ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್

ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್
Runner over blank map
  • ಪ್ರಸ್ತುತ ವಿಷಯ:
  • ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್
    ಲಂಡನ್ 2017
  • ಆಥಿತೇಯ = ಲಂಡನ್ --ಯುನೈಟೆಡ್ ಕಿಂಗಡಮ್
  • ದಿನಾಂಕ= 4–13, ಆಗಸ್ಟ್
  • ಸ್ಪರ್ಧೆಗಳು =48
  • ದೇಶಗಳು =205
  • ಸ್ಪರ್ಧಾಳುಗಳು = 2,036
  • ಕ್ರೀಡಾಂಗಣ = ಓಲಿಂಪಿಕೆ ಸ್ಟೇಡಿಯಮ್ ಲಂಡನ್ 60,000
  • ಹಿಂದಿನ ಕೂಟ = ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್ ಬೀಜಿಂಗ್ 2015
  • ಮುಂದಿನ ಕೂಟ = ವಿಶ್ವ ಅತ್ಲೆಟಿಕ್ ಚಾಂಪಿಯನ್‌ಶಿಪ್ಸ್

ದೋಹ 2019.

.

ಅಥ್ಲೆಟಿಕ್ಸ್ ಕ್ರೀಡೆ

ಬದಲಾಯಿಸಿ
 
ಉಸೇನ್ ಬೋಲ್ಟ್ 200 ಮೀ ಫೈನಲ್ ಡೇಗುನಲ್ಲಿ 2011
  • ಅಥ್ಲೆಟಿಕ್ಸ್ (Athletics)ವಿಭಾಗದಲ್ಲಿ ಚಾಲನೆಯಲ್ಲಿರುವ, ಓಡುವುದು, ಹಾರುವುದು ಅಥವಾ ನಿರ್ದಿಷ್ಟವಾದ ತೂಕ ಮತ್ತು ಆಕರಗಳುಳ್ಳ ವಸ್ತುಗಳನ್ನು ಎಸೆಯುವುದು ಮುಂತಾದ ಚಟುವಟಿಕೆಗಳಿಗೆ ಅಥವಾ ಅತ್ಲೆಟಿಕ್ಸ್‍ಗೆ, ಸ್ಪರ್ಧಾತ್ಮಕ ಕ್ರೀಡೆಗಳಿಗೆ ಈ ಹೆಸರಿದೆ. [[]] ದೈಹಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿ ಮೈದಾನದ ಆಟಗಳು (ಫಿಲ್ಡ್ ಇವೆಂಟ್ಸ್) ಹಾಗು ಜಾಡಿನ ಆಟಗಳು (ಟ್ರ್ಯಾಕ್ ಇವೆಂಟ್ಸ್) ಎಂಬ ಎರಡು ಮಾದರಿಗಳಿವೆ. ಮೈದಾನದ ಆಟಗಳಲ್ಲಿ ದೂರನೆಗೆತ, ಎತ್ತರನೆಗೆತ, ಕುಪ್ಪಳಿಸುತ್ತಾ ನೆಗೆಯುವುದು, ಕೈಯೂರಿಕೊಂಡು ಅಥವಾ ಗಣೆಯ ಸಹಾಯದಿಂದ ನೆಗೆಯುವುದು, ಭಾರ ಎತ್ತುವುದು, ಡಿಸ್‍ಕಸ್, ಜಾವೆಲಿನ್ ಮತ್ತು ಭಾರದ ಸುತ್ತಿಗೆಯನ್ನು (ಹ್ಯಾಮರ್) ಎಸೆಯುವುದು ಮೊದಲಾದವು ಸೇರಿವೆ. ಜಾಡಿನಲ್ಲಿ ಓಡುವ ಓಟಗಳೆಲ್ಲ ಜಾಡಿನ ಓಟಗಳಲ್ಲಿ ಸೇರುತ್ತವೆ. ದೂರ ಮತ್ತು ರೀತಿಯನ್ನು ಅನುಸರಿಸಿ ಈ ಓಟಗಳಲ್ಲಿ ಅನೇಕ ಮಾದರಿಗಳಿವೆ. ಗೊತ್ತಾದ ದೂರವನ್ನು ಬಹಳ ಜೋರಾಗಿ ಓಡುವುದು ನೂರು ಗಜಗಳ ಓಟ, ಇನ್ನೂರಿಪ್ಪತ್ತು ಗಜಗಳ ಓಟ, ಕಾಲು ಮೈಲಿಓಟ, ಅರ್ಧ ಮೈಲಿ ಓಟ, ಮೈಲಿ ಓಟ, ಮ್ಯಾರತಾನ್ ಓಟ ಮುಂತಾದ ಅನೇಕ ಓಟಗಳಿವೆ. ಇದರಲ್ಲಿ ದೂರಪ್ರದೇಶದ ಓಟ (ಕ್ರಾಸ್‍ಕಂಟ್ರಿ ರೇಸ್) ಸೇರುವುದಿಲ್ಲ. ಹೀಗೆಯೆ ಅಡಚಣೆಗಳಿಂದ ಕೂಡಿರುವ ಓಟಗಳು ಉಂಟು. ಇದೇ ರೀತಿಯಲ್ಲಿ ರಿಲೇ ಓಟಗಳು ಅಂದರೆ ತಂಡದಲ್ಲಿ ಒಬ್ಬನು ಒಂದು ಮಜಲಿನಿಂದ ಮುಂದಿನ ಮಜಲಿಗೆ ಓಡಿ ನಿಲ್ಲುವ, ಅಲ್ಲಿಯವನು ಅಲ್ಲಿಂದ ಮುಂದಿನ ಮಜಲಿಗೆ ಓಡುವ ಹೀಗೆ ಆಯಾ ತಂಡದಲ್ಲಿ ಪ್ರತಿಯೊಬ್ಬನೂ ಮುಂದಿನ ಮಜಲಿಗೆ ಓಡಿ, ಕೊನೆಗಿರುವವನ ಗುರಿಯನ್ನು ಮುಟ್ಟುವ ಕಪ್ಪೆ ಓಟದ ಪಂದ್ಯ, ನಡಿಗೆ ಓಟ ಮುಂತಾದವು ಇವೆ.)

