಿ ಬಾಗಿನ (ಎಚ್. ಎಸ್. ರಾಘವೇಂದ್ರರಾವ್ ಅವರ ಸಾಹಿತ್ಯ ಕುರಿತ ವಿಮರ್ಶಾ ಕೃತಿ), ಸಂ. ವಿಕ್ರಮ ವಿಸಾಜಿ ಜೊತೆಗೆ ಸಂಪಾದನೆ.
6. ಬಸವಣ್ಣ, ೨೦೨೦. (ಡಾ. ದಂಡೆ ನಂದೀಶ್ವರರೊಂದಿಗೆ), ವಿಜಯ ಕಲ್ಯಾಣ ಪ್ರಕಾಶನ, ಕೊಂಡನಾಯಕನಹಳ್ಳಿ, ಹೊಸಪೇಟೆ
*೫. ಕತೆ ಆಧಾರಿತ ನಾಟಕಗಳ ರಂಗ ಪ್ರದರ್ಶನ*
1. ನೀರು ತಂದವರು : ಎಂ. ರವಿ.
2. ಏ ದಿಲ್ ಮಾಂಗೇ ಮೋರ್ : ಎಂ. ರವಿ.
3. ಪರಿಣಾಮಿ : ದೈವಕ್ಕೆ ಮೊದಲು ಶರಣೆಂಬೆವು : ನಿರ್ದೇಶನ : ರಂಗಸ್ವಾಮಿ.
4. ಪಕ್ವಕ್ಕಲ್ಲದೇ ಪರಿಣಾಮಿ ಕಾಣಿಸದು : ನಿರ್ದೇಶನ : ತಾಯಣ್ಣ ಯರಗೇರಾ.
5. ಸವಾರಿ (ಸುಳ್ಳು ಸಂಸಾರದಾಟ' ಎಂಬ ಹೆಸರಿನಲ್ಲಿ ಪ್ರದರ್ಶನಗೊಂಡಿದೆ.) ನಿರ್ದೆಶನ : ಝಕೀರ ನದಾಫ್.
6. ಚುಕ್ಕಿ ಮದುವೆ ಪ್ರಸಂಗ (ಚುಕ್ಕಿ ಮದುವಿ' ಹೆಸರಿನಲ್ಲಿ ಪ್ರದರ್ಶನ) ನಿರ್ದೆಶನ : ಝಕೀರ ನದಾಫ್.
*೬. ಕತೆ ಆಧಾರಿತ ನಾಟಕ ಕೃತಿಗಳು*
1. ನೀರು ತಂದವರು (ನಾಟಕ ರಚನೆ : ಎಸ್. ಪ್ರಸಾದಸ್ವಾಮಿ)
2. ದೈವಕ್ಕೆ ಮೊದಲು ಶರಣೆಂಬೆವು (ನಾಟಕ ರಚನೆ : ರಂಗಸ್ವಾಮಿ)
3. ಸವಾರಿ ('ಸುಳ್ಳು ಸಂಸಾರದಾಟ' ಎಂಬ ಹೆಸರಿನಲ್ಲಿ ರಚನೆ : ಝಕೀರ ನದಾಫ್)
4. ಚುಕ್ಕಿ ಮದುವೆ ಪ್ರಸಂಗ (ಚುಕ್ಕಿ ಮದುವಿ' ಹೆಸರಿನಲ್ಲಿ ರಚನೆ : ಝಕೀರ ನದಾಫ್)
*೭. ಕಥೆ ಆಧಾರಿತ ಸಿನಿಮಾಗಳು*
1. ಸವಾರಿ (ಕನಸೆಂಬೋ ಕುದುರೆಯನೇರಿ) ನಿರ್ದೇಶಕರು : ಗಿರೀಶ ಕಾಸರವಳ್ಳಿ
2. ನೀರು ತಂದವರು, ನಿರ್ದೇಶಕರು : ಆಸೀಫ್ ಕ್ಷತ್ರಿಯ (ಅತ್ಯುತ್ತಮ ಕಥಾ ಪ್ರಶಸ್ತಿ, ರಾಜ್ಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ : ೨೦೧೮).
3. ದೈವಕ್ಕೆ ಮೊದಲು ಶರಣೆಂಬೆವು, ನಿರ್ದೇಶಕರು : ರಂಗಸ್ವಾಮಿ g. (ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಮೂರನೇ ಸಿನಿಮಾ ಪ್ರಶಸ್ತಿ ಲಭಿಸಿದೆ : ೨೦೨೪).
4. ಧರೆ ಉರಿದರೆ (ವಾಘಚಿಪಾಣಿ, ಬಿಡುಗಡೆ ಹಂತದಲ್ಲಿದೆ), ನಿರ್ದೇಶಕರು : ನಟೇಶ ಹೆಗಡೆ.
