ರೂಢಿ ಲೇಖನಕ್ಕಾಗಿ ಇಲ್ಲಿ ನೋಡಿ.

ಅಭ್ಯಾಸವು ಒಂದು ವರ್ತನೆಯನ್ನು ಮತ್ತೆ ಮತ್ತೆ ಪೂರ್ವತಯಾರಿ ಮಾಡುವ ಕ್ರಿಯೆ, ಅಥವಾ ಸುಧಾರಿಸಲು ಅಥವಾ ಪಾರಂಗತನಾಗುವ ಉದ್ದೇಶಕ್ಕಾಗಿ ಒಂದು ಚಟುವಟಿಕೆಯಲ್ಲಿ ಮತ್ತೆ ಮತ್ತೆ ತೊಡಗಿಸಿಕೊಳ್ಳುವುದು, "ಅಭ್ಯಾಸದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ" ಈ ನುಡಿಗಟ್ಟಿನಲ್ಲಿರುವಂತೆ. ಕ್ರೀಡಾ ತಂಡಗಳು ನಿಜವಾದ ಪಂದ್ಯಗಳಿಗೆ ಸಿದ್ಧವಾಗಲು ಅಭ್ಯಾಸ ಮಾಡುತ್ತವೆ. ಒಂದು ಸಂಗೀತ ವಾದ್ಯವನ್ನು ಚೆನ್ನಾಗಿ ನುಡಿಸಲು ಬಹಳ ಅಭ್ಯಾಸ ಬೇಕಾಗುತ್ತದೆ. ಇದು ಕಲಿಯುವ ಮತ್ತು ಅನುಭವಗಳಿಸುವ ಒಂದು ವಿಧಾನ.

ಪೂರ್ವತಯಾರಿ ಮತ್ತು ಪ್ರದರ್ಶನ ಸುಧಾರಣೆಯ ಉದ್ದೇಶಕ್ಕಾಗಿ ನಿಗದಿಮಾಡಲಾದ ಅವಧಿಗಳನ್ನು ಅಭ್ಯಾಸಕಾಲಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ ಕ್ರೀಡಾ ತಂಡಗಳು, ವಾದ್ಯ ತಂಡಗಳು, ವ್ಯಕ್ತಿಗಳು, ಇತ್ಯಾದಿ ತೊಡಗಿಕೊಳ್ಳುತ್ತಾರೆ. ಉದಾಹರಣೆಗೆ, "ಅವನು ಪ್ರತಿದಿನ ಶಾಲೆಯ ನಂತರ ಫ಼ುಟ್‍ಬಾಲ್ ಅಭ್ಯಾಸಕ್ಕೆ ಹೋದನು".

ಒಬ್ಬ ಸಂಗೀತಗಾರನು ತನ್ನ ವಾದ್ಯವನ್ನು ಅಭ್ಯಾಸಮಾಡುತ್ತಿದ್ದಾನೆ.

ಅಭ್ಯಾಸವನ್ನು ಅನ್ವಯಿಸುವ ಕೆಲವು ಸಾಮಾನ್ಯ ರೀತಿಗಳು:

  • ಒಂದು ಸಂಗೀತ ವಾದ್ಯವನ್ನು ನುಡಿಸಲು ಕಲಿಯುವುದಕ್ಕೆ
  • ಅಥ್ಲೆಟಿಕ್ ಅಥವಾ ತಂಡ ಪ್ರದರ್ಶನವನ್ನು ಸುಧಾರಿಸಲು
  • ಪ್ರದರ್ಶನ ಕಲೆಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಸಿದ್ಧವಾಗಲು
  • ಓದುವುದು, ಬರೆಯುವುದು, ಅಂತರವ್ಯಕ್ತೀಯ ಸಂವಹನ, ಬೆರಳಚ್ಚು ಮಾಡುವುದು, ವ್ಯಾಕರಣ, ಮತ್ತು ಕಾಗುಣಿತ ಸುಧಾರಿಸಲು
  • ಒಂದು ಹೊಸದಾಗಿ ಪಡೆದ ಕೌಶಲವನ್ನು ವರ್ಧಿಸಲು ಅಥವಾ ಶುದ್ಧೀಕರಿಸಲು
  • ಕೌಶಲವನ್ನು ಕಾಪಾಡಿಕೊಳ್ಳಲು
  • ಸಮರಕಲೆಗಳನ್ನು ಕಲಿಯಲು; ಕಟ ಮತ್ತು ಸ್ಪಾರಿಂಗ್ ಅಭ್ಯಾಸದ ಸಾಮಾನ್ಯ ರೂಪಗಳಾಗಿವೆ
  • ಒಬ್ಬರ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಪಾರಂಗತನಾಗಲು (ಉದಾ. ಮಾರಾಟ ಸ್ಥಳ ವ್ಯವಸ್ಥೆಯನ್ನು ಬಳಸುವ ನಗದು ಗುಮಾಸ್ತ)

ಅಭ್ಯಾಸದಿಂದ ಒಬ್ಬರು ಎಷ್ಟು ಚೆನ್ನಾಗಿ ಸುಧಾರಿಸುತ್ತಾರೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿದೆ, ಉದಾ. ಅದರಲ್ಲಿ ತೊಡಗಿಕೊಳ್ಳುವ ಪುನರಾವರ್ತನೆ ಪ್ರಮಾಣ, ಸುಧಾರಣೆಗೆ ಲಭ್ಯವಾದ ಪ್ರತ್ಯಾದಾನದ ಬಗೆ. ಪ್ರತ್ಯಾದಾನವು ಸೂಕ್ತವಿಲ್ಲದಿದ್ದರೆ, ಅಭ್ಯಾಸವು ಪರಿಣಾಮಕಾರಿಯಾಗಿರುವುದಿಲ್ಲ ಅಥವಾ ಕಲಿಕೆಗೆ ಹಾನಿಕರವೂ ಇರಬಹುದು. ಒಬ್ಬ ವಿದ್ಯಾರ್ಥಿಯು ಸಾಕಷ್ಟು ಸಲ ಅಭ್ಯಾಸ ಮಾಡದಿದ್ದರೆ, ಬಲವರ್ಧನೆ ಮಸುಳಿಸುತ್ತದೆ, ಮತ್ತು ಒಬ್ಬರು ಕಲಿತದ್ದು ಮರೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ, ಒಬ್ಬರ ತರಬೇತಿ ಉದ್ದೇಶಗಳನ್ನು ಮುಟ್ಟಲು ಸಾಕಷ್ಟು ಮಾಡಲಾಗಿದೆಯೆಂದು ಖಚಿತಪಡಿಸಿಕೊಳ್ಳಲು ಅಭ್ಯಾಸವನ್ನು ಹಲವುವೇಳೆ ನಿಗದಿಮಾಡಲಾಗಿರುತ್ತದೆ. ಎಷ್ಟು ಅಭ್ಯಾಸ ಅಗತ್ಯ ಎನ್ನುವುದು ಚಟುವಟಿಕೆಯ ಸ್ವರೂಪ, ಮತ್ತು ಪ್ರತಿ ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ.

"https://kn.wikipedia.org/w/index.php?title=ಅಭ್ಯಾಸ&oldid=1159361" ಇಂದ ಪಡೆಯಲ್ಪಟ್ಟಿದೆ