ಪ್ರಮುಖವಾದವು

ಬದಲಾಯಿಸಿ
  • ಅಥ್ಲೆಟಿಕ್ಸ್ ಸ್ಪರ್ಧೆಗಳ ಅತ್ಯಂತ ಸಾಮಾನ್ಯ ವಿಧಗಳು ಟ್ರ್ಯಾಕ್ ಮತ್ತು ಫೀಲ್ಡ್, ರಸ್ತೆ ಓಟ, ಕ್ರಾಸ್ ಕಂಟ್ರಿ ಓಟ, ಮತ್ತು ಓಟದ ವಾಕಿಂಗ್. ರೇಸಿಂಗ್ ಸ್ಪರ್ಧೆಯ ಘಟನೆಗಳ ಫಲಿತಾಂಶವನ್ನು ಸ್ಪರ್ಧೆಗೆ ಅನುಗುಣವಾಗಿ ಪೂರ್ಣಗೊಳಿಸಿದ ಸ್ಥಾನವನ್ನು /ಸ್ಥಳ ಅಥವಾ ಸಮಯವನ್ನು ಅಳತೆ ಮಾಡಲಾಗುವುದು ಮತ್ತು ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ, ಆದರೆ ಪ್ರಯತ್ನಗಳ ಸರಣಿಯಿಂದ ಅತ್ಯುನ್ನತ ಅಥವಾ ಹೆಚ್ಚಿನ ಮಾಪನವನ್ನು ಸಾಧಿಸುವ ಕ್ರೀಡಾಪಟುವಿನಿಂದ ಸಾಧಿಸಲಾದ ಜಿಗಿತಗಳು ಮತ್ತು ಥ್ರೋಗಳನ್ನು ಗೆಲುವು ಎಂದು ಗಣಿಸುತ್ತದೆ. ಓಟ ಇತ್ಯಾದಿ ಸ್ಪರ್ಧೆಗಳ ಸರಳತೆ ಮತ್ತು ಬಹಳ ದುಬಾರಿ ಸಲಕರಣೆಗಳ ಅಗತ್ಯತೆ ಇಲ್ಲದಿರುವುದು, ಅಥ್ಲೆಟಿಕ್ಸ್ ಅನ್ನು ವಿಶ್ವದ ಅತ್ಯಂತ ಸಾಮಾನ್ಯರೂ ಸ್ಪರ್ಧಿಸುವ ಕ್ರೀಡೆಗಳನ್ನಾಗಿಸಿವೆ ಅಥ್ಲೆಟಿಕ್ಸ್ ಹೆಚ್ಚಾಗಿ ವೈಯಕ್ತಿಕ ಚುರುಕು ಮತ್ತು ಸಾಹಸ (ಬ್ರಿಕ್ಸ್) ಆಟವಾಗಿದೆ. ಆದರೆ ತಂಡದ ಸ್ಕೋರ್ಗಾಗಿ ಇರುವ ರಿಲೇ ರೇಸ್ಗಳು ಮತ್ತು, ಕ್ರಾಸ್ ಕಂಟ್ರಿನಂತಹ ಸ್ಪರ್ಧೆಗಳಉ ತಂಡದ ಕ್ರೀಡಾಪಟುಗಳ ಪ್ರದರ್ಶನಗಳಾಗಿವೆ.

