ಅದೃಷ್ಟದ ವ್ಯಾಖ್ಯಾನ ಅದನ್ನು ವ್ಯಾಖ್ಯಾನಿಸುವವನ ತತ್ವಶಾಸ್ತ್ರೀಯ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಒಬ್ಬರ ಇಚ್ಛೆ, ಉದ್ದೇಶ ಅಥವಾ ಬಯಸಿದ ಪರಿಣಾಮಕ್ಕೆ ಸಂಬಂಧಿಸದಂತೆ, ಒಬ್ಬರ ನಿಯಂತ್ರಣಕ್ಕೆ ಮೀರಿದ ಅಂಶವೆಂದು ಭಾವಿಸಲಾದಾಗ, ಜನರು ಈ ಪದವನ್ನು ಬಳಸಿದಾಗ ಸಾಮಾನ್ಯವಾಗಿ ಅವರು ಸೂಚಿಸುತ್ತಿರುವುದಕ್ಕೆ ಕನಿಷ್ಠಪಕ್ಷ ಎರಡು ಅರ್ಥಗಳಿವೆ, ವಿಧಾಯಕ ಅರ್ಥ ಮತ್ತು ವಿವರಣಾತ್ಮಕ ಅರ್ಥ. ವಿಧಾಯಕ ಅರ್ಥದಲ್ಲಿ, ಅದೃಷ್ಟ ಒಂದು ಅಲೌಕಿಕ ಹಾಗೂ ನಿಯಂತ್ರಣವಾದಿ ಪರಿಕಲ್ಪನೆಯಾಗಿದೆ, ಅಂದರೆ ನಿರ್ದಿಷ್ಟ ಘಟನೆಗಳು ನಿಜಕ್ಕೂ ಭೌತಶಾಸ್ತ್ರದ ನಿಯಮಗಳು ನಿರ್ದಿಷ್ಟ ಘಟನೆಗಳು ಸಂಭವಿಸಬೇಕೆಂದು ಸೂಚಿಸುವ ರೀತಿಯಲ್ಲಿ ಸಂಭವಿಸಬೇಕೆಂದು ಸೂಚಿಸುವ ಶಕ್ತಿಗಳಿವೆ (ಉದಾ. ದೇವತೆಗಳು ಅಥವಾ ಆತ್ಮಗಳು). ಜನರು ತಾವು "ಅದೃಷ್ಟವನ್ನು ನಂಬುವುದಿಲ್ಲ" ಎಂದು ಹೇಳಿದಾಗ ಅವರು ಸೂಚಿಸುವುದು ವಿಧಾಯಕ ಅರ್ಥವನ್ನು. ವಿವರಣಾತ್ಮಕ ಅರ್ಥದಲ್ಲಿ, ಜನರಿಗೆ ಅದೃಷ್ಟಕರ ಅಥವಾ ದುರದೃಷ್ಟಕರವೆಂದು, ಮತ್ತು ಬಹುಶಃ ಅಸಂಭವನೀಯವೆಂದು ಕಂಡುಕೊಳ್ಳುವ ಘಟನೆಗಳ ನಂತರ ಜನರು ಅದೃಷ್ಟದ ಬಗ್ಗೆ ಮಾತನಾಡುತ್ತಾರೆ.

ನಾಲ್ಕೆಲೆಯ ಕ್ಲೋವರ್ ಅದೃಷ್ಟವನ್ನು ತರುತ್ತದೆಂದು ಪರಿಗಣಿಸಲಾಗುತ್ತದೆ

ಹಾಗಾಗಿ, ಅದೃಷ್ಟದ ಸಾಂಸ್ಕೃತಿಕ ದೃಷ್ಟಿಕೋನಗಳು ಅದನ್ನು ಯಾದೃಚ್ಛಿಕ ಅವಕಾಶದ ವಿಷಯವಾಗಿ ಗ್ರಹಿಸುವುದರಿಂದ ಅದಕ್ಕೆ ನಂಬಿಕೆ ಅಥವಾ ಮೂಢನಂಬಿಕೆಯಂತಹ ವಿವರಣೆಗಳನ್ನು ಆರೋಪಿಸುವವರೆಗೆ ಬದಲಾಗುತ್ತವೆ. ಅದೃಷ್ಟದ ಸಂಕೇತಗಳು ವಿಶ್ವದಾದ್ಯಂತ ಜನಪ್ರಿಯವಾಗಿವೆ ಮತ್ತು ಅನೇಕ ರೂಪಗಳನ್ನು ತೆಗೆದುಕೊಳ್ಳುತ್ತವೆ.

ಅದೃಷ್ಟವು ವೈಯಕ್ತಿಕ ಅವಕಾಶದ ಘಟನೆಯನ್ನು ತಿಳಿದುಕೊಳ್ಳುವ ಒಂದು ಬಗೆ. ಅದೃಷ್ಟವು ಮೂರು ಅಂಶಗಳನ್ನು ಹೊಂದಿದೆ[] ಮತ್ತು ಇದರಿಂದ ಇದು ಯಾದೃಚ್ಛಿಕತೆ ಅಥವಾ ಸಂಭವನೀಯತೆಯಿಂದ ವಿಶಿಷ್ಟವಾಗಿದೆ.

  • ಅದೃಷ್ಟವು ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು.
  • ಅದೃಷ್ಟವು ಆಕಸ್ಮಿಕ ಅಥವಾ ಅವಕಾಶವಿರಬಹುದು.
  • ಅದೃಷ್ಟವು ಸಚೇತನ ಜೀವಿಗೆ ಅನ್ವಯಿಸುತ್ತದೆ.

ಅದೃಷ್ಟದ ಕೆಲವು ಉದಾಹರಣೆಗಳು:

  • ಒಂದು ಬೆಲೆಬಾಳುವ ವಸ್ತು ಅಥವಾ ಹಣ ಸಿಗುವುದು.
  • ನಕಾರಾತ್ಮಕ ತಾರ್ಕಿಕ ಊಹೆಗಳ ಹೊರತಾಗಿಯೂ ಒಂದು ಘಟನೆಯಲ್ಲಿ ಗೆಲ್ಲುವುದು.
  • ಒಂದು ಪ್ರಶ್ನೆಸ್ಪರ್ಧೆಯಲ್ಲಿ ನಿಮಗೆ ಗೊತ್ತಿರದ ಉತ್ತರವನ್ನು ನೀವು ಸರಿಯಾಗಿ ಊಹಿಸುವುದು.
  • ಕೊನೆ ಕ್ಷಣದಲ್ಲಿ ಒಂದು ಅಪಘಾತವನ್ನು ತಪ್ಪಿಸುವುದು
  • ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸುವುದು

ಉಲ್ಲೇಖಗಳು

ಬದಲಾಯಿಸಿ
  1. Luck: the brilliant randomness of everyday life p. 32. "Luck accordingly involves three things: (1) a beneficiary or maleficiary, (2) a development that is benign (positive) or malign (negative) from the stand point of the interests of the affected individual, and that, moreover, (3) is fortuitous (unexpected, chancy, unforeseeable.)"


"https://kn.wikipedia.org/w/index.php?title=ಅದೃಷ್ಟ&oldid=795645" ಇಂದ ಪಡೆಯಲ್ಪಟ್ಟಿದೆ