ಅಣಬೆಯ ಬಗ್ಗೆ

ಬದಲಾಯಿಸಿ

ಅಣಬೆ ಎಂದರೆ ಸಣ್ಣ ಗಿಡದಂತಿರುವ ಸಸ್ಯ ಜೀವಿ ಅಂತ ಕರೆಯ ಬಹುದು. ಇದನ್ನು ತುಳುವಿನಲ್ಲಿ ಲಾಂಬು ಅಂತ ಕರೆಯುತ್ತಾರೆ.ಇದರಿಂದ ಅನೇಕ ರೀತಿಯ ಖಾದ್ಯ ಗಳನ್ನು ಮಾಡುತ್ತಾರೆ. ಇದರಲ್ಲಿ ಸುಮಾರು ೧೨೫ ಜಾತಿಗಳು ಮತ್ತು ೪೦೦೦ ಪ್ರಭೇಧ ಗಳಿವೆ. ಇದು ತುಂಬಾ ನೀರಿನ ಅಂಶಗಳು ಇರುವಲ್ಲಿ ಬೆಳೆಯುತ್ತವೆ. ಆಟಿ ತಿಂಗಳಲ್ಲಿ ತುಂಬಾ ಕಡೆ ಹಳ್ಳಿಗಳಲ್ಲಿ ಬೇರೆ ಬೇರೆ ರೀತಿಯ ನೈಸರ್ಗಿಕ ವಾಗಿ ಬೆಳೆಯುವ ಅಣಬೆ ಗಳು ಸಿಗುತ್ತವೆ. ಹಾಗೆ ಇದನ್ನು ನಾಯಿ ಕೊಡೆ ಅಂತಲೂ ಹೇಳುತ್ತಾರೆ. ಈಗ ಪೇಟೆ ಗಳಲ್ಲೂ ಸಿಗುತ್ತವೆ.ಒಂದೇ ದಿನದಲ್ಲಿ ಹುಟ್ಟಿ ಸಾಯುವ ' ಏಕ್ ದಿನ್ ಕಾ ಸುಲ್ತಾನ್ 'ಎಂದು ಕರೆಸಿ ಕೊಳ್ಳುವ ಅಣಬೆ ಅತುತ್ತಮ ಪೌಷ್ಟಿ ಕಾಂಶಗಳನ್ನೊಳಗೊಂಡ ನೈಸರ್ಗಿಕ ಆಹಾರ.ಅಣಬೆ (ಮಶ್ರೂಮ್ )ನಿಂದ ವಿವಿಧ ರೀತಿಯ ಅಡುಗೆ ತಯಾರಿಸಬಹುದು. ಇದರಲ್ಲಿ ವಿಟಾಮಿನ್ ಡಿ ಹೊಂದಿದೆ.

ಅಣಬೆ ಮತ್ತು ಹಲಸಿನ ಬೀಜ ಸಾರು

ಬದಲಾಯಿಸಿ

ನೈಸರ್ಗಿಕ ವಾಗಿ ಸಿಕ್ಕಿದ ಅಣಬೆ,ಹಲಸಿನ ಹಲಸಿನ ಬೀಜ,ತುರಿದ ತೆಂಗಿನಕಾಯಿ,ಕೆಂಪು ಒನಮೆಣಸು,ಜೀರಿಗೆ,ಸಾಸಿವೆ,ಮೆತ್ತೆ,ಹುಳಿ,ನೀರುಳ್ಳಿ,ಬೆಳ್ಳುಳ್ಳಿ,ಎಣ್ಣೆ,ಅರಶಿನ ಹುಡಿ ಇದನ್ನೆಲ್ಲಾ ಹಾಕಿ ಮಾಡುವುದು.

ಮಸಾಲೆ ತಯಾರಿಸುವ ವಿಧಾನ

ಬದಲಾಯಿಸಿ

ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಒನಮೆಣಸು, ಕೊತ್ತಂಬರಿ, ಜೀರಿಗೆ,ಮೆಂತೆ ಹಾಕಿ ಹುರಿಬೇಕು.ಅದನ್ನು ತಣ್ಣಗಾದ ನಂತರ, ತೆಂಗಿನತೆಂಗಿನಕಾಯಿ ಮರ ತುರಿ, ಹುಳು, ಸಾಸಿವೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು.