ಇತಿಹಾಸ

ಬದಲಾಯಿಸಿ
  • ಸಂಘಟಿತ ಅಥ್ಲೆಟಿಕ್ಸ್ 776 ಕ್ರಿ.ಪೂ.ದಿಂದ ಪ್ರಾಚೀನ ಒಲಂಪಿಕ್ ಕ್ರೀಡಾಕೂಟಗಳಿಗೆ ಗುರುತಿಸಲ್ಪಟ್ಟಿವೆ. ಅಥ್ಲೆಟಿಕ್ಸ್ನಲ್ಲಿನ ಆಧುನಿಕ ಘಟನೆಗಳ ನಿಯಮಗಳು ಮತ್ತು ಸ್ವರೂಪವನ್ನು ಪಾಶ್ಚಿಮಾತ್ಯ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ 19 ನೇ ಮತ್ತು 20 ನೇ ಶತಮಾನದ ಆರಂಭದಲ್ಲಿ ಯೋಜಿಸಲಾಯಿತು. ನಂತರ ಪ್ರಪಂಚದ ಇತರ ಭಾಗಗಳಿಗೆ ಅದು ಹರಡಿತು. ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ ಮತ್ತು ಅದರ ಸದಸ್ಯ ಫೆಡರೇಶನ್ಸ್ಗಳಿಂದ ಹೆಚ್ಚಿನ ಆಧುನಿಕ ಉನ್ನತ ಮಟ್ಟದ ಸ್ಪರ್ಧಾಕೂಟಗಳನ್ನು ನಡೆಸಲಾಗುತ್ತದೆ.
  • 1849ರಲ್ಲಿ ವೂಲ್‍ವಿಚ್‍ನ ರಾಯಲ್ ಮಿಲಿಟರಿ ಅಕಾಡೆಮಿ ಆಟಪಾಟಗಳ ವ್ಯವಸ್ಥೆಯನ್ನು ಮಾಡಲಾರಂಭಿಸಿದಂದಿನಿಂದ ದೈಹಿಕ ಚಟುವಟಿಕೆಗಳು ಹೆಚ್ಚು ಜನಪ್ರಿಯವಾದವು. 1857ರಲ್ಲಿ ಕೇಂಬ್ರಿಜ್‍ನಲ್ಲೂ 1860ರಲ್ಲಿ ಆಕ್ಸ್‍ಫರ್ಡಿನಲ್ಲೂ ಕ್ರೀಡಾಕೂಟಗಳು ಪ್ರಾರಂಭವಾದವು. 1864ರಲ್ಲಿ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾರಂಭಿಸಲಾಯಿತು. 1866ರಲ್ಲಿ ಇಂಗ್ಲೆಂಡಿನಲ್ಲಿ ದೈಹಿಕ ಚಟುವಟಿಕೆಗಳ ಛಾಂಪಿಯನ್‍ಷಿಪ್‍ಗಳನ್ನು ಏರ್ಪಡಿಸಿದರು. ಉಳಿದ ದೇಶಗಳು ತ್ವರಿತವಾಗಿ ಈ ಮಾದರಿಯನ್ನು ಅನುಸರಿಸಿದವು.
  • ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳನ್ನು ವ್ಯವಸ್ಥೆಗೊಳಿಸುವ ಮಂಡಳಿಯನ್ನು ಸ್ವಲ್ಪಕಾಲದಲ್ಲಿ ರಚಿಸಿ ಸ್ಪರ್ಧೆಗಳಿಗೆ ಸಂಬಂಧಪಟ್ಟ ನಿಯಮಗಳನ್ನು ರೂಪಿಸಿಕೊಳ್ಳಲಾಯಿತು. 1880ರಲ್ಲಿ ಅಸ್ತಿತ್ವಕ್ಕೆ ಬಂದ ಬ್ರಿಟನ್ನಿನ ಅಮೆಚೂರ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ (ಎ.ಎ.ಎ.) ಹವ್ಯಾಸಿಗಳ ಹಂತದಲ್ಲಿ ನಡೆಯುವ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. 19ನೆಯ ಶತಮಾನದ ಕೊನೆಯ ಭಾಗದ ಹೊತ್ತಿಗೆ ಬೇರೆ ಬೇರೆ ರಾಷ್ಟ್ರಗಳ ತಂಡಗಳ ನಡುವೆ ಅನೇಕ ಅನಧಿಕೃತ ಕ್ರೀಡಾ ಸ್ಪಧರಗಳನ್ನು ಪ್ರಾರಂಭಿಸಲಾಯಿತು. 1912ರಲ್ಲಿ ಸ್ಟಾಕ್‍ಹೋಮ್‍ನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಗಳಿಂದೀಚೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ವ್ಯವಸ್ಥಿತವಾಗಿ ಅರಂಭವಾದವು. 1922 ರಿಂದೀಚೆಗೆ ಒಲಿಂಪಿಕ್ ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸತೊಡಗಿದರು. ಬ್ರಿಟನ್ನಿನ 1919ರಲ್ಲಿ ಸ್ಥಾಪನೆಗೊಂಡ ವಿಶ್ವವಿದ್ಯಾನಿಲಯಗಳ ದೈಹಿಕ ಚಟುವಟಿಕೆ ಸಂಘ ಸುಮಾರು ಹತ್ತು ವಿವಿಧ ಅಟಗಳಲ್ಲಿ ಅಂತರ ವಿಶ್ವವಿದ್ಯಾನಿಲಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ. [ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೈಹಿಕ ಚಟುವಟಿಕೆಗಳು]
  • ಅಥ್ಲೆಟಿಕ್ಸ್ ವರ್ಲ್ಡ್ ಚಾಂಪಿಯನ್ಷಿಪ್ಸ್ ಸ್ಪರ್ಧೆಗಳನ್ನು ಮೊದಲ 1983 ರಲ್ಲಿ ನಡೆಸಲಾಯಿತು. ಈ ಸ್ಪರ್ಧೆಗಳ / ಪಂದ್ಯಗಳ ಯೋಜನೆಯ ಕಲ್ಪನೆಯು ಮುಂಚೆಯ ಇತ್ತು. 1976 ರಲ್ಲಿ ಪೋರ್ಟೊ ರಿಕೊದಲ್ಲಿನ ಐಎಎಎಪ್ ಕೌನ್ಸಿಲ್ ಮೀಟಿಂಗ್ನಲ್ಲಿ ಒಲಂಪಿಕ್ ಕ್ರೀಡಾಕೂಟದಿಂದ ಪ್ರತ್ಯೇಕವಾಗಿ ಅಥ್ಲೆಟಿಕ್ಸ್ ವರ್ಲ್ಡ್ ಚಾಂಪಿಯನ್ಶಿಪ್ಸ್ ಅನ್ನು ನೆಡೆಸಲು ಅನುಮೋದಿಸಲಾಯಿತು. 1976 ವಿಶ್ವ ಚಾಂಪಿಯನ್ಶಿಪ್ ಕೇವಲ ಒಂದು ಪಂದ್ಯವನ್ನು ಹೊಂದಿತ್ತು – ಅದು ಪುರುಷರ 50 ಕಿಲೋಮೀಟರ್ ನಡಿಗೆ. 1976 ರ ಬೇಸಿಗೆ ಒಲಂಪಿಕ್ಸ್ಗಾಗಿ ಒಲಿಂಪಿಕ್ ಕಾರ್ಯಕ್ರಮದಿಂದ ಕೈಬಿಡಲಾಗಿತು. ಐಎಎಎಫ್ ತಮ್ಮದೇ ಆದ ಸ್ಪರ್ಧೆಯನ್ನು ಸ್ಥಾಪಿಸುವ ಮೂಲಕ ಪ್ರಕ್ರಿಯೆ ಆರಂಭವಾಯಿತು.. ನಾಲ್ಕು ವರ್ಷಗಳ ನಂತರ, 1980 ರ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಹೊಸದಾಗಿ ಅನುಮೋದಿಸಲ್ಪಟ್ಟ ಎರಡು ಮಹಿಳಾ ಘಟನೆಗಳು ಮಾತ್ರ ಸೇರಿದ್ದವು, (400 ಮೀಟರ್ ಹರ್ಡಲ್ಸ್ ಮತ್ತು 3000 ಮೀಟರ್ಗಳು), ಇವುಗಳಲ್ಲಿ 1980 ರ ಬೇಸಿಗೆ ಒಲಂಪಿಕ್ಸ್ ಕಾರ್ಯಕ್ರಮವನ್ನು ಒಳಗೊಂಡಿರಲಿಲ್ಲ. 2017, ಮಹಿಳಾ 50 ಕಿ.ಮೀ ನಡಿಗೆ ಸೇರಿಸಲಾಯಿತು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ಕೂಟಗಳು

