ಅತಿಥಿಗೃಹವು ಒಂದು ಬಗೆಯ ವಸತಿ. ವಿಶ್ವದ ಕೆಲವು ಭಾಗಗಳಲ್ಲಿ (ಉದಾಹರಣೆಗೆ ಕೆರಿಬಿಯನ್), ಅತಿಥಿಗೃಹಗಳು ಒಂದು ಬಗೆಯ ಅಗ್ಗದ ಹೋಟೆಲ್‍ನಂತಹ ವಸತಿಯಾಗಿವೆ. ಇನ್ನೂ ಬೇರೆ ಭಾಗಗಳಲ್ಲಿ, ಇದು ವಸತಿಯ ಪ್ರತ್ಯೇಕ ಬಳಕೆಗಾಗಿ ಪರಿವರ್ತಿಸಲಾದ ಖಾಸಗಿ ಮನೆಯಾಗಿರುತ್ತದೆ. ಯಜಮಾನನು ಸಾಮಾನ್ಯವಾಗಿ ಸ್ವತ್ತಿನೊಳಗಿನ ಸಂಪೂರ್ಣವಾಗಿ ಪ್ರತ್ಯೇಕ ಪ್ರದೇಶದಲ್ಲಿ ವಾಸಿಸುತ್ತಾನೆ ಮತ್ತು ಅತಿಥಿಗೃಹವು ಒಂದು ರೂಪದ ವಸತಿ ವ್ಯವಹಾರವಾಗಿ ಕಾರ್ಯನಿರ್ವಹಿಸಬಹುದು. ಈ ಬಗೆಯ ವಸತಿಯು ಕೆಲವು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ[] ಉದಾಹರಣೆಗೆ: ವೈಯಕ್ತಿಕವಾಗಿ ಗಮನಕೊಡುವಿಕೆ, ಆರೋಗ್ಯಕರ ಮತ್ತು ಮನೆಯಲ್ಲಿ ತಯಾರಿಸಿದ ಆಹಾರ, ನಿಶ್ಶಬ್ದತೆ, ಅಗ್ಗವಾಗಿರುವಿಕೆ, ಆಧುನಿಕ ವಿನ್ಯಾಸ.

ವಿಶ್ವದ ಕೆಲವು ಭಾಗಗಳಲ್ಲಿ, ಉಳಿದುಕೊಳ್ಳಲು ಸ್ಥಳೀಯ ಸಂಬಂಧಿಕರಿಲ್ಲದ ಭೇಟಿಗಾರರಿಗೆ ಅತಿಥಿಗೃಹಗಳು ಲಭ್ಯವಿರುವ ಏಕೈಕ ಪ್ರಕಾರದ ವಸತಿಯಾಗಿರುತ್ತವೆ. ಅತಿಥಿಗೃಹವನ್ನು ಹೋಟೆಲ್‍ನಿಂದ ವ್ಯತ್ಯಾಸಮಾಡುವ ಲಕ್ಷಣಗಳ ಪೈಕಿ ಒಂದು ಲಕ್ಷಣವೆಂದರೆ ಪೂರ್ಣಕಾಲಿಕ ಸಿಬ್ಬಂದಿ ಇಲ್ಲದಿರುವುದು.

ಉಲ್ಲೇಖಗಳು

ಬದಲಾಯಿಸಿ
  1. Top Benefits of Guest Houses (2015). "6 Reasons Why To Stay In a Guest House". Retrieved 2015-04-06.