ಅತ್ತಿಮರ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
F. racemosa
Binomial name
Ficus racemosa
Synonyms

Ficus glomerata Roxb.

ಅತ್ತಿಮರಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಹಳ್ಳಗಳ ದಂಡೆಯ ಮೇಲೆ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಹಳ್ಳಿಗಳ ಸುತ್ತಮುತ್ತಲೂ ಕಾಣಬಹುದು. ದಪ್ಪ ಟೊಂಗೆ ಮತ್ತು ಬೊಡ್ಡೆಗಳ ಮೇಲೆ ಮಾರ್ಚ್, ಜುಲೈ ಅವಧಿಯಲ್ಲಿ ನೂರಾರು ಹಣ್ಣುಗಳಾಗುತ್ತವೆ.ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ತಿನ್ನಿಸುತ್ತಾರೆ. ಹರವಾಗಿ ಬೆಳೆಯುವುದರಿಂದ ಇದು ನೆರಳಿನ ಗಿಡ. ಇದರ ಕಟ್ಟಿಗೆಯಿಂದ ಪೆಟ್ಟಿಗೆ, ಹಲಗೆ, ಚಕ್ಕಡಿಗಳ ಹಲ್ಲು ಇತ್ಯಾದಿ ಮರಮುಟ್ಟುಗಳನ್ನು ತಯಾರಿಸುತ್ತಾರೆ. ಅರಗಿನ ಹುಳುವನ್ನು ಕೂಡ ಈ ಮರದ ಎಲೆಗಳ ಮೇಲೆ ಸಾಕುವರು.

ವರ್ಣನೆ ಬದಲಾಯಿಸಿ

10-15 ಮೀಟರ್ ಎತ್ತರ ಬೆಳೆಯುವ ಸದಾ ಹಸಿರು ವೃಕ್ಷ, ಎಲೆ, ಕಾಯಿ, ಫಲ, ತೊಗಟೆಯಿಂದ ಹಳದೀ ವರ್ಣದ, ಅಂಟಾದ ಹಾಲು ಬರುವುದು, ಕಾಯಿ ಹಸಿರಾಗಿದ್ದು, ಗುಂಡಾಗಿರುವುದು. ಹಣ್ಣಾದಾಗ ಕೆಂಪು ಬಣ್ಣವನ್ನು ಹೊಂದುವುದು. ಹಣ್ಣು ಮೃದುವಾಗಿರುವುದು ಮತ್ತು ಪರಿಮಳವಿರುವುದು. ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವುವು. ಇರುವೆಗಳ ಪರಾಗಸ್ಪರ್ಶದಲ್ಲಿ ನೆರವಾಗುವುವು. ಒಳಗಡೆ ಸಣ್ಣ ಬೀಜಗಳು ನೂರಾರು ಇರುವುವು. ರೆಂಬೆಗಳ ತುಂಬಾ ಮತ್ತು ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವುದು. ಬಹು ಪರಿಚಿತ ವೃಕ್ಷ ಮತ್ತು ಸಾಲು ಮರಗಳಾಗಿ ಮತ್ತು ಊರ ಗುಂಡು ತೋಪಿನಲ್ಲಿ ಬೆಳೆಸುತ್ತಾರೆ. ಕೋತಿಗಳು, ಅಳಿಲು, ಗಿಣಿ, ಮತ್ತು ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಮತ್ತು ಪುಷ್ಟಿದಾಯಕವೂ ಹೌದು.

