ಅನಿರುಧ್ ರವಿಚಂದರ್

ಅನಿರುಧ್ ರವಿಚಂದರ್ ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ ಮತ್ತು ಗಾಯಕ. ಅನಿರುಧ್ ತಮಿಳು ಚಿತ್ರರಂಗದ ಪ್ರಮುಖ ಸಂಗೀತ ಸಂಯೋಜಕರಲ್ಲಿ ಒಬ್ಬರು. ಅವರು ಐಶ್ವರ್ಯ. ಆರ್. ಧನುಷ್ ನಿರ್ದೇಶಿಸಿದ '3' ಎಂಬ ತಮಿಳು ಚಿತ್ರದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.ಅವರು ಸಂಯೋಜನೆ ಮಾಡಿದ "ವಯ್ ದಿಸ್ ಕೊಳವೆರಿ ಡಿ" ಎಂಬ ಹಾಡು ಇಡೀ ಯೂಟ್ಯೂಬಿನಲ್ಲಿ ಸುಮಾರು ೧೦೦ ಮಿಲಿಯನ್ನಕ್ಕು ಹೆಚ್ಚು ವೀಕ್ಷಕರನ್ನು ಗಳಿಸಿ ಭಾರೀ ಹಿಟ್ ಆಗಿತ್ತು.[] [] []

ಅನಿರುಧ್ ರವಿಚಂದರ್
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ೨೦೧೩ ನಲ್ಲಿ ಅನಿರುಧ್
ಜನನ
ಅನಿರುಧ್ ರವಿಚಂದರ್

೧೬-೧೦-೧೯೯೦
ಚೆನೈ, ತಮಿಳು ನಾಡು, ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ಚಲನಚಿತ್ರ ಸಂಯೋಜಕ, ಸಂಗೀತ ನಿರ್ದೇಶಕ, ದಾಖಲೆ ನಿರ್ಮಾಪಕ, ಗಾಯಕ
ಪೋಷಕ(ರು)ರವಿ ರಾಘವೇಂದ್ರ(ತಂದೆ), ಲಕ್ಷ್ಮಿ(ತಾಯಿ)

ಅನಿರುಧ್ ಅಕ್ಟೋಬರ್ ೧೬,೧೯೯೦ರಂದು ತಮಿಳು ನಾಡಿನ ಚೆನೈನಲ್ಲಿ ರವಿ ರಾಘವೇಂದ್ರ ಹಾಗು ಲಕ್ಷ್ಮಿ ಎಂಬ ದಂಪತಿಗೆ ಜನಿಸಿದರು. ಅವರ ತಂದೆ ಒಬ್ಬ ನಟ ಹಾಗು ತಾಯಿ ನರ್ತಕಿ. ಅನಿರುಧ್ ನಟ ರಜಿನಿಕಾಂತ್ ಅವರ ಸೋದರಅಳಿಯ.

ವಿದ್ಯಾಭ್ಯಾಸ

ಬದಲಾಯಿಸಿ

ಅವರು ಪದ್ಮ ಶೆಶಾದ್ರಿ ಬಾಲಾ ಭವನ್ ಎಂಬ ಶಾಲೆಯಲ್ಲಿ ತಮ್ಮ ಶಾಲಾಶಿಕ್ಷಣವನ್ನು ಮುಗಿಸಿದರು.ಅವರು ಅ ಶಾಲೆಯ ಜ಼ಿಂಕ್(Zinx) ಎಂಬ ಸಂಗೀತ ತಂಡದಲ್ಲಿ ಭಾಗವಾಗಿದ್ದರು. ಅನಿರುಧ್ ೧೦ ವಯಸ್ಸಿನಿಂದಲೇ ಸಂಗೀತ ಸಂಯೋಜನೆಯನ್ನು ಪ್ರಾರಂಭಿಸಿದರು. ಅವರು ೨೦೧೧ನಲ್ಲಿ ಚೆನೈನ ಲೊಯೊಲ ಕಾಲೇಜಿನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದರು. ನಂತರ ಲಂಡನ್ನಿನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ಎಂಬ ಸಂಗೀತ ಕಾಲೇಜಿನಿಂದ ಶಾಸ್ತ್ರೀಯ ಪಿಯಾನೊ ಕಲಿತರು. ಇದಲ್ಲದೆ ಅವರು ಕರ್ನಾಟಕ ಸಂಗೀತವನ್ನೂ ಕಲಿತು ಕರ್ನಾಟಕ ಫ್ಯೂಷನ್ ಬ್ಯಾಂಡ್ ಎಂಬ ತಂಡದಲ್ಲಿ ಭಾಗವಾಗಿದ್ದರು.