ಬದಲಾಯಿಸಿ

ಅಥ್ಲೆಟಿಕ್ಸ್ನಲ್ಲಿ ವಿಶ್ವ ಚಾಂಪಿಯನ್ಷಿಪ್ಸ್ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ IAAF ವಿಶ್ವ ಚಾಂಪಿಯನ್ಶಿಪ್, ಇದು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (IAAF) ಆಯೋಜಿಸಿದ ದ್ವೈವಾರ್ಷಿಕ ಅಥ್ಲೆಟಿಕ್ಸ್ ಸ್ಪರ್ಧೆಯಾಗಿದೆ. ಮೂಲತಃ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಮೊದಲನೆಯದು 1983 ರಲ್ಲಿ, ಪ್ರಸ್ತುತ ಎರಡು ವರ್ಷಗಳ ಚಕ್ರವು ಆಥವಾ ಎರಡು ವರ್ಷಗಳಿಗೊಮ್ಮೆ ವಿಶ್ವ ಕೂಟ ನೆಡೆಸುವ ವ್ಯವಸ್ಥೆ 1991 ರಲ್ಲಿ ಪ್ರಾರಂಭವಾಯಿತು. []

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ೨೦೧೭

ಬದಲಾಯಿಸಿ
  • 2017 ರ ಐಎಎಫ್ ವಿಶ್ವ ಚಾಂಪಿಯನ್ಷಿಪ್ಸ್ ಐಎಎಫ್ ವಿಶ್ವ ಚಾಂಪಿಯನ್ಶಿಪ್ನ 16 ನೇ ಆವೃತ್ತಿಯಾಗಿದೆ; ಇದು ಲಂಡನ್ನಲ್ಲಿ 4 ರಿಂದ 13 ಆಗಸ್ಟ್ 2017 ರವರೆಗೆ ನಡೆಯಿತು. ಮೊನಾಕೊದಲ್ಲಿ 11 ನವೆಂಬರ್ 2011 ರಂದು ಲಂಡನ್ನ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಫ್ಎಫ್) ಇಂಟರ್ನ್ಯಾಷನಲ್ ಅಸೋಸಿಯೇಷನ್ ಚಾಂಪಿಯನ್ಶಿಪ್ಗಳನ್ನು ಅಧಿಕೃತವಾಗಿ ನೀಡಲಾಯಿತು. [[]]. ಲಂಡನ್ನಿನಲ್ಲಿ ನೆಡಯುವ ೨೦೫ ದೇಶಗಳು ಪಾಲಗೊಂಡಿವೆ. ೪೮ ಬಗೆಯ ಸ್ಪರ್ಧೆಗಳನ್ನು ನೆಡೆಸಲಾಯಿತು. ೨೦೩೬ ಸ್ಪರ್ಧಾ ಪಟುಗಳು ಭಾಗವಹಿಸ್ಸಿದ್ದರು. ೬,೬೦,೦೦೦ ಪ್ರೇಕ್ಷಕರಿಗೂ ಹೆಚ್ಚು ಜನ ನೋಡಿದರು.[]
 