ಆಸ್ಟ್ರೇಲಿಯ, ಮಲೇಷ್ಯಾ, ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುವ ಈ ಗಿಡವು ಒಣ-ಉಷ್ಣ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಳೆಗಾಲದ ಆರಂಭ ಗಿಡ ನೆಡಲು ಸೂಕ್ತ ಕಾಲ. ಸಸಿ ಬಲಿಯುವ ತನಕ ಹೆಚ್ಚಿನ ನೀರು ಅಗತ್ಯ. ಒಂದು ವರ್ಷದಲ್ಲಿ ಕಾಯಿ ಬಿಡಲು ಶುರು ಮಾಡುವ ಈ ಮರಗಳು ೩೫ ವರ್ಷಗಳ ಕಾಲ್ ಬಾಳಿಕೆ ಹೊಂದಿರುತ್ತವೆ. ಹಣ್ಣುಗಳಲ್ಲಿ ನಾಲ್ಕು ವಿಧಗಳಿದ್ದು, ಕೊಯ್ಲಿನ್ ಸೀಸನ್ ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗುತ್ತದೆ. ಹೆಚ್ಚು ಮಾಗಿದ ಹಣ್ಣುಗಳು ಬಿರಿಯುವುದು ಉಂಟು. ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಕಾಂಡಕ್ಕೆ ಅಂಟಿಕೊಂಡು ಗೊಂಚಲು ಕಾಯಿಗಳನ್ನು ಬಿಡುವುದು ಇದರ ವೈಶಿಷ್ಟ್ಯ. ಜೆಲ್ಲಿಯಂತಹ ಮಾಂಸಲ ತಿರುಳುಳ್ಳ ಸಿಹಿ ಸಹಿತ ಸ್ವಾದಿಷ್ಟ ಅಂಜೂರ ಹಣ್ಣುಗಳು ಕೇಂದ್ರ ಭಾಗದಲ್ಲಿ ಬೀಜ ಪುಂಜಗಳಿದ್ದು, ಅವುಗಳನ್ನು ಸಾಮಾನ್ಯವಾಗಿ ಕಣಜೀರಿಗೆ ಹುಳಗಳ ಭಾದಿಸುತ್ತವೆ. ಆದ್ದರಿಂದ ಹಣ್ಣುಗಳನ್ನು ೨-೩ ಹೋಳುಗಳಾಗಿಸಿ ಕಡು ಬಿಸಲಲ್ಲಿ ಸುಮಾರು ಒಂದು ಗಂಟೆ ಒಣಗಿಸಿ ಬಳಿಕ ತಿನ್ನುವುದು ಒಳ್ಳಯದು. ಪ್ರತಿಶತ ೯೦ ರಷ್ಟು ಔದುಂಬರದ ಹಣ್ಣುಗಳನ್ನು ಒಣಗಿಸಿಯೇ ಡ್ರ್ಯೆಫ್ರುಟ್ ಅಗಿ ಉಪಯೋಗಿಸುತ್ತಾರೆ.

ಸರಳ ಚಿಕಿತ್ಸೆಗಳು ಬದಲಾಯಿಸಿ

ಉಷ್ಣ ಗುಣ ಹೊಂದಿರುವ ಅತ್ತಿ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಜೇನುತುಪ್ಪದೊಡನೆ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.

ಬಟ್ಟಿ ಬೀಳುವುದು ಬದಲಾಯಿಸಿ

ಹೊಟ್ಟೆಯಲ್ಲಿ ಗಡಗಡ ಶಬ್ದ, ನೋವು ಮತ್ತು ನೀರಿನಂತೆ ಬೇದಿಯಾಗುತ್ತಿದ್ದರೆ ಈ ಉಪಚಾರದಿಂದ ಶಮನವಾಗುವುದು. ಅತ್ತಿಮರದ ಬುಡದ ಹಾಲನ್ನು ಹೊಕ್ಕಳಿನ ಸುತ್ತ ಲೇಪಿಸುವುದು ಮತ್ತು ಗುಂಡಾದ ಮಡಿಕೆಯ ಚೂರನ್ನು ಹೊಕ್ಕಳಿನ ಮೇಲೆ ಇಡುವುದು. ಅಂಟಾಗಿರುವ ಹಾಲಿನಲ್ಲಿ ಈ ಬಿಲ್ಲೆ ಚೆನ್ನಾಗಿ ಅಂಟಿಕೊಳ್ಳುವುದು. ಇದರ ಸುತ್ತ ಬುಡದಲ್ಲಿರುವ ನಯವಾದ ಮಣ್ಣನ್ನು ಹಾಕುವುದು ಮತ್ತು ಬಟ್ಟೆ ಕಟ್ಟುವುದು.