 

ವೃತ್ತಿ

ಬದಲಾಯಿಸಿ

೨೦೧೧-೨೦೧೨: ಚೊಚ್ಚಲ ಹಾಗೂ ಆರಂಭಿಕ ಯಶಸ್ಸುಗಳು

ಬದಲಾಯಿಸಿ

ಅನಿರುಧ್ ಅವರ ಸಂಗೀತ ವೃತ್ತಿಯನ್ನು ತಮ್ಮ ಸೋದರಸಂಬಂಧಿ ಐಶ್ವರ್ಯ.ಆರ್.ಧನುಷ್ ನಿರ್ದೇಶಿಸಿದ '3' ಎಂಬ ಚಿತ್ರದಿಂದ ಆರಂಭಿಸಿದರು. ಅವರು ಲೊಯೊಲ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವಾಗಲೇ ಐಶ್ವರ್ಯ.ಆರ್.ಧನುಷ್ ಅವರ ಅನೇಕ ಕಿರುಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಆನಿರುಧ್ ಅವರ ಉತ್ತಮ ಕೆಲಸವನ್ನು ಮೆಚ್ಚಿದ ಐಶ್ವರ್ಯ ತಮ್ಮ ಮೊದಲ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡುವ ಅವಕಾಶ ನೀಡಿದರು. ಇದಲ್ಲದೆ ಎ.ಆರ್.ರಹಮಾನ್ ಅವರ ಅನೇಕ ಸಂಯೋಜನೆಗಳಿಗೆ ಕೀಬೋರ್ಡ್ ನುಡಿಸಿದ್ದಾರೆ. ನವೆಂಬರ್ ೧೬,೨೦೧೧ರಂದು "ವಯ್ ದಿಸ್ ಕೊಳವೆರಿ ಡಿ" ಹಾಡಿನ ವೀಡಿಯೊ ಅಧಿಕೃತವಾಗಿ ಬಿಡುಗಡೆಯಾಯಿತು. ಇದು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಕೊಂಡಿತು. ಶೀಘ್ರದಲ್ಲೇ ಈ ಹಾಡು ಯೌಟ್ಯೂಬಿನಲ್ಲಿ ಅತ್ಯಂತ ಅನೂಶೋಧಿಸಬಹುದಾದ ಹಾಡುಗಳಲ್ಲಿ ಒಂದಾಯಿತು. ಕಡಿಮೆ ಸಮಯದಲ್ಲೆ ದೊಡ್ಡ ಸಂಖ್ಯೆಯ ಹಿಟ್ ಸ್ವೀಕರಿಸಿದ ಈ ಹಾಡಿಗೆ ಯೌಟ್ಯೂಬ್ "ಇತ್ತೀಚೆಗೆ ಅತ್ಯಂತ ಜನಪ್ರಿಯ" ಚಿನ್ನದ ಪದಕ ಮತ್ತು "ಟ್ರೆಂಡಿಂಗ್" ಬೆಳ್ಳಿ ಪದಕ ಪ್ರಶಸ್ತಿ ನೀಡಿ ಗೌರವಿಸಿತು. ಕೇವಲ ಈ ಹಾಡಿಗೆ ಮಾತ್ರವಲ್ಲದೆ ಈ ಚಿತ್ರದ ಎಲ್ಲಾ ಹಾಡುಗಳಿಗೂ ಹಾಗು ಹಿನ್ನಲೆ ಸಂಗೀತಕ್ಕೂ ಜನರಿಂದ ಪ್ರಶಂಸೆ ಸ್ವೀಕರಿಸಿದರು. ಇದರ ಪರಿನಾಮವಾಗಿ ಈ ಚಿತ್ರದ ಸಂಗೀತ ಸಂಯೋಜನೆಗೆ ಅನೇಕ ಪುರಸ್ಕಾರಗಳನ್ನು ಹೊಂದುವ ಮೂಲಕ ಮಾನ್ಯತೆ ಗಳಿಸಿದರು. ಅವುಗಳಲ್ಲಿ ಕೆಲವು ಗಮನಾರ್ಹ ಪುರಸ್ಕಾರಗಳು ಹೀಗಿವೆ- ಸ್ಟಾರ್ ವಿಜಯ್ ಟಿವಿಯ ವಿಜಯ್ ಅವಾರ್ಡ್ಸ್ ನೀಡಿದ "ಅತ್ಯುತ್ತಮ ಹುಡುಕು" ಪುರಸ್ಕಾರ ಹಾಗೂ ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಅವಾರ್ಡ್ ಮತ್ತು ೬೦ನೇ ದಕ್ಷಿಣ ಫಿಲಮ್ ಫೇರ್ ಅವಾರ್ಡ್ ಮುಂತಾದವುಗಳಿಂದ ನಾಮನಿರ್ದೇಶನ ಮಾಡಲಾಗಿದೆ. ತಮಿಳು ಚಿತ್ರರಂಗದಲ್ಲಿಮಾತ್ರವಲ್ಲದೆ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಈ ಚಿತ್ರವನ್ನು ಡಬ್ ಮಾಡುವಾಗ ಅನಿರುಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಂತರ ಅನಿರುಧ್ ನಟ ಧನುಷ್ ಅವರೊಂದಿಗೆ ಜೊತೆಗೂಡಿ ಆರೋಗ್ಯ ಪಾನೀಯ,ಬೂಸ್ಟ್ ಸಹಯೋಗದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸ್ಮರಣಾರ್ಥವಾಗಿ "ಸಚಿನ್ ಆಂಥೆಮ್" ಎಂಬ ಗೀತೆಯನ್ನು ನಿರ್ಮಾಪಿಸಿದರು.

