ಅನಂತನಾಥ ಸ್ವಾಮಿ ಬಸದಿ ಮಳಲಿ

ಬಸದಿಯ ಇತಿಹಾಸ

ಬದಲಾಯಿಸಿ

ಈ ಬಸದಿಯ ನಿರ್ಮಾಣದ ಬಗ್ಗೆ ಲಿಖಿತ ದಾಖಲೆಗಳು ಸಿಗುವುದಿಲ್ಲ. ಆದರೆ ಸಾಮಾನ್ಯವಾಗಿಇದಕ್ಕೆ ೪೦೦ ವರ್ಷಗಳ ಆಗಿರಬಹುದೆಂದು ಹೇಳುತ್ತಾರೆ. ೧೮೧೬ರಲ್ಲಿ ಒಮ್ಮೆ ಜೀರ್ಣೋದ್ಧಾರಗೊಂಡಿದೆ ಅಧಿಕೃತವಾಗಿ ತಿಳಿದುಬರುತ್ತದೆ. ರಾಣಿ ಅಬ್ಬಕ್ಕದೇವಿ ಮಳಲಿಯಲ್ಲಿ ಇದ್ದುಕೊಂಡು ಕೆಲವು ಜನಧಾರಣೆಯ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಪೂಜಾ ಕೈಂಕರ್ಯ

ಬದಲಾಯಿಸಿ
ಅನಂತನಾಥ ಸ್ವಾಮಿಯ ಸನ್ನಿಧಿಯಲ್ಲಿ ಪದ್ಮಾವತಿದೇವಿ, ಬ್ರಹ್ಮದೇವರು ಹಾಗೂ ೨೨ ತೀರ್ಥಂಕರರ ಮೂರ್ತಿ ಹಾಗೂ ಕೆಲವು ಪೂಜಾ ಮೂರ್ತಿಗಳು ಗಂಧಕ ಬಳಿಯಲ್ಲಿದೆ. ಇವೆಲ್ಲವುಗಳಿಗೆ ಪೂಜೆ ಸಲ್ಲುತ್ತದೆ. 

ಬಸದಿಯ ಹೊರಾಂಗಣ

ಬದಲಾಯಿಸಿ

ಬಸದಿಯ ಎದುರಲ್ಲಿ ಮಾನಸ್ಥಂಭವಿಲ್ಲ. ಬಸದಿ ಪ್ರವೇಶಿಸಿದಾಗ ಸಿಗುವ ಗೋಪುರದ ಎಡಬದಿಯಲ್ಲಿ ನೈವೇದ್ಯದಕೋಣೆ ಹಾಗೂ ಬಲಬದಿಗೆ ಮುನ್ಯಾಸೋ ಎಂಬ ಕೋಣೆಯಿದೆ. ಪ್ರಾರ್ಥನಾ ಮಂಟಪದ ಎದುರುಗಡೆಯಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಅದರಂತೆ ಸಂಸಾರದರ್ಶನ ಮತ್ತು ಕ್ಷೇತ್ರದ ವರ್ಣಚಿತ್ರಗಳಿವೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳ ಮಂಟಪವಿದೆ. ಬಳಿಯಲ್ಲಿ ಜಯಗಂಟೆ, ಜಾಗಟೆ ಇತ್ಯಾದಿಗಳನ್ನು ತೂಗುಹಾಕಲಾಗಿದೆ. ಗಂಧಕುಟಿ ತೀರ್ಥಂಕರ ಮಂಟಪವನ್ನು ದಾಟಿದಾಗ ಮುಂದೆ ಶುಕನಾಶಿ ಸಿಗುತ್ತದೆ. ಪದ್ಮಾವತಿ ದೇವಿಗೆ ಸೀರೆ ಉಡಿಸಿ, ಅಲಂಕಾರ ಪೂಜೆಯನ್ನು ಮಾಡಲಾಗುತ್ತದೆ. ಉತ್ತರಾಭಿಮುಖವಾಗಿ ಕಾಲಬಳಿಯಲ್ಲಿ ನವರಂಗವನ್ನು ಹೊಂದಿದೆ. ಇಲ್ಲಿ ಹಾಕಿ ಪ್ರಸಾದ ನೋಡುವ ಕ್ರಮವಿದೆ. ವಿಶೇಷ ಪ್ರಾರ್ಥನೆ ಸಲ್ಲಿಸಿ ಅದು ಈಡೇರಿದಾಗ ಪೂಜೆಯನ್ನು ಸಮರ್ಪಿಸುವ ಕ್ರಮವಿದೆ. ಬಸದಿಯ ಪ್ರಾಂಗಣದಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ತ್ರಿಶೂಲ ಹಾಗೂ ನಾಗರ ಮೂರ್ತಿಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಲಿ ಕಲ್ಲುಗಳು ಹಾಗೂ ಅಷ್ಟದಿಕ್ಪಾಲಕರ ಕಲ್ಲುಗಳು ಆದರೆ ಪೂಜೆ ನಡೆಯುತ್ತಿಲ್ಲ.[]

ಪೂಜಾ ವಿಧಾನ ಹಾಗೂ ಹಬ್ಬಗಳ ಆಚರಣೆ

ಬದಲಾಯಿಸಿ

ಅನಂತನಾಥ ಸ್ವಾಮಿ ಬಿಂಬವು ಎರಡು ಅಡಿ ಎತ್ತರ ಪದ್ಮಾಸನದಲ್ಲಿ ಹಿಂಬದಿ ಮಕರತೋರಣದ ಅಲಂಕಾರ ಪ್ರಭಾವಳಿ ಇದೆ. ಪ್ರತಿದಿನವೂ ಅಭಿಷೇಕ ನಡೆಯುತ್ತದೆ. ಹಿಂದಿನ ಕಾಲದಲ್ಲಿ ದಿನದ ಮೂರು ಹೊತ್ತು ಪೂಜೆ ನಡೆಯುತ್ತಿತ್ತು. ಆದರೆ ಈಗ ಒಂದು ಹೊತ್ತಿನ ಪೂಜೆ ಮಾತ್ರ ನಡೆಯುತ್ತದೆ. ಮುಖ್ಯವಾಗಿ ಮೂಲ ಶ್ರಾವಣ, ಮನೆ ತುಂಬಿಸುವ ಹಬ್ಬ ಮಾತ್ರ ನಡೆಯುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. pp. ೨೭೭.