ಬಾಯಾರಿಕೆಯಿಂದ ಕೂಡಿದ ಬಹುಮೂತ್ರಕ್ಕೆ ಬದಲಾಯಿಸಿ

ಚೆನ್ನಾಗಿ ಪಕ್ವವಾದ, ಹುಳುಕಿಲ್ಲದ, ಒಂದು ಹಿಡಿ ಅತ್ತಿ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ, ನಯವಾದ ವಸ್ತ್ರಗಾಳಿತ ಚೂರ್ಣ ಮಾಡುವುದು. 1\2 ಟೀ ಚಮಚ ಚೂರ್ಣಕ್ಕೆ ಸ್ವಲ್ಪ ಜೇನು ಬೆರೆಸಿ ನೆಕ್ಕುವುದು. ದಿವಸಕ್ಕೆ ಎರಡು ವೇಳೆ ಸೇವಿಸುವುದು.

ಬೇಧಿಯಲ್ಲಿ ಬದಲಾಯಿಸಿ

ಅತ್ತಿಯ ಹಾಲನ್ನು ಸಕ್ಕರೆ ಪುಡಿ ಸಮೇತ ಸೇವಿಸುವುದು.

ಗಟ್ಟಿಯಾದ ಬಾವು ಬದಲಾಯಿಸಿ

ಅತ್ತಿ ಎಲೆಗಳ ರಸವನ್ನು ಹಿಂಡಿ, ಜವೆ ಗೋದಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ ಗಟ್ಟಿಯಾದ ಬಾವುಗಳಿಗೆ ಲೇಪಿಸಿ, ಬಟ್ಟೆ ವಾಸಿಯಾಗುವುದು. ಕೀವು ಸೋರುತ್ತಿರುವ ಭಾಗಗಳಿಗೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುವುವು.

ಗಂಡಮಾಲೆ, ಕೆನ್ನೆ ಬೀಗು ಬದಲಾಯಿಸಿ

ಅತ್ತಿಮರದ ಕಾಂಡಕ್ಕೆ ಗಾಯ ಮಾಡುವುದು ಮತ್ತು ಸುರಿಯುವ ಹಾಲನ್ನು ಮಡಕೆ ಚೂರಿನಲ್ಲಿ ಶೇಖರಿಸಿ, ಕೆನ್ನೆ ಬೀಗಿರುವ ಕಡೆ ಲೇಪಿಸುವುದು ಅಥವಾ ಅತ್ತಿ ಮರದ ಬೇರನ್ನು ನೀರಿನಲ್ಲಿ ತೇದು ಸ್ವಲ್ಪ ಹಿಂಗು ಮತ್ತು ಹರಳೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಲೇಪಿಸುವುದು.

ಮೊಲೆಯ ಮೇಲಿನ ಬಾವು ಮತ್ತು ಗಂಟು ಬದಲಾಯಿಸಿ

ಒಂದು ಹಿಡಿ ಅತ್ತಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ, ಬಟ್ಟೆಯಲ್ಲಿ ಸೋಸಿ, ಒಂದು ಟೀ ಚಮಚ ರಸವನ್ನು ಶೇಖರಿಸುವುದು, ಸ್ವಲ್ಪ ಜವೆಗೋದಿಯ ಹಿಟ್ಟಿಗೆ ಈ ರಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಮೊಲೆಯ ಬಾವಿಗೆ ಕಟ್ಟುವುದು.

ಸಕ್ಕರೆ ಕಾಯಿಲೆಯಲ್ಲಿ ಬದಲಾಯಿಸಿ

ಅತ್ತಿ ಮರದ ತೊಗಟೆಯನ್ನು ನೆರಳಲ್ಲಿ ಚೆನ್ನಾಗಿ ಒಣಗಿಸಿ ವಸ್ತ್ರಗಾಳಿತ ಚೂರ್ಣ ಮಾಡುವುದು, ಎರಡು ಟೀ ಚಮಚ ಪುಡಿಯನ್ನು ಮರಳುವ ನೀರಿಗೆ ಹಾಕಿ, ಕಷಾಯ ಮಾಡುವುದು. ಆರಿದ ಕಷಾಯವನ್ನು ವೇಳೆಗೆ ಎರಡು ಟೀ ಚಮಚದಂತೆ ಬೆಳಿಗ್ಗೆ ಸಾಯಂಕಾಲ ಸೇವಿಸುವುದು.

"https://kn.wikipedia.org/w/index.php?title=ಅತ್ತಿಮರ&oldid=865980" ಇಂದ ಪಡೆಯಲ್ಪಟ್ಟಿದೆ