೨೦೧೩-ಈವರೆಗೆ: ಮುಂದುವರಿದ ಯಶಸ್ಸು

ಬದಲಾಯಿಸಿ

೨೦೧೩ ರಲ್ಲಿ ಬಿಜೋಯ್ ನಂಬಿಯಾರ್ ನಿರ್ದೇಶನದ 'ಡೇವಿಡ್' ಎಂಬ ಚಿತ್ರದಲ್ಲಿ "ಕನವೆ ಕನವೆ" ಎಂಬ ಗೀತೆಯನ್ನು ಅನಿರುಧ್ ಸಂಯೋಜಿಸಿದುದಲ್ಲದೆ ಹಾಡಿಯೂ ಇರುವರು. ಇದರ ನಂತರ ನಟ ಧನುಷ್ ನಿರ್ಮಾಣದ 'ಎದಿರ್ ನೀಚಲ್' ಎಂಬ ಚಿತ್ರದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಡುಗಳು ಅನಿರುಧ್ ಅವರಿಗೆ ಧನಾತ್ಮಕ ವಿಮರ್ಶೆಗಳನ್ನು ತಂದುಕೊಟ್ಟಿತು. ಜೂಲೈ ೨೦೧೩ ರಲ್ಲಿ ಬಿಡುಗಡೆಯಾದ 'ವನಕಮ್ ಚೆನೈ', ಅವರ ಮುಂದಿನ ಧ್ವನಿಪಥವಾಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರತದ ಐಟ್ಯೂನ್ಸ್ ಟಾಪ್ ಆಲ್ಬಮ್ ವರ್ಗದಲ್ಲಿ ಅಗ್ರ ಸ್ಥಾನ ಪಡೆಯಿತು. ಅನಿರುಧ್ ಅವರು ಯೊಯೊ ಹನಿ ಸಿಂಗ್, ಹಿಪ್ ಹಾಪ್ ತಮಿಳ, ಹಾರ್ಡ್ ಕೌರ್, ಮಧನ್ ಕಾರ್ಕಿ ಮುಂತಾದವರೊಂದಿಗೆ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್ ೨೦೧೩ ರಂದು ಸೆಲ್ವರಾಘವನ್ ನಿರ್ದೇಶಿಸಿದ 'ಇರಂಡಾಂ ಉಳಗಂ' ಎಂಬ ಫಾಂಟಸಿ ಚಲನಚಿತ್ರದಲ್ಲಿ ಹಿನ್ನೆಲೆ ಸಂಗೀತ ಸಂಯೋಜನಾ ಮತ್ತು ಮರು-ರೆಕಾರ್ಡಿಂಗ್ ಮಾಡಲು ಒಪ್ಪಿದರು. ಅವರ ಮುಂದಿನ ಚಿತ್ರ ತಮ್ಮ ಆತ್ಮೀಯ ಗೆಳೆಯ ಸಿವ ಕಾರ್ತಿಕೇಯನ್ ನಟಿಸಿದ 'ಮಾನ್ ಕರಾಟೆ'. ಈ ಆಲ್ಬಮ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಐಟ್ಯೂನ್ಸ್ ನಲ್ಲಿ ಹೆಚ್ಚು ಹಣ ಗಳಿಸಿತು. ಅಂತಹ ಯಶಸ್ಸಿನ ನಂತರ ಅನಿರುಧ್ ಮತ್ತೆ ನಟ ಧನುಷ್ ನಿರ್ಮಾಪಿಸಿ ಹಾಗು ನಟಿಸಿದ 'ವೇಲೈಯಿಲ್ಲಾ ಪಟ್ಟಧಾರಿ'ಎಂಬ ಚಿತ್ರದಲ್ಲಿ ಸಂಗೀತ ಸಂಯೋಜನ ಮಾಡಿದರು. ೨೦೧೪ರಲ್ಲಿ ಎ.ಆರ್.