*೮. ಡಾ. ಅಮರೇಶ ನುಗಡೋಣಿ ಅವರ ಸಾಹಿತ್ಯವನ್ನು ಕುರಿತ ಪಿಎಚ್.ಡಿ. ಮಹಾಪ್ರಬಂಧಗಳು*
1. ಅಮರೇಶ ನುಗಡೋಣಿಯವರ ಕಥೆಗಳು -ಡಾ. ಧರ್ಮಣ್ಣ , 2017, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ
2. ಅಮರೇಶ ನುಗಡೋಣಿ ಅವರ ಸಮಗ್ರ ಸಾಹಿತ್ಯ - ವಿಜಯನಾಯಕ ಕೆ.ಜಿ. 2020: ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
3. ಡಾ. ಅಮರೇಶ ನುಗಡೋಣಿ ಅವರ ಸೃಜನೇತರ ಸಾಹಿತ್ಯ : ಒಂದು ಅಧ್ಯಯನ -ಗಿರಿಜಾಬಾಯಿ ಬಸವನಗೌಡ 2022, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ
*೯. ಡಾ. ಅಮರೇಶ ನುಗಡೋಣಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪಡೆದ ವಿದ್ಯಾರ್ಥಿಗಳು*
1. ಆರ್. ಗಂಗಭೈರಯ್ಯ , ಸ್ವಾತಂತ್ರ್ಯಪೂರ್ವ ಹೊಸಗನ್ನಡ ಕಥನ ಸಾಹಿತ್ಯದಲ್ಲಿ ದಲಿತ ಲೋಕ, 2005
2. ಆನಂದ ಕೆ.ಆರ್. , ಸಮಕಾಲೀನ ಕನ್ನಡ ಕಥೆಗಳ ಸಾಂಸ್ಕೃತಿಕ ಸ್ವರೂಪಗಳು-ಒಂದು ಅಧ್ಯಯನ, 2008
3. ಶೈಲಜಾ ಪವಾಡ ಶೆಟ್ರು , ಬಸವಣ್ಣನನ್ನು ಕುರಿತ ಕಥಾನಕಗಳ ತಾತ್ವಿಕ ಸ್ವರೂಪ, 2008
4. ಎನ್. ಗೀತಾ , ಸ್ವಾತಂತ್ರ್ಯಪೂರ್ವ ಮಹಿಳಾ ಸಾಹಿತ್ಯ : ಸ್ವರೂಪ ಮತ್ತು ತಾತ್ವಿಕತೆ, 2009
5. ರೇಖಾ ಈ.ಜಿ., ಶಾಂತಿನಾಥ ದೇಸಾಯಿ ಅವರ ಸಾಹಿತ್ಯದಲ್ಲಿ ಆಧುನಿಕ ಮಹಿಳಾ ಪ್ರಜ್ಞೆ, 2009
6. ತುಕಾರಾಂ , ಸ್ವಾತಂತ್ರ್ಯಪೂರ್ವ ಹೈದ್ರಾಬಾದ್ ಕರ್ನಾಟಕದ ಸಾಹಿತ್ಯ ಅಧ್ಯಯನ, 2011
7. ಗಿರಿಜಾಪತಿ ನೆರಣಿಕಿ ಮಠದ್ , ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅಲ್ಲಪ್ರಭು ಮತ್ತು ಬಸವಣ್ಣನವರನ್ನು ಕುರಿತ ರೂಪಾಂತರಗಳ ತಾತ್ವಿಕ ನೆಲೆಗಳು, 2012
8. ಧರ್ಮವೀರ ಕೆ.ಎಚ್. ಹೊಸ ತಲೆಮಾರಿನ ಕಥಾ ಸಾಹಿತ್ಯದ ಪ್ರವೃತ್ತಿಗಳ ಅಧ್ಯಯನ, 2015
9. ಅನ್ನಪೂರ್ಣ ಎಚ್. ಆಧುನಿಕ ಮಹಿಳಾ ಕಾವ್ಯ : ಅಭಿವ್ಯಕ್ತಿಯ ವಿನ್ಯಾಸಗಳು , 2016
10. ಶಕೀಲಾ ಕೆ. , ಮಹಿಳಾ ಕಥಾಸಾಹಿತ್ಯ : ಮಹಿಳೆ ಮತ್ತು ಕುಟುಂಬ ವಿನ್ಯಾಸಗಳು, 2017
11. ದಂಡೆ ನಂದೀಶ್ವರ , ವೃತ್ತಿನಿರತ ವಚನಕಾರರು : ವಚನಗಳ ಅಭಿವ್ಯಕ್ತಿ, ಸ್ವರೂಪ ಮತ್ತು ತಾತ್ವಿಕತೆ, 2017
12. ವೇದಾಂತ ಎಂ. ಕನ್ನಡ ಸಣ್ಣಕಥೆಗಳು : ಕಥನ ಮಾದರಿಗಳ ಅಧ್ಯಯನ, 2017
13. ರಶ್ಮಿ , ಸ್ವಾತಂತ್ರ್ಯಪೂರ್ವ ಸ್ತ್ರೀ ಕೇಂದ್ರಿತ ಕಾದಂಬರಿಗಳ ಅಧ್ಯಯನ (ಆಯ್ದ ಕಾದಂಬರಿಗಳನ್ನು ಅನುಲಕ್ಷಿಸಿ), 2017