ಪದಾರ್ಥ ಮಾಡುವ ವಿಧಾನ

ಬದಲಾಯಿಸಿ

ಅಣಬೆ[] ಯನ್ನು ಸಿಪ್ಪೆ ತೆಗೆದು ತೊಳೆದು ಇಟ್ಟುಕೊಳ್ಳಬೇಕು. ನಂತರ ಹಲಸಿನ ಬೀಜದ ಸಿಪ್ಪೆಯನ್ನು ತೆಗೆದು ಇಟ್ಟು ಕೊಂಡು. ಒಂದು ಪಾತ್ರೆ ಯಲ್ಲಿ ಅಣಬೆ ಹಲಸಿನ ಬೀಜ ಹಾಕಿ ನೀರು ಹಾಕಿ ಅದಕ್ಕೆ ಅರಶಿನ, ಉಪ್ಪು ಹಾಕಿ ಬೆಯಲು ಇಡಿ.ಚೆನ್ನಾಗಿ ಬೆಂದ ನಂತರ ಅದಕ್ಕೆ ರುಬ್ಬಿದ ಮಸಾಲೆ ಯನ್ನು ಸೇರಿಸಿ,ಸಾರು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ ಕಾದ ಕಬ್ಬಿಣ ಮತ್ತು ಬೆನಚು ಕಲ್ಲನ್ನು ಸಾರಿಗೆ ಅದ್ದಬೇಕು. ಯಾಕೆಂದರೆ ಅದರಲ್ಲಿ ಏನಾದರೂ ವಿಷದ ಅಂಶಗಳು ಇದ್ದಾರೆ ಸಾರು ನೀಲಿ ಬಣ್ಣಕ್ಕೆ ತಿರುಗುತ್ತದೆ.ಈ ಸಾರು ಅನ್ನಕ್ಕೆ ಸೂಪರ್ ಆಗಿರುತ್ತದೆ.[]

ಬೇರೆ ಬೇರೆ ಭಾಷೆಗಳಲ್ಲಿ

ಬದಲಾಯಿಸಿ
  • ತುಳುವಿನಲ್ಲಿ - ಲಾಂಬು
  • ಕನ್ನಡದಲ್ಲಿ - ಅಣಬೆ
  • ಮಲಯಾಳಿಯಲ್ಲಿ - ಅಲಾಂಬ್
  • ತಮಿಳಿನಲ್ಲಿ - ಅಂಪಿ
  • ಅರೆಬಾಸೆಡ್ - ಅಳ್ ಮ,,

ಅಣಬೆಅಣಬೆ ಪದದ ವಿವರಣೆ

ಬದಲಾಯಿಸಿ
  1. ಇದನ್ನು ಕನ್ನಡದಲ್ಲಿ ನಾಯಿಕೊಡೆ ಹೇಳುತ್ತಾರೆ.
  2. ಇದರ ವೈಜ್ಞಾನಿಕ ಹೆಸರು ಮಶ್‍ರೂಮ್ (Mushroom). Agaricus campestris(Agaricaceae)[Tulu lexicon vol. one(page:210)]
  3. ಅಣಬೆಯನ್ನು ಬೂಸ್ಟು; ಬೂಸುರು; ಬೂಸು ಅಂತ ಹೇಳುತ್ತಾರೆ.

ಉಲ್ಲೇಖ

ಬದಲಾಯಿಸಿ
  1. "ತೋವಿನಕೆರೆ: ನೈಸರ್ಗಿಕ ಅಣಬೆಗೆ ಹೆಚ್ಚಿದ ಬೇಡಿಕೆ".
  2. "Kadai Mushroom Recipe – Restaurant Style Mushrrom Curry with Stepwise Photos". foodviva.com. Retrieved 31 July 2022.