ಅನಸೂಯಾ ಸಿದ್ದರಾಮ ಕೆ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನಸೂಯಾ ಸಿದ್ಧರಾಮ ಅವರು ಕನ್ನಡದ ಹೆಸರಾಂತ ಲೇಖಕಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು. ಇವರ ಅಗಣಿತ ಲೇಖನಗಳು ತರಂಗ, ತುಷಾರ,ಕರ್ಮವೀರ ಮುಂತಾದ ಕನ್ನಡದ ವಾರ ಮತ್ತು ಮಾಸಿಕ ಪತ್ರಿಕೆಗಳಲ್ಲಿ ಪ್ರಕತಟಗೊಂಡಿವೆ. ಇವರು ಹೊರತಂದ ಕೃತಿಗಳು ಈ ಕೆಳಗಿನಂತಿವೆ:

ಕೃತಿಗಳು

ಬದಲಾಯಿಸಿ
  • ಸ್ವಪ್ನಲೋಕದ ಸ್ವಾರಸ್ಯಗಳು
  • ಸುಂದ್ರಿ

ಕಥಾಸಂಕಲನ

ಬದಲಾಯಿಸಿ
  • ತಾನು ಎಂಬ ತೊಡಕು
  • ಕಳ್ಳಗಿಂಡಿಯ ಕೊರೆದು

ಪುರಸ್ಕಾರ

ಬದಲಾಯಿಸಿ
  1. " ತಾನು ಎಂಬ ತೊಡಕು" ಕಥಾಸಂಕಲನಕ್ಕೆ ಈ ಪ್ರಶಸ್ತಿಗಳು ದೊರೆತಿವೆ:
  2. ಹುನಗುಂದ ತಾಲೂಕಿನ ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ
  3. ಬೆಳಗಾವಿ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ
  4. ಕನ್ನಡ ಲೇಖಕಿಯರ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಪತ್ರ.
  5. "ಕಳ್ಳಗಿಂಡಿಯ ಕೊರೆದು" ಕಥಾ ಸಂಕಲನಕ್ಕೆ ಕರ್ನಾಟಕ ಸಂಘ ಶಿವಮೊಗ್ಗ ಅವರ ಯು.ಆರ್.ಅನಂತಮೂರ್ತಿ ಪ್ರಶಸ್ತಿ.