14. ಸುಬ್ರಹ್ಮಣ್ಯ ಸಿ. , ವಸಾಹತು ಕಾಲದ ಕನ್ನಡ ಕಥಾ ಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ, 2021
15. ಕುಮಾರ ಹೆಚ್. , ವೀಣಾ ಶಾಂತೇಶ್ವರ, ವೈದೇಹಿ ಮತ್ತು ಗೀತಾ ನಾಗಭೂಷಣ ಕಥೆಗಳು : ಅಭಿವ್ಯಕ್ತಿ ಮತ್ತು ತಾತ್ವಿಕತೆಯ ಸ್ವರೂಪ, 2021
16. ಶಿವರಂಜಿನಿ ಎ. , ಮಹಿಳಾ ಅಂಕಣ ಸಾಹಿತ್ಯದಲ್ಲಿ ಸಾಮಾಜಿಕ ವಾಸ್ತವ, 2022
17. ಗಂಗಮ್ಮ, ವಚನಕಾರ್ತಿಯರ ಲೋಕದೃಷ್ಟಿ : ತಾತ್ವಿಕ ವಿನ್ಯಾಸಗಳ ಅಧ್ಯಯನ , 2023
ಪ್ರಶಸ್ತಿ, ಪುರಸ್ಕಾರಗಳು
ಬದಲಾಯಿಸಿ1. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿಕಥಾ ಪ್ರಶಸ್ತಿ (ಗು.ವಿ.ವಿ.), ೧೯೮೯.
2. ಕರ್ನಾಟಕ ಸಾಹಿತ್ಯ ಅಕಾಡೆಮಿ, (ಬೆಂಗಳೂರು), ೧೯೯೧ ಹಾಗೂ ೧೯೯೭
3. ಚುಕ್ಕಿ ಉಮಾಪತಿ ಪ್ರತಿಷ್ಠಾನ ಪ್ರಶಸ್ತಿ (ಸಿರಿವಾರ), ೧೯೯೧.
4. ರಾಜ್ಯೋತ್ಸವ ಪ್ರಶಸ್ತಿ (ಪುಸ್ತಕ ಬಹುಮಾನ) ಗು.ವಿ.ವಿ. ೧೯೯೧, ೨೦೦೮ ಮತ್ತು ೨೦೨೩.
5. ಸರ್.ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ (ಬೆಂಗಳೂರು), ೧೯೯೫.
6. ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (ಮೂಡಬಿದಿರೆ), ೧೯೯೬
7. ಶಿವಾನಂದ ಪಾಟೀಲ್ ಪ್ರಶಸ್ತಿ (ಹುನಗುಂದ), ೧೯೯೬.
8. ಗೋರೂರು ಸಾಹಿತ್ಯ ಪ್ರಶಸ್ತಿ (ಬೆಂಗಳೂರು), ೧೯೯೯.
9. ಕಾವ್ಯಾನಂದ ಪುರಸ್ಕಾರ (ಬೆಂಗಳೂರು), ೧೯೯೯.
10. ಉಗ್ರಾಣ ಸಾಹಿತ್ಯ ಪ್ರಶಸ್ತಿ (ಪುತ್ತೂರು), ೨೦೦೦. ೧೧.
11. ಕುಂ. ವೀರಭದ್ರಪ್ಪ ಕಥಾಸಾಹಿತ್ಯ ಪ್ರಶಸ್ತಿ, ೨೦೦೮.
12. ಚದುರಂಗ ಸಾಹಿತ್ಯ ಪ್ರಶಸ್ತಿ, ೨೦೦೮.
13. ಮಾಸ್ತಿ ಕಥಾಪುರಸ್ಕಾರ, ೨೦೦೮.
14. ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ, ೨೦೧೪.
15. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ೨೦೧೪
16. ರಮಣಶ್ರೀ ಶರಣ ಪ್ರಶಸ್ತಿ, ೨೦೧೮.
17. ಅತ್ಯುತ್ತಮ ಕಥಾಪ್ರಶಸ್ತಿ, ನೀರು ತಂದವರು' ಚಲನಚಿತ್ರ ರಾಜ್ಯ ಪ್ರಶಸ್ತಿ, ೨೦೧೮.
18. ಬಸವರಾಜ ಕಟ್ಟಿಮನಿ ಕಥಾಸಾಹಿತ್ಯ ಪ್ರಶಸ್ತಿ, ೨೦೧೯.
19. ಡಾ. ನಲ್ಲೂರು ಪ್ರಸಾದ್ ಸಾಂಸ್ಕೃತಿಕ ಪ್ರಶಸ್ತಿ, ೨೦೧೯.
20. ಸಾಹಿತ್ಯಶ್ರೀ ಪ್ರಶಸ್ತಿ : ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೧೯.
21. ನಾಡೋಜ ಡಾ. ಮನು ಬಳಿಗಾರ ಗೌರವ ಪ್ರಶಸ್ತಿ, ೨೦೨೩.