ಮುರುಗದಾಸ್ ನಿರ್ದೇಶಿಸಿ, ವಿಜೈ ನಟಿಸಿದ 'ಕತ್ತಿ' ಎಂಬ ಚಿತ್ರದಲ್ಲಿ ಸಂಗೀತ ಸಂಯೋಜನ ಮಾಡಿದರು. ಈ ಚಿತ್ರದಲ್ಲಿನ "ಸೆಲ್ಫಿ ಪುಲ್ಲೆ" ಹಾಡು ಭಾರೀ ಹಿಟ್ ಆಯಿತು. ಇದನಂತರ ಮೂರನೆಯ ಬಾರಿ ತಮ್ಮ ಗೆಳೆಯ ಸಿವ ಕಾರ್ತಿಕೇಯನ್ ನಟಿಸಿ, ಧನುಷ್ ನಿರ್ಮಾಣಿಸಿದ 'ಕಾಕ್ಕಿ ಸಟ್ಟೈ' ಚಿತ್ರದಲ್ಲಿ ತಮ್ಮ ಸಂಯೋಜಕ ಕೆಲಸವನ್ನು ಉತ್ತಮವಾಗಿ ಪೂರೈಸಿದ್ದಾರೆ. ೨೦೧೩ ರ ಆರಂಭದಲ್ಲಿ, ಸುಮಾರು ಇಪ್ಪತ್ತು ಸಿನಿಮಾ ಕಥೆಗಳನ್ನು ಕೇಳಿದ ಬಳಿಕ ವಿಘ್ನೇಶ್ ಶಿವನ್ ನಿರ್ದೇಶಿಸಿದ 'ನಾನುಂ ರೌಡಿದಾನ್' ಎಂಬ ಚಿತ್ರದಲ್ಲಿ ತನ್ನ ನಟನೆಯ ಚೊಚ್ಚಲ ಮಾಡಲು ಘೋಷಿಸಲಾಯಿತು.ಆದರೆ ಅನಿರುಧ್ ಸಂಗೀತ ಸಂಯೋಜನೆಗೆ ಹೆಚ್ಚಿನ ಮುಖ್ಯತ್ವ ನೀಡುವುದಾಗಿಯೂ ಇದ್ದನ್ನೇ ತಮ್ಮ ವೃತ್ತಿಯನ್ನಾಗಿ ಮುಂದುವರಿಸುವುದಾಗಿಯೂ ತಿಳಿಸಿ ಈ ಚಿತ್ರದ ಧ್ವನಿಪಥದಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಇದಲ್ಲದೆ ಹೊಸಬರನ್ನು ಒಳಗೊಂಡ 'ಆಕ್ಕೊ' ಎಂಬ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಒಪ್ಪಂದ ಸಹಿಮಾಡಿದರು. ನಂತರ ಧನುಷ್ ನಟಿಸಿದ 'ಮಾರಿ' ಎಂಬ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿ ಇನ್ನಷ್ಟು ಖ್ಯಾತಿ ಸಂಪಾದಿಸಿದರು. ನಟ ಅಜಿತ್ ಕುಮಾರ್ ಅವರೊಂದಿಗೆ ಮೊಟ್ಟಮೊದಲು 'ವೇದಾಲಂ' ಎಂಬ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಿದರು. ಈ ಚಿತ್ರದ "ಆಳುಮ ಡೋಲುಮ" ಗೀತೆಗೆ ಅತ್ಯಂತ ಜನಪ್ರಿಯ ಪಡೆದರು. ಈ ಚಲನಚಿತ್ರ ಸ್ವತಃ ಒಂದು ಬ್ಲಾಕ್ಬಾಸ್ಟರ್ ಆಯಿತು ಮತ್ತು ೨೦೧೫ ನಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರವಾಯಿತು. ಮತ್ತೊಮ್ಮೆ ಅನಿರುಧ್ ನಟ ಧನುಷ್ ಅವರೊಂದಿಗೆ 'ತಂಗ ಮಗನ್' ಎಂಬ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡಿದರು.

