ಸುಳ್ಯ' ದಿಂದ ಉತ್ತರಕ್ಕೆ ಬೆಳ್ಳಾರೆ ರಸ್ತೆಯಲ್ಲಿ ಬೇಂಗಮಲೆಯಿಂದ ಬಲಕ್ಕೆ ತಿರುಗಿ ಚೊಕ್ಕಾಡಿಗೆ ಸೇರಬಹುದು. ಚೊಕ್ಕಾಡಿಯೇ ಗ್ರಾಮ ಕೇಂದ್ರ. ಅಮರಮುಡ್ನೂರು ಮತ್ತು ಅಮರಪಡ್ನೂರು ಅವಳಿ ಗ್ರಾಮದಂತಿದೆ. ಐವರ್ನಾಡು,ಕಳಂಜ,ಕಲ್ಮಡ್ಕ, ಅಮರಮುಡ್ನೂರುಗಳಿಂದಾಗಿ ಆವ್ರತವಾಗಿದೆ . ಈ ಗ್ರಾಮ.ಅಮರಪಡ್ನೂರು ಸಾಂಸ್ಕ್ರತಿಕವಾಗಿ ಸಾಹಿತ್ಯಿಕವಾಗಿ ಗುರುತಿಸಲಾಗಿದೆ. ಚೊಕ್ಕಾಡಿ ಕಟ್ಟೆ ಬಹಳ ಪ್ರಸಿದ್ದವಾಗಿದೆ. ನಾಲ್ಕೂರುಗಳ ಜನ ವ್ಯಾಪಾರ ವ್ಯವಹಾರಗಳಿಗಾಗಿ ಬಂದು ಸೇರುವ ಊರು. ಅಡಿಕೆ ಮತ್ತು ವೀಳ್ಯದೆಲೆಗೆ ಪ್ರಸಿದ್ದವಾಗಿದ್ದ ಊರು. ಚೊಕ್ಕಾಡಿಗೆ ಪ್ರವೇಶ ಮಾಡಲಾಗುವ ಮಾರ್ಗಗಳು ಯಾವುದೇಂದರೆ ಬೆಳ್ಳಾರೆಯಿಂದ ಕೋಟೆ ಮುಂಡುಗಾರಿಗಾಗಿಯು ಅಥವಾ ಪಂಜದಿಂದ ಕಲ್ಮಡ್ಕ ಮಾರ್ಗವಾಗಿ ಯೂ ಹೋಗಬಹುದು. ಇನ್ನು ಬೇರೆ ರೀತಿಯಾಗಿ . ಅಂದರೆ ಸುಳ್ಯದಿಂದ ಬೇಂಗಮಲೆಗಾಗಿಯೂ, ಗುತ್ತಿಗಾರಿನಿಂದ ದೊಡ್ಡತೋಟ ಮಾರ್ಗವಾಗಿ ಈ ಗ್ರಾಮವನ್ನು ಪ್ರವೇಶಿಸಿಸಬಹುದು.[೧]

ಕೃಷಿಸಂಪಾದಿಸಿ

ಅಡಿಕೆ,ತೆಂಗು,ಬಾಳೆ,ಕರಿಮೆಣಸು,ರಬ್ಬರ್,ಗೇರು,ಕೊಕೋ ಇವುಗಳು ಈ ಗ್ರಾಮದ ಮುಖ್ಯ ಬೆಳೆಗಳು. [೨]

ವಿಸ್ತೀರ್ಣಸಂಪಾದಿಸಿ

ಅಮರಪಡ್ನೂರು ಗ್ರಾಮದ ವಿಸ್ತೀರ್ಣ೧೨೩೭.೮೮ ಹೆಕ್ಟರ್.[೩]

ಊರುಗಳುಸಂಪಾದಿಸಿ

 • ಚೂಂತಾರು
 • ಶೇಣಿ
 • ಪಾರ್ಜ
 • ಕಲ್ಮಡ್ಕ
 • ಕರ್ಮಜೆ
 • ಕೊಂಡೆಬಾಯಿ
 • ಪೂಜಾರಿಮನೆ
 • ನೇಣಾರು
 • ಚೊಕ್ಕಾಡಿ
 • ಅಜ್ಜನಗದ್ದೆ
 • ಅಕ್ಕೋಜಿಪಾಲ್
 • ಜೋಗಿಯಡ್ಕ

ಉಲ್ಲೇಖಗಳುಸಂಪಾದಿಸಿ

 1. ಸಂಪಾದಕರು-ಡಾ.ಯು.ಪಿ.ಶಿವಾನಂದ;ವರ್ಷ-೨೦೦೩;ಪ್ರಕಾಶಕರು-ಸುದ್ದಿ ಬಿಡುಗಡೆ ಸುಳ್ಯ;ಪುಟ ಸಂಖ್ಯೆ-೬೪೦-೬೪೧
 2. http://www.onefivenine.com/india/villages/Dakshin-Kannad/Sulya/Amarapadnoor
 3. http://www.brandbharat.com/english/karnataka/districts/Dakshina%20Kannada/Dakshina%20Kannada_SULLIA_AMARAMUDNURU_AMARAPADNURU.html