ಅನುಕರಣ ಒಂದು ಉನ್ನತವಾದ ವರ್ತನೆ ಮತ್ತು ಆ ಮೂಲಕ ಒಬ್ಬ ವ್ಯಕ್ತಿಯು ಇನ್ನೊಬ್ಬರ ವರ್ತನೆಯನ್ನು ಗಮನಿಸಿ ನಕಲು ಮಾಡುತ್ತಾನೆ. ಅನುಕರಣವು ಸಂಪ್ರದಾಯಗಳ, ಮತ್ತು ಅಂತಿಮವಾಗಿ ನಮ್ಮ ಸಂಸ್ಕೃತಿಯ ಅಭಿವೃದ್ಧಿಗೆ ಕಾರಣವಾಗುವ ಸಾಮಾಜಿಕ ಕಲಿಕೆಯ ಒಂದು ರೂಪ. ಅದು ವ್ಯಕ್ತಿಗಳ ನಡುವೆ ಮತ್ತು ಪೀಳಿಗೆಗಳ ನಡುವೆ ವಂಶವಾಹಿ ಆನುವಂಶಿಕತೆಯ ಅಗತ್ಯವಿಲ್ಲದೆ ಮಾಹಿತಿಯ (ವರ್ತನೆಗಳು, ಪದ್ಧತಿಗಳು ಇತ್ಯಾದಿ) ವರ್ಗಾವಣೆಗೆ ಅನುಮತಿಸುತ್ತದೆ.[] ಅನುಕರಣ ಶಬ್ದವನ್ನು, ಪ್ರಾಣಿ ತರಬೇತಿಯಿಂದ ಅಂತರರಾಷ್ಟ್ರೀಯ ರಾಜಕೀಯದ ವರೆಗೆ, ಅನೇಕ ಸಂದರ್ಭಗಳಲ್ಲಿ ಅನ್ವಯಿಸಬಹುದು. ಈ ಪದವು ಸಾಮಾನ್ಯವಾಗಿ ಜಾಗೃತ ವರ್ತನೆಯನ್ನು ಸೂಚಿಸುತ್ತದೆ, ಅಜಾಗೃತ ಅನುಕರಣವನ್ನು ಪ್ರತಿಬಿಂಬಿಕೆ ಎಂದು ಕರೆಯಲಾಗುತ್ತದೆ.

ನವಜಾತ ರೀಸಸ್ ಮಕಾಕ್ ನಾಲಿಗೆ ಮುಂಚಾಚುವಿಕೆಯನ್ನು ಅನುಕರಿಸುತ್ತಿದೆ

ಮಾನವಶಾಸ್ತ್ರದಲ್ಲಿ, ಎಲ್ಲ ಸಂಸ್ಕೃತಿಗಳು ಭೌಗೋಳಿಕವಾಗಿ ಆಚೆ ಈಚೆಗೆ ಹರಡಿರುವ ಪ್ರಭಾವದ ಕೆಲವು ಅಥವಾ ಹಲವಾರು ಮೂಲ ಸಂಸ್ಕೃತಿಗಳಲ್ಲಿ ಒಂದರ ಕಲ್ಪನೆಗಳನ್ನು ಅನುಕರಿಸುತ್ತವೆ ಎಂದು ಕೆಲವು ಸಿದ್ಧಾಂತಗಳು ಅಭಿಪ್ರಾಯಪಡುತ್ತವೆ. ಸಂಸ್ಕೃತಿಗಳು ಒಂದರ ಮೇಲೊಂದು ಪ್ರಭಾವ ಬೀರುತ್ತವೆ, ಆದರೆ ಹೋಲಿಕೆಯ ಕಲ್ಪನೆಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಬಹುದು ಎಂದು ವಿಕಾಸಾತ್ಮಕ ಪ್ರಸರಣ ಸಿದ್ಧಾಂತ ಅಭಿಪ್ರಾಯಪಡುತ್ತದೆ.

ಮಾನವರಲ್ಲಿ ಅನುಕರಣದ ಪಾತ್ರ ಪ್ರಾಣಿಗಳಲ್ಲೇ ಅನನ್ಯವಾಗಿದೆ ಎಂದು ವಿದ್ವಾಂಸರು ಜೊತೆಗೆ ಜನಪ್ರಿಯ ಲೇಖಕರು ವಾದಿಸಿದ್ದಾರೆ. ಒಬ್ಬ ವಯಸ್ಕನ ಶಬ್ದಗಳು ಅಥವಾ ಸನ್ನೆಗಳನ್ನು ಸರಿಗಟ್ಟುವ ಶಿಶುಗಳ ಸಾಮರ್ಥ್ಯವು ಅನೇಕ ಕ್ರಮಾಗತ ಪ್ರಯೋಗಗಳಲ್ಲಿ ಪಾಳಿ ತೆಗೆದುಕೊಳ್ಳುವ ಒಡನಾಡುವ ಪ್ರಕ್ರಿಯೆಯನ್ನು ಆಧರಿಸಿದೆ, ಮತ್ತು ಇದರಲ್ಲಿ ವಯಸ್ಕರ ಸಹಜ ಪ್ರವೃತ್ತಿಯ ವರ್ತನೆಯು ಶಿಶಿವಿನಷ್ಟೇ ದೊಡ್ಡ ಪಾತ್ರ ವಹಿಸುತ್ತದೆ ಎಂದು ಒಬ್ಬ ಪ್ರಸಿದ್ಧ ಮನಃಶಾಸ್ತ್ರಜ್ಞರು ತೋರಿಸಿದರು. ವಿಕಾಸವು ಅನುಕರಣ ಸಾಮರ್ಥ್ಯಗಳನ್ನು ಒಪ್ಪು ಗುಣವಾಗಿ ಆರಿಸಿಕೊಳ್ಳುತ್ತಿತ್ತು ಏಕೆಂದರೆ ಅದರಲ್ಲಿ ಉತ್ತಮವಾಗಿದ್ದವರು ತಮ್ಮ ಇತ್ಯರ್ಥಕ್ಕೆ ಸಲಕರಣೆ ತಯಾರಿಕೆ ಮತ್ತು ಭಾಷೆಯನ್ನು ಒಳಗೊಂಡಂತೆ ಕಲಿತ ವರ್ತನೆಯ ಹೆಚ್ಚು ವಿಶಾಲ ಸಂಗ್ರಹವನ್ನು ಹೊಂದಿದ್ದರು ಎಂದು ಈ ಬರಹಗಾರರು ಭಾವಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Hopper, Lydia M. (2010). "Deferred imitation in children and apes". Psychologist. 23 (4): 294–7.
"https://kn.wikipedia.org/w/index.php?title=ಅನುಕರಣ&oldid=796200" ಇಂದ ಪಡೆಯಲ್ಪಟ್ಟಿದೆ