೨೦೧೬-ಈವರೆಗೆ: ಅಂತರರಾಷ್ಟ್ರೀಯ ಯಶಸ್ಸು

ಬದಲಾಯಿಸಿ

ಐದು ತಿಂಗಳ ವಿರಾಮದ ನಂತರ ಏಪ್ರಿಲ್ ೨೦೧೬ ರಲ್ಲಿ "ಹೊಲ ಅಮಿಗೋ" ಎಂಬ ಗೀತೆಯನ್ನು ಬಿಡುಗಡೆ ಮಾಡಿದರು. ಮೇ ೨೦೧೬ ರಲ್ಲಿ ಸೋನಿ ಮ್ಯೂಸಿಕ್ ಇಂಡೀಯದವರೊಂದಿಗೆ ಒಂದು ಒಪ್ಪಂದವನ್ನು ಸಹಿ ಮಾಡಿದರು.ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ಅನಿರುಧ್ ಅವರ ಸ್ವತಂತ್ರ ಆಲ್ಬಮ್ ಮತ್ತು ನೇರ ಸಂಗೀತ ಪ್ರಕಟವನ್ನು ಸೋನಿ ಕಂಪನಿಯವರೇ ಪ್ರಚಾರ ಮಾಡಲು ಮತ್ತು ನಿರ್ಮಿಸಲು ನಿರ್ಧರಿಸಿತು.

