ಅನ್ಯಾಯ ಪಕ್ಷಪಾತ ಅಥವಾ ಅನರ್ಹವಾದ ಫಲಿತಾಂಶಗಳಿಗೆ ಸಂಬಂಧಿಸಿದ ಒಂದು ಗುಣ. ಈ ಪದವನ್ನು ಒಂದು ನಿರ್ದಿಷ್ಟ ಘಟನೆ ಅಥವಾ ಪರಿಸ್ಥಿತಿ, ಅಥವಾ ಹೆಚ್ಚು ದೊಡ್ಡ ಯಥಾಸ್ಥಿತಿಯ ಸಂದರ್ಭದಲ್ಲಿ ಅನ್ವಯಿಸಬಹುದು. ಪಾಶ್ಚಾತ್ಯ ತತ್ವಶಾಸ್ತ್ರ ಮತ್ತು ನ್ಯಾಯಶಾಸ್ತ್ರದಲ್ಲಿ, ಅನ್ಯಾಯವನ್ನು ಬಹಳ ಸಾಮಾನ್ಯವಾಗಿ (ಆದರೆ ಯಾವಾಗಲೂ ಅಲ್ಲ), ನ್ಯಾಯದ ಅನುಪಸ್ಥಿತಿ ಅಥವಾ ವಿರುದ್ಧಪದವೆಂದು ವ್ಯಾಖ್ಯಾನಿಸಲಾಗುತ್ತದೆ.[]

ಅನ್ಯಾಯದ ಭಾವ ಒಂದು ವಿಶ್ವವ್ಯಾಪಿ ಮಾನವ ಲಕ್ಷಣವಾಗಿದೆ, ಆದರೆ ನ್ಯಾಯವಲ್ಲದ್ದೆಂದು ಪರಿಗಣಿಸಲಾದ ನಿಖರ ಸಂದರ್ಭಗಳು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗಬಹುದು. ಪ್ರಕೃತಿಯ ಕ್ರಿಯೆಗಳು ಕೂಡ ಕೆಲವೊಮ್ಮೆ ಅನ್ಯಾಯದ ಭಾವವನ್ನು ಕೆರಳಿಸಬಹುದಾದರೂ, ಈ ಭಾವವು ಸಾಮಾನ್ಯವಾಗಿ ದುರುಪಯೋಗ, ನಿಂದನೆ, ನಿರ್ಲಕ್ಷ್ಯ, ಅಥವಾ ಸರಿಪಡಿಸದ ಅಥವಾ ಕಾನೂನು ವ್ಯವಸ್ಥೆ ಅಥವಾ ಸಹ ಮಾನವಜೀವಿಗಳಿಂದ ಅನುಮೋದಿತವಾದ ದುಷ್ಕೃತ್ಯದಂತಹ ಮಾನವ ಕ್ರಿಯೆಯ ಸಂಬಂಧದಲ್ಲಿ ಅನಿಸುತ್ತದೆ.

ಅನ್ಯಾಯದ ಭಾವವು ಪ್ರಬಲ ಪ್ರೇರಕ ಸ್ಥಿತಿಯಾಗಬಲ್ಲದು, ಇದರಿಂದ ಜನರು ತಮ್ಮನ್ನು ತಾವು ಮತ್ತು ಅಯುಕ್ತವಾಗಿ ನಡೆಸಿಕೊಳ್ಳಲಾಗಿದೆಯೆಂದು ಗ್ರಹಿಸಲಾದ ಇತರರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುತ್ತಾರೆ.

ಮಾನವ ಸ್ವಾರ್ಥ ಅನ್ಯಾಯದ ಒಂದು ಸಾಮಾನ್ಯ ಕಾರಣವಾಗಿದೆ. ದ ರಿಪಬ್ಲಿಕ್‍ನಲ್ಲಿ ಪ್ಲೇಟೊ ಸುದೀರ್ಘವಾಗಿ ವಿವರಿಸಿದಂತೆ, ಹಾಗೆ ಮಾಡುವುದು ತಮ್ಮ ಹಿತದಲ್ಲಿದೆ ಎಂದು ಭಾವಿಸಿದಾಗ, ಜನರು ಹಲವುವೇಳೆ ಅನ್ಯಾಯದ ಕ್ರಿಯೆಗಳನ್ನು ನಡೆಸುತ್ತಾರೆ. ಸಾಧ್ಯವಿಲ್ಲವೆಂದು ನಿಮಗೆ ಅನಿಸಿದಾಗ ಅನ್ಯಾಯದ ಅತ್ಯುನ್ನತ ವಿಸ್ತಾರವನ್ನು ಭಾವಿಸಬೇಕು ಎಂದೂ ಪ್ಲೇಟೊ ಸೇರಿಸುತ್ತಾನೆ. ಮಾನವ ಅನ್ಯಾಯವು ಯಾವಾಗಲೂ ಅಯುಕ್ತ ಅನುಕೂಲತೆ ಗಳಿಸುವ ಪ್ರಯತ್ನದಿಂದ ಅಥವಾ ದ್ವೇಷದಿಂದ ಇರುವುದಿಲ್ಲ; ಸರಳವಾಗಿ ಅದು ಮಾನವನ ದೋಷಪೂರಿತ ತೀರ್ಮಾನ ಮಾಡುವಿಕೆಯ ಪರಿಣಾಮವಿರಬಹುದು. ಉದಾಹರಣೆಗೆ, ನ್ಯಾಯಾಧೀಶರು ತಮ್ಮ ಕೊನೆ ಆಹಾರ ವಿರಾಮವನ್ನು ಹೊಂದಿದಾಗಿನಿಂದ ಆದ ಸಮಯದ ದೀರ್ಘತೆಯನ್ನು ಅವಲಂಬಿಸಿ ವಿಮರ್ಶಾ ಮಂಡಳಿಗಳಲ್ಲಿ ಕುಳಿತ ನ್ಯಾಯಾಧೀಶರು ಅರ್ಜೀದಾರರಿಗೆ ಅನುಕೂಲಕರವಾದ ನಿರ್ಧಾರಗಳನ್ನು ಮುಟ್ಟುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಒಂದು ನಿರ್ದಿಷ್ಟ ಪ್ರಕರಣ ಅಥವಾ ಪ್ರಸಂಗಕ್ಕೆ ಸಂಬಂಧಿಸಿದಂತೆ ಆದ ದುರ್ಬಳಕೆ ಮತ್ತು ನಿಂದನೆಯು ನ್ಯಾಯದ ಉದ್ದೇಶವನ್ನು ನೆರವೇರಿಸುವಲ್ಲಿ ಆದ ವ್ಯವಸ್ಥಿತ ವೈಫಲ್ಯದ ಗುರುತಾಗಿರಬಹುದು.

ಉಲ್ಲೇಖಗಳು

ಬದಲಾಯಿಸಿ
  1. McCoubrey, Hilaire and White, Nigel D. Textbook on Jurisprudence. Second Edition. Blackstone Press Limited. 1996. ISBN 1-85431-582-X. Page 276.


"https://kn.wikipedia.org/w/index.php?title=ಅನ್ಯಾಯ&oldid=779122" ಇಂದ ಪಡೆಯಲ್ಪಟ್ಟಿದೆ