The ಓಲಂಪಿಕ್ ಸ್ಟೇಡಿಯಮ್ ಲಂಡನ್ - 2012

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ

ಬದಲಾಯಿಸಿ
  • ಅಂಜು ಬಾಬಿ ಜಾರ್ಜ್,ಪ್ಯಾರಿಸ್ ನಲ್ಲಿ ನಡೆದ 2003 ರ ವರ್ಲ್ಡ್ ಚ್ಯಾಂಪಿಯನ್ಷಿಪ್ ಇನ್ ಅಥ್ಲೆಟಿಕ್ಸ್(ಅಥ್ಲೆಟಿಕ್ಸ್ ನಲ್ಲಿ ವಿಶ್ವ ಚ್ಯಾಂಪಿಯನ್ಷಿಪ್) ನ ಲಾಂಗ್ ಜಂಪ್(ಉದ್ದನೆಗೆತ) ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಸಾಧನೆಯ ಮೂಲಕ ಅವರು ವರ್ಲ್ಡ್ ಚ್ಯಾಂಪಿಯನ್ಷಿಪ್ ಅಥ್ಲೆಟಿಕ್ಸ್ ನಲ್ಲಿ 6.70 ಮಿ. ಅನ್ನು ಉದ್ದ ಜಿಗಿತದಲ್ಲಿ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ.

ಭಾಗವಹಿಸಿದ ಭಾರತದ ಕ್ರೀಡಾಪಟುಗಳ ಪಟ್ಟಿ

ಬದಲಾಯಿಸಿ
  • ೨೦೧೭ರ ಆಗಸ್ಟ್ ತಿಂಗಳಲ್ಲಿ ನಡೆದ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಥ್ಲೀಟ್ಗಳ ಪಟ್ಟಿ ಈ ಕೆಳಗಿನಂತಿದೆ.

ಪುರುಷರು:

  • 20 ಕಿ.ಮೀ ವಾಕ್ - ಇರ್ಫಾನ್ ಕೊಲೋತಮ್ ಥೋಡಿ, ದೇವೇಂದರ್ ಸಿಂಗ್ ಮತ್ತು ಗಣಪತಿ ಕೃಷ್ಣನ್
  • 400 ಮೀ ಮತ್ತು 4x400 ಮೀ ರಿಲೇ - ಮುಹಮ್ಮದ್ ಅನಸ್ ಯಾಹಿಯ
  • 5000 ಮೀ ಮತ್ತು 10000 ಮೀ - ಲಕ್ಷ್ಮಣನ್ ಗೋವಿಂದ್ನಾನ್
  • 110 ಮೀ ಹರ್ಡಲ್ಸ್ - ಸಿದ್ಧಾಂತ ಥಿಂಗಲಾಯ
  • ಮ್ಯಾರಥಾನ್ - ಗೋಪಿ ಥೋನಕಲ್
  • ಜಾವೆಲಿನ್ ಥ್ರೋ - ನೀರಾಜ್ ಚೋಪ್ರಾ ಮತ್ತು ದಾವೀಂದರ್ ಸಿಂಗ್ ಕಾಂಗ್
  • 4x400m ರಿಲೇ - ಅರೋಕಿಯ ರಾಜೀವ್, ಅಮೋಜ್ ಜಾಕೋಬ್, ಕುನು ಮೊಹಮ್ಮದ್, ಮೋಹನ್ ಕುಮಾರ್ ರಾಜ, ಸಚಿನ್ ರಾಬಿ
  • ಮಹಿಳೆಯರು
  • 20 ಕಿ.ಮೀ ನಡಿಗೆ - ಖುಷ್ಬೀರ್ ಕೌರ್
  • 400 ಮೀ ಮತ್ತು 4x400m ರಿಲೇ - ನಿರ್ಮಲಾ ಶಿಯೊರನ್
  • ಹೆಪ್ಟಾಥ್ಲಾನ್ - ಸ್ವಪ್ನ ಬರ್ಮನ್
  • ಮ್ಯಾರಥಾನ್ - ಮೊನಿಕಾ ಮೋತಿರಾಮ್ ಅಥೇರ್
  • ಜಾವೆಲಿನ್ ಥ್ರೊ - ಆನು ರಾಣಿ
  • 4x400m ರಿಲೇ - ಪೂವಮ್ಮ ರಾಜು ಮಾಚೆಟ್ಟಿರಾ, ಜಿಸ್ನಾ ಮ್ಯಾಥ್ಯೂ, ಆನಿಲ್ಡಾ ಥಾಮಸ್, ಜುನಾಮುರು, ಅನು ರಾಘವನ್
  • ತಂಡದ ಅಧಿಕಾರಿಗಳು & ತರಬೇತುದಾರರು:,ವಿಶಾಲ್ ಕುಮಾರ್ ದೇವ್, ಐಎಎಸ್, (ತಂಡದ ನಾಯಕ),ಟೋನಿ ಡೇನಿಯಲ್ (ತಂಡದ ವ್ಯವಸ್ಥಾಪಕ), ರಾಧಾ ಕೃಷ್ಣನ್ ನಾಯರ್ (ಉಪ ಮುಖ್ಯ ತರಬೇತುದಾರ), ಗಲಿನಾ ಬುಖರಿನಾ (ತರಬೇತುದಾರ), ಪಿ.ಟಿ ಉಷಾ (ತರಬೇತುದಾರ) ಸುರೇಂದ್ರ ಸಿಂಗ್ (ತರಬೇತುದಾರ),ಅಲೆಕ್ಸಾಂಡರ್ ಆರ್ಸ್ಟಿಬಾಶೇವ್ (ಕೋಚ್) ರಾಜ್ ಮೋಹನ್ (ತರಬೇತುದಾರ), ಬಹದ್ದೂರ್ ಸಿಂಗ್ ಚೌಹಾಣ್ (ತರಬೇತುದಾರ), ಅಂಜು ಬಾಬಿ ಜಾರ್ಜ್ (ಕೋಚ್ / ವೀಕ್ಷಕಿ), ಅರುಣ್ ಮೆಂಡಿರಾಟ್ಟಾ (ತಂಡದ ವೈದ್ಯರು), ಪವನ್ ಕುಮಾರ್ (ಪುರುಷ ಮಸಾಜು), ಕಿಯಾನಾ ಲಿಡಿಯಾ (ಸ್ತ್ರೀ ಮಸಾಜು).[]