ಧ್ವನಿಮುದ್ರಿಕೆ

ಬದಲಾಯಿಸಿ

ಬಿಡುಗಡೆಯಾದ ಧ್ವನಿಮುದ್ರಿಕೆಗಳು

ಬದಲಾಯಿಸಿ
ವರ್ಷ ತಮಿಳು ಸಂಗೀತ ಶೀರ್ಷಿಕೆ
೨೦೧೧ 3 ಸೋನಿ ಮ್ಯೂಸಿಕ್ ಇಂಡಿಯಾ
೨೦೧೨ ಎದಿರ್ ನೀಚಲ್ ಸೋನಿ ಮ್ಯೂಸಿಕ್ ಇಂಡಿಯಾ
೨೦೧೩ ಡೇವಿಡ್
ವನಕಮ್ ಚೆನೈ ಸೋನಿ ಮ್ಯೂಸಿಕ್ ಇಂಡಿಯಾ
ಇರಂಡಾಮ್ ಉಳಗಂ ಸೋನಿ ಮ್ಯೂಸಿಕ್ ಇಂಡಿಯಾ
೨೦೧೪ ವೇಲೈಯಿಲ್ಲಾ ಪಟ್ಟಧಾರಿ ವಂಡರ್ಬಾರ್ ಸ್ಟುಡಿಯೋಸ್
ಮಾನ್ ಕರಾಟೆ ಸೋನಿ ಮ್ಯೂಸಿಕ್ ಇಂಡಿಯಾ
ಕತ್ತಿ ಎರೋಸ್ ಮ್ಯುಸೀಕ್
ಕಾಕ್ಕಿ ಸಟ್ಟೈ ವಂಡರ್ಬಾರ್ ಸ್ಟುಡಿಯೋಸ್
೨೦೧೫ ಮಾರಿ ಸೋನಿ ಮ್ಯೂಸಿಕ್ ಇಂಡಿಯಾ
ನಾನುಂ ರೌಡಿದಾನ್ ವಂಡರ್ಬಾರ್ ಸ್ಟುಡಿಯೋಸ್
ವೆದಾಲಂ ಸೋನಿ ಮ್ಯೂಸಿಕ್ ಇಂಡಿಯಾ
ತಂಗ ಮಗನ್ ಸೋನಿ ಮ್ಯೂಸಿಕ್ ಇಂಡಿಯಾ

ಮುಂಬರುವ ಯೋಜನೆಗಳು

ಬದಲಾಯಿಸಿ
ವರ್ಷ ಚಲನಚಿತ್ರ ಸಂಗೀತ ಶೀರ್ಷಿಕೆ
೨೦೧೬ ರೆಮೊ ಸೋನಿ ಮ್ಯೂಸಿಕ್ ಇಂಡಿಯಾ
೨೦೧೬ ರಂ ಸೋನಿ ಮ್ಯೂಸಿಕ್ ಇಂಡಿಯಾ
೨೦೧೬ ಆಕ್ಕೊ ಸೋನಿ ಮ್ಯೂಸಿಕ್ ಇಂಡಿಯಾ
೨೦೧೭ ತಲೆ ೫೭

ಪ್ರಶಸ್ತಿಗಳು

ಬದಲಾಯಿಸಿ
  1. ೨೦೧೩ರಲ್ಲಿ ವಿಜಯ್ ಅವಾರ್ಡ್ಸ್ ನೀಡದ "ಅತ್ಯುತ್ತಮ ಹುಡುಕು" ಪ್ರಶಸ್ತಿ ಮತ್ತು ೨ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಅವಾರ್ಡ್ಸ್(SIIMA)ನಿಂದ "ಸಂವೇದನೀಯ ಸಂಗೀತ ನಿರ್ದೇಶಕ" ಪ್ರಶಸ್ತಿ
  2. ೨೦೧೪ ಮತ್ತು ೨೦೧೫ರಲ್ಲಿ ಎಡಿಸನ್ ಅವಾರ್ಡ್ಸ್ ನೀಡಿದ "ಅತ್ಯುತ್ತಮ ಸಂಗೀತ ನಿರ್ದೇಶಕ" ಪ್ರಶಸ್ತಿ
  3. ೨೦೧೫ರಲ್ಲಿ ದಕ್ಷಿಣದ ಫಿಲ್ಮ್ಫೇರ್ ಅವಾರ್ಡ್ಸ್ ಮತ್ತು ೪ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಅವಾರ್ಡ್ಸ್(SIIMA)ನಿಂದ "ಅತ್ಯುತ್ತಮ ಸಂಗೀತ ನಿರ್ದೇಶಕ" ಪ್ರಶಸ್ತಿ
 

ಉಲ್ಲೇಖಗಳು

ಬದಲಾಯಿಸಿ