ಅಪೂರ್ವಿ ಚಾಂಡೇಲಾ

ಭಾರತೀಯ ಕ್ರೀಡಾ ಶೂಟರ್

ಅಪೂರ್ವಿ ಸಿಂಗ್ ಚಾಂಡೇಲಾ (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.[]

ಅಪೂರ್ವಿ ಚಾಂಡೇಲಾ
೨೦೧೬ರ 12 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅಪೂರ್ವಿ ಚಂಡೇಲಾ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ
ಜನನ (1993-01-04) ೪ ಜನವರಿ ೧೯೯೩ (ವಯಸ್ಸು ೩೧)
ಜೈಪುರ, ರಾಜಸ್ಥಾನ, ಭಾರತ
ಎತ್ತರ1.54 m (5 ft 1 in)
ತೂಕ52 kg (115 lb)
Sport
ದೇಶ ಭಾರತ
ಕ್ರೀಡೆಶೂಟಿಂಗ್
ಸ್ಪರ್ಧೆಗಳು(ಗಳು)10 ಮೀಟರ್ ಏರ್ ರೈಫಲ್

ಆರಂಭಿಕ ಜೀವನ

ಬದಲಾಯಿಸಿ

ಚಾಂಡೇಲಾರವರು ಜೈಪುರದಲ್ಲಿ ಜನಿಸಿದರು.[] ಆಕೆಯ ತಂದೆ ಕುಲದೀಪ್ ಸಿಂಗ್ ಚಂಡೇಲಾ[] ಮತ್ತು ತಾಯಿ ಬಿಂದು ರಾಥೋಡ್.[] ಜೈಪುರದ ಮಾಯೋ ಬಾಲಕಿಯರ ಶಾಲೆ ಅಜ್ಮೀರ್ ಮತ್ತು ಮಹಾರಾಣಿ ಗಾಯತ್ರಿ ದೇವಿ ಬಾಲಕಿಯರ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪಡೆದರು. ದೆಹಲಿ ವಿಶ್ವವಿದ್ಯಾಲಯದ ಮೇರಿ ಕಾಲೇಜಿನಿಂದ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.

ವೃತ್ತಿ

ಬದಲಾಯಿಸಿ

೨೦೧೨ ರಲ್ಲಿ, ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಡೇಲಾರವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.[][] ೨೦೧೪ ರಲ್ಲಿ, ಹೇಗ್‌ನಲ್ಲಿ ನಡೆದ ಇಂಟರ್‌ಶೂಟ್ ಚಾಂಪಿಯನ್‌ಶಿಪ್‌ನಲ್ಲಿ ಅವರು ನಾಲ್ಕು ಪದಕಗಳನ್ನು ಗೆದ್ದರು. ಇದರಲ್ಲಿ ಎರಡು ವೈಯಕ್ತಿಕ ಮತ್ತು ಎರಡು ತಂಡದ ವಿಭಾಗದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದರು.[] ಅದೇ ವರ್ಷದಲ್ಲಿ, ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು, ಫೈನಲ್‌ನಲ್ಲಿ 206.7 ಅಂಕಗಳನ್ನು ಗಳಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿದರು.[]

ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಾಂಡೇಲಾ ೨೦೧೬ ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.[] ಅಲ್ಲಿ ಅವರು, ಅರ್ಹತಾ ಸುತ್ತಿನಲ್ಲಿ ೫೧ ಸ್ಪರ್ಧಿಗಳಲ್ಲಿ ೩೪ನೇ ಸ್ಥಾನ ಪಡೆದರು.[೧೦]

೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ, ಅವರು ರವಿ ಕುಮಾರ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಗೆ ಜೋಡಿಯಾಗಿದ್ದರು ಮತ್ತು ಕಂಚಿನ ಪದಕವನ್ನು ಗೆದ್ದರು.[೧೧] ಮಾಜಿ ರಾಷ್ಟ್ರೀಯ ಚಾಂಪಿಯನ್ ರಾಕೇಶ್ ಮನ್ಪತ್ ಅವರು, ಅಪೂರ್ವಿ ಚಾಂಡೇಲಾರವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.[೧೨] ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ೨೦೧೯ ರಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.[೧೩]

ಐಎಸ್ಎಸ್ಎಫ್ ವಿಶ್ವ ಪದಕಗಳು

ಬದಲಾಯಿಸಿ
ಕ್ರಮ ಸಂಖ್ಯೆ ಸ್ಪರ್ಧೆ ಚಾಂಪಿಯನ್ ಶಿಪ್ ವರ್ಷ ಸ್ಥಾನ ಪದಕ
1 10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೫ ಚಾಂಗ್ವಾನ್   ಕಂಚು
10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೯ ಮ್ಯೂನಿಚ್   ಚಿನ್ನ
10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೯ ನವ ದೆಹಲಿ   ಚಿನ್ನ

ಉಲ್ಲೇಖಗಳು

ಬದಲಾಯಿಸಿ
  1. "Glasgow 2014 - 10m Air Rifle Women's Finals". Archived from the original on 2014-07-29. Retrieved 2019-09-02.
  2. "ಆರ್ಕೈವ್ ನಕಲು". Archived from the original on 2014-08-07. Retrieved 2019-09-02.
  3. "Jaipur girl realises dream of shooting alongside Bindra, wins two gold".
  4. "ಆರ್ಕೈವ್ ನಕಲು". Archived from the original on 2016-03-05. Retrieved 2019-09-02.
  5. "Apurvi Chandela takes air rifle gold". The Hindu. 24 December 2012.
  6. "ಆರ್ಕೈವ್ ನಕಲು". Archived from the original on 2014-08-09. Retrieved 2019-09-02.
  7. "Rajasthan shooter Apurvi Chandela bags 4 medals at Hague meet". 10 February 2014.
  8. "ಆರ್ಕೈವ್ ನಕಲು". Archived from the original on 2014-08-08. Retrieved 2019-09-02.
  9. "Sitemap".
  10. http://www.firstpost.com/sports/rio-olympics-2016-jitu-rai-finishes-8th-in-10m-air-pistol-apurvi-chandela-ayonika-paul-out-in-qualifiers-2939890[ಶಾಶ್ವತವಾಗಿ ಮಡಿದ ಕೊಂಡಿ]
  11. "Asian Games 2018: Shooters Apurvi Chandela, Ravi Kumar open India's medal tally, clinch mixed air rifle bronze". 20 August 2018.
  12. https://www.hindustantimes.com/other-sports/personal-coaches-must-be-given-credit-for-indian-shooters-2018-commonwealth-games-showing/story-hgyJq2TzOdHBrE55[ಶಾಶ್ವತವಾಗಿ ಮಡಿದ ಕೊಂಡಿ]
  13. "ಆರ್ಕೈವ್ ನಕಲು". Archived from the original on 2019-05-27. Retrieved 2019-09-02.