ಸಾಧನೆಗಳು

ಬದಲಾಯಿಸಿ
ಲಿಂಗ ಅಥ್ಲೆಟ್ ಜನ್ಮ ದಿನಾಂಕ ಡಿಸ್ಕ್ರಿಪ್ಲೈನ್ ರೌಂಡ್ ಪಿಓಎಸ್ ಮಾರ್ಕ್
W ಸ್ವಪ್ನಾ ಬರ್ಮ್ಯನ್ 29/10/1996 100 ಮೀಟರ್ ಹರ್ಡಲ್ಸ್ ಹೆಪ್ಟಾಥ್ಲಾನ್ 3 14.14
M ಮುಹಮ್ಮದ್ ಅನಸ್ 17/09/1994 400 ಮೀಟರ್ ಹೀ ಟಿಸ್ 4 45.98
W ಸ್ವಪ್ನಾ ಬರ್ಮ್ಯನ್ 29/10/1996 ಎತ್ತರದ ಜಿಗಿತ ಹೆಪ್ಟಾಥ್ಲಾನ್ 15 1.71
W ದ್ಯುಟಿ ಚಾಂಡ್ 3/2/1996 100 ಮೀಟರ್‌ಗಳು ಹೀ ಟಿಸ್ 6 12.07
W ಸ್ವಪ್ನಾ ಬರ್ಮ್ಯನ್ 29/10/1996 ಗುಂಡು ಎಸೆತ ಹೆಪ್ಟಾಥ್ಲಾನ್ 14 10.81
W ಸ್ವಪ್ನಾ ಬರ್ಮ್ಯನ್ 29/10/1996 200 ಮೀಟರ್ ಹೆಪ್ಟಾಥ್ಲಾನ್ 6 26.45

೬-೮-೨೦೧೭

ಬದಲಾಯಿಸಿ
ಲಿಂಗ ಅಥ್ಲೆಟ್ DOB ಡಿಸ್ಕ್ರಿಪ್ಲಿನ್ ROUND/ಸುತ್ತು POS/ಸ್ಪರ್ಧೆ MARK/ಅಮಕ
W ಸ್ವಪ್ನಾ ಬಾರ್ಮ್ಯಾನ್ 29/10/1996 ಲಾಂಗ್ ಜಂಪ್ ಹೆಪ್ಟಾಥ್ಲಾನ್ 14 5.53ಮೀ.
M ತೋನಕಲ್ ಗೋಪಿ 24/05/1988 ಮ್ಯಾರಥಾನ್ ಅಂತಿಮ 28 2:17:13 ಗಂ.
W ಸ್ವಪ್ನಾ ಬಾರ್ಮ್ಯಾನ್ 29/10/1996 ಜಾವೆಲಿನ್ ಥ್ರೋ ಹೆಪ್ಟಾಥ್ಲಾನ್ 4 43.49ಮೀ.
W ನಿರ್ಮಲಾ 15/07/1995 400 ಮೀಟರ್ ಹೀಟ್ಸ್ 4 52.01 q
M ಸಿದ್ಧಾಂತ್ ತಿಂಗಲಾ 1/3/1991 110 ಮೀಟರ್ ಹರ್ಡಲ್ಸ್ ಹೀಟ್ಸ್ 7 13.64ನಿ.
W ಮೋನಿಕಾ ಅಥೆರ್ 26/03/1992 ಮ್ಯಾರಥಾನ್ ಅಂತಿಮ 64 2:49:54 ಗಂ.
W ಆನು ರಾಣಿ 28/08/1992 ಜಾವೆಲಿನ್ ಥ್ರೋ ಅರ್ಹತೆ 10 59.93ಮೀ.
W ಸ್ವಪ್ನಾ ಬಾರ್ಮ್ಯಾನ್ 29/10/1996 800 ಮೀಟರ್ ಹೆಪ್ಟಾಥ್ಲಾನ್ 7 02:20.2 ನಿ.

