ಅನುಕ್ರಮಣಿಕೆ ಶಬ್ದಗಳು ಅಥವಾ ಪದಗುಚ್ಛಗಳು ('ಶಿರೋನಾಮೆಗಳು') ಮತ್ತು ಒಂದು ದಸ್ತಾವೇಜು ಅಥವಾ ದಸ್ತಾವೇಜುಗಳ ಸಂಗ್ರಹದಲ್ಲಿ ಆ ಶಿರೋನಾಮೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಸಿಗುವ ಸಂಬಂಧಿತ ಸೂಚಕಗಳ ಪಟ್ಟಿ. ಒಂದು ಪುಸ್ತಕದ ಹಿಂವಿಷಯದಲ್ಲಿನ ಅನುಕ್ರಮಣಿಕೆ ಮತ್ತು ಗ್ರಂಥಾಲಯ ಗ್ರಂಥಪಟ್ಟಿಯಾಗಿ ಕಾರ್ಯನಿರ್ವಹಿಸುವ ಅನುಕ್ರಮಣಿಕೆ ಕೆಲವು ಉದಾಹರಣೆಗಳು. ಸಾಂಪ್ರದಾಯಿಕ ಪುಸ್ತಕದ ಹಿಂಬದಿಯ ಅನುಕ್ರಮಣಿಕೆಯಲ್ಲಿ, ಶಿರೋನಾಮೆಗಳು ಒಬ್ಬ ವ್ಯಕ್ತಿ (ಅನುಕ್ರಮಣಿಕೆಗಾರ) ಆ ಪುಸ್ತಕದ ಸಂಭಾವ್ಯ ಓದುಗನಿಗೆ ಪ್ರಸ್ತುತವೆಂದು ಮತ್ತು ಆಸಕ್ತಿಕರವೆಂದು ಆಯ್ಕೆಮಾಡಿದ ವ್ಯಕ್ತಿಗಳು, ಸ್ಥಳಗಳು, ಘಟನೆಗಳು ಮತ್ತು ಪರಿಕಲ್ಪನೆಗಳ ಹೆಸರುಗಳನ್ನು ಒಳಗೊಳ್ಳುವವು. (ಸೂಚಿಕಾರನು ಲೇಖಕ, ಸಂಪಾದಕ, ಅಥವಾ ಮೂರನೇ ವ್ಯಕ್ತಿಯಾಗಿ ಕೆಲಸಮಾಡುತ್ತಿರುವ ವೃತ್ತಿಪರ ಸೂಚಿಕಾರನಾಗಿರಬಹುದು.) ಸೂಚಕಗಳು ಸಾಮಾನ್ಯವಾಗಿ ಪುಟ ಸಂಖ್ಯೆಗಳು, ವಾಕ್ಯವೃಂದ ಸಂಖ್ಯೆಗಳು ಅಥವಾ ವಿಭಾಗ ಸಂಖ್ಯೆಗಳಾಗಿರುತ್ತವೆ. ಗ್ರಂಥಾಲಯದ ವಿಷಯಪಟ್ಟಿಯಲ್ಲಿ ಶಬ್ದಗಳು ಲೇಖಕರು, ಶೀರ್ಷಿಕೆಗಳು, ವಿಷಯ ಶಿರೋನಾಮೆಗಳು, ಇತ್ಯಾದಿ ಆಗಿರುತ್ತವೆ, ಮತ್ತು ಸೂಚಕಗಳು ಕರೆ ಸಂಖ್ಯೆಗಳಾಗಿರುತ್ತವೆ. ಗೂಗಲ್‍ನಂತಹ ಅಂತರಜಾಲ ಹುಡುಕಾಟ ಯಂತ್ರಗಳು ಮತ್ತು ಪೂರ್ಣ ಪಠ್ಯ ಹುಡುಕಾಟ ಮಾಹಿತಿಗೆ ಪ್ರವೇಶ ಒದಗಿಸಲು ಸಹಾಯಮಾಡುತ್ತವೆ ಆದರೆ ಒಂದು ಅನುಕ್ರಮಣಿಕೆಯಷ್ಟು ಆಯ್ದದ್ದಾಗಿರುವುದಿಲ್ಲ, ಏಕೆಂದರೆ ಅವು ಅಸಂಬಂಧಿತ ಕೊಂಡಿಗಳನ್ನು ಒದಗಿಸುತ್ತವೆ, ಮತ್ತು ನಿಖರವಾಗಿ ಅವು ನಿರೀಕ್ಷಿಸಿದ ರೀತಿಯಲ್ಲಿ ವ್ಯಕ್ತಪಡಿಸದಿದ್ದಲ್ಲಿ ಸಂಬಂಧಿತ ಮಾಹಿತಿಯನ್ನು ತಪ್ಪಬಹುದು.[]

ಪುಸ್ತಕ ಸೂಚಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಹುಶಃ ಅತ್ಯಂತ ಮುಂದುವರಿದ ತನಿಖೆ ವಿಷಯ ನಕಾಸೆಗಳ ಅಭಿವೃದ್ಧಿಯಲ್ಲಿ ಮಾಡಲಾಗಿದೆ. ವಿಷಯ ನಕಾಸೆಯು ಸಾಂಪ್ರದಾಯಿಕ ಪುಸ್ತಕ ಹಿಂಬದಿ ಸೂಚಿಕೆಗಳಲ್ಲಿ ಅಂತರ್ಗತವಾಗಿರುವ ಜ್ಞಾನ ರಚನೆಗಳನ್ನು ಚಿತ್ರಿಸುವ ರೀತಿಯಾಗಿ ಆರಂಭವಾಯಿತು. ಪುಸ್ತಕ ಸೂಚಿಕೆಗಳು ಸಾಕಾರಗೊಳಿಸಿದ ಪರಿಕಲ್ಪನೆಯು ದತ್ತ ಸೂಚಿಕೆಗಳಿಗೆ ತನ್ನ ಹೆಸರು ಕೊಟ್ಟಿತು. ದತ್ತ ಸೂಚಿಕೆಗಳು ದೊಡ್ಡ ಸಂಗ್ರಹದಲ್ಲಿ ಮಾಹಿತಿಯನ್ನು ಹುಡುಕುವ ಸಂಕ್ಷಿಪ್ತ ರೀತಿಯನ್ನು ಒದಗಿಸುತ್ತವೆ, ಆದರೆ ಮಾನವ ಬಳಕೆಯ ಬದಲಾಗಿ ಕಂಪ್ಯೂಟರ್‍ನ ಬಳಕೆಗಾಗಿ.

ಉಲ್ಲೇಖಗಳು

ಬದಲಾಯಿಸಿ
  1. "Human or computer produced indexes?". Archived from the original on 2014-06-04. Retrieved 2017-04-19.