೭/೧೩-೮-೨೦೧೭

ಬದಲಾಯಿಸಿ
ಪು /ಹೆ ಸ್ಪರ್ದಾಳು ಜನ್ಮ ದಿನಾಂಕ ಸ್ಪರ್ಧೆ ಸುತ್ತು ಸ್ಥಾನ ಸಾಧನೆ:ಸಮಯ/ದೂರ
ಹೆ 7-8- 2015 ನಿರ್ಮಲ 15/07/1995 400 ಮೀಟರ್ಗಳು ಸೆಮಿ ಫೈನಲ್ 7 53.07
ಪು 9-8-2017 ಎಂ ಲಕ್ಷ್ಮಣ್ ಗೋವಿಂದನ್ 05/06/1990 5000 ಮೀಟರ್ ಹೀಟ್ಸ್ 15 13: 35.69
ಪು 10-8-2017 ನೀರಾಜ್ ಚೋಪ್ರಾ 24/12/1997 ಜಾವೆಲಿನ್ ಥ್ರೋ ಅರ್ಹತೆ 7 82.26
ಪು 10-8-2017 ದಾವೀಂದರ್ ಸಿಂಘ್ 18/12/1988 ಜಾವೆಲಿನ್ ಥ್ರೋ ಅರ್ಹತೆ 5 84.22
ಪು 10-8-2017 ದಾವೀಂದರ್ ಸಿಂಘ್ 18/12/1988 ಜಾವೆಲಿನ್ ಥ್ರೋ ಅಂತಿಮ 12 80.02
ಹೆ 13-8-2017 ಖುಷ್ಬಿರ್ ಕೂರ್ 9-7-1993 20 ಕಿಲೋಮೀಟರ್ ರೇಸ್ ವಾಕ್ ಅಂತಿಮ 42 1:36:41ಗಂ. -ನಿ.- ಸೆ.
ಪು 13-8-2017 ಗಣಪತಿ ಕೃಷ್ಣನ್ 29-6-89 "" "" 54 1:28:32
ಪು 13-8-2017 ಇರ್ಫಾನ್ ಕೊಲೊಥಮ್ ಥೋಡಿ 8-2-1990 "" "" 23 1:21:40
ಪು 13-8-2017 ಸಿಂಗ್ ದೆವೆಂಡರ್ 5-12-83 "" "" 50 1:25:47

[]

ಪದಕ ವಿಜೇತರು - ಮೊದಲ ಹತ್ತು ದೇಶಗಳು

ಬದಲಾಯಿಸಿ
ಸ್ಥಾನ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
1 1 ಯುನೈಟೆಡ್ ಸ್ಟೇಟ್ಸ್ (ಅಮೇರಿಕಾ) 10 11 9 30
2 2 ಕೀನ್ಯಾ (ಕೆಎನ್) 5 2 4 11
3 3 ದಕ್ಷಿಣ ಆಫ್ರಿಕಾ (ಆರ್ಎಸ್ಎ) 3 1 2 6
4 4 ಫ್ರಾನ್ಸ್ (ಎಫ್ಆರ್ಎ) 3 0 2 5
5 5 ಚೀನಾ (CHN) 2 3 2 7
6 6 ಗ್ರೇಟ್ ಬ್ರಿಟನ್ & N.I. (ಜಿಬಿಆರ್) 2 3 1 6
7 7 ಇಥಿಯೋಪಿಯಾ (ಈಥ್) 2 3 0 5
8 8 ಪೋಲೆಂಡ್ (ಪೋಲ್) 2 2 4 8
9 9 ಜರ್ಮನಿ (ಜಿಇಆರ್) 1 2 2 5
10 10 ಜೆಕ್ ಗಣರಾಜ್ಯ (ಸಿಜೆಇ) 1 1 1 3

[]

ಕೂಟಕ್ಕೆ ನೋವಿನ ವಿದಾಯ

ಬದಲಾಯಿಸಿ

ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ, ವಿಶ್ವದಾಖಲೆಗಳನ್ನು ಬರೆದಿರುವ 30 ವರ್ಷದ ಉಸೇನ್ ಬೋಲ್ಟ್‌, ಆಗಸ್ಟ್ 20 ಭಾನುವಾರ ಬೆಳಗಿನ ಜಾವ ನಡೆದ ಪುರುಷರ 4X100 ಮೀಟರ್ಸ್‌ ಸ್ಪರ್ಧೆಯ ಕೊನೆಯ ಲ್ಯಾಪ್‌ನಲ್ಲಿ ಓಡುವಾಗ ಸ್ನಾಯುಸೆಳೆತದಿಂದಾಗಿ ಬೋಲ್ಟ್‌ ಕುಸಿದು ಬಿದ್ದರು. ಗಾಯದ ನೋವಿನ ಜೊತೆಗೆ ಅಂತಿಮ ಓಟದಲ್ಲಿ ಗುರಿ ಮುಟ್ಟಲಿಲ್ಲವಲ್ಲವೆಂಬ ಯಾತನೆ ಅವರ ಮುಖದಲ್ಲಿ ಮನೆಮಾಡಿತ್ತು. ಅದೇ ಕ್ರೀಡಾಂಗಣದಲ್ಲಿ ನಡೆದಿದ್ದ 2012ರ ಒಲಿಂಪಿಕ್ಸ್‌ನಲ್ಲಿ ಬೋಲ್ಟ್‌ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು. ಅದೇ ಅಂಗಳದಲ್ಲಿ ಅವರು ನೆಲಕಚ್ಚಿ ಹತಾಶರಾದಾಗ ಅಭಿಮಾನಿಗಳ ಕಣ್ಣುಗಳೂ ತೇವಗೊಂಡವು. ತಂಡ ವಿಭಾಗದಲ್ಲಿ ಇದು ಅವರ ಕೊನೆಯ ರಿಲೆ ಓಟವಾಗಿತ್ತು. ಆ ಸ್ಪರ್ಧೆಯ ಮೊದಲೆರಡು ಲ್ಯಾಪ್‌ಗಳಲ್ಲಿ ಜೂಲಿಯನ್ ಫೋರ್ಟ್ ಮತ್ತು ಒಮರ್ ಮೆಕ್ಲಾಯ್ಡ್‌ ಓಡಿದ್ದರು. ಮೂರನೇ ಲ್ಯಾಪ್‌ನಲ್ಲಿ ಓಡಿದ ಜಮೈಕಾದ ಯೋಹಾನ್ ಬ್ಲೇಕ್ ಅವರು ಯಶಸ್ವಿಯಾಗಿ ಗುರಿ ಮುಟ್ಟಿದರು. ಅವರಿಂದ ಬೇಟನ್ ಪಡೆದ ಬೋಲ್ಟ್‌ ದೊಡ್ಡ ಸ್ಟ್ರೈಡ್‌ಗಳೊಂದಿಗೆ ಓಟ ಆರಂಭಿಸಿದರು. ಈ ಹಂತದಲ್ಲಿ ಬ್ರಿಟನ್‌ನ ಮೈಕೆಲ್ ಬ್ಲೇಕ್ ಎಲ್ಲರಿಗಿಂತ ಮುಂದಿದ್ದರು. ಬೋಲ್ಟ್ ಬ್ರಿಟನ್‌ ಓಟಗಾರನಿಂದ ಕೇವಲ ಮೂರು ಮೀಟರಿನಷ್ಟು ಹಿಂದಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಚಪ್ಪಾಳೆ, ಕೇಕೆ, ವಿಜಯಘೋಷಗಳು ಮೊಳಗಿದವು. ಆದರೆ ಕೆಲವೇ ಕ್ಷಣಗಳಲ್ಲಿ ಎಡತೊಡೆಯ ಸ್ನಾಯುವಿನಲ್ಲಿ ನೋವು ಅನುಭವಿಸಿದ ಬೋಲ್ಟ್‌ ವೇಗ ಕುಂಠಿತವಾಯಿತು, ಓಡುವ ಪ್ರಯತ್ನ ಮಾಡಿದರೂ, ಆಗದೆ ಒಂದೆರಡು ಹೆಜ್ಜೆ ಓಡಿದ ಅವರು ಕುಸಿದರು. ಜಮೈಕಾ ತಂಡದ ಸಹ ಓಟಗಾರರು ಟ್ರ್ಯಾಕ್‌ಗೆ ಧಾವಿಸಿ ಬೋಲ್ಟ್ ಅವರಿಗೆ ಆಸರೆ ನೀಡಿ ಎತ್ತಿನಿಲ್ಲಿಸಿದರು. ತಮ್ಮ ಸ್ಫೂರ್ತಿಯ ತಾರೆಯನ್ನು ತಬ್ಬಿಕೊಂಡು ಸಂತೈಸಿದರು.[]

ಉಲ್ಲೇಖ

ಬದಲಾಯಿಸಿ
  1. Oxford Dictionary
  2. http://www.etymonline.com/index.php?allowed_in_frame=0&search=athletics
  3. IAAF World Championships in Athletics. GBR Athletics. Retrieved on 2013-09-08
  4. http://www.telegraph.co.uk/athletics/2017/07/29/london-2017-will-smash-records-ticket-sales-tobecome-biggest/
  5. list of Indian athletes
  6. "INDIAIAAF WORLD CHAMPIONSHIPS LONDON 2017". Archived from the original on 2017-08-01. Retrieved 2017-08-23.
  7. "ಆರ್ಕೈವ್ ನಕಲು". Archived from the original on 2019-11-11. Retrieved 2017-08-23.
  8. "ವಿದಾಯಕ್ಕೆ ಗಾಯದ ನೋವು;ಪಿಟಿಐ;14 Aug, 2017". Archived from the original on 2017-08-14. Retrieved 2017-08-23.