ಅಡೆತಡೆ

(ಅಡಚಣೆ ಇಂದ ಪುನರ್ನಿರ್ದೇಶಿತ)
ಅಭ್ಯಂತರ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಕ್ಷೇಪಣೆ ಲೇಖನಕ್ಕಾಗಿ ಇಲ್ಲಿ ನೋಡಿ.

ಅಡೆತಡೆ (ತಡೆ, ಅಡ್ಡಿ ಅಥವಾ ಅಡಚಣೆ) ಪ್ರತಿರೋಧ ಉಂಟುಮಾಡುವ ಒಂದು ವಸ್ತು, ಪದಾರ್ಥ, ಕ್ರಿಯೆ ಅಥವಾ ಪರಿಸ್ಥಿತಿ. ಹಾಗಾಗಿ, ಭೌತಿಕ, ಆರ್ಥಿಕ, ಜೈವಿಕಮನೋಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ತಂತ್ರಜ್ಞಾನಾತ್ಮಕ ಅಥವಾ ಮಿಲಿಟರಿ ಸೇರಿದಂತೆ ವಿಭಿನ್ನ ಬಗೆಯ ಅಡೆತಡೆಗಳಿವೆ.

ಭೂಕುಸಿತದಿಂದ ಸಂಚಾರಕ್ಕೆ ಅಡೆತಡೆ

ಭೌತಿಕ ಅಡೆತಡೆಗಳಾಗಿ, ನಾವು ಕಾರ್ಯವನ್ನು ನಿಲ್ಲಿಸುವ ಮತ್ತು ಒಂದು ನಿರ್ದಿಷ್ಟ ಗುರಿಯ ಪ್ರಗತಿ ಅಥವಾ ಸಾಧನೆಯನ್ನು ಪ್ರತಿಬಂಧಿಸುವ ಎಲ್ಲ ಭೌತಿಕ ತಡೆಗಳನ್ನು ಪಟ್ಟಿಮಾಡಬಹುದು. ಉದಾಹರಣೆಗೆ, ಕಡಿಮೆ ಚಲನಶೀಲತೆಯ ವ್ಯಕ್ತಿಗಳ ಪ್ರವೇಶಕ್ಕೆ ಅಡ್ಡಬರುವ ವಾಸ್ತುಶಿಲ್ಪದ ತಡೆಗಳು; ಅನಾಹೂತರು ಅಥವಾ ದಾಳಿಕೋರರನ್ನು ಹೊರಗಿಡಲು ವಿನ್ಯಾಸಗೊಳಿಸಲಾದ ಬಾಗಿಲುಗಳು, ಪ್ರವೇಶದ್ವಾರಗಳು ಮತ್ತು ಪ್ರವೇಶ ನಿಯಂತ್ರಣ ವ್ಯವಸ್ಥೆಗಳು; ಚಲನಶೀಲತೆಯನ್ನು ಪ್ರತಿರೋಧಿಸುವ ಮಾರ್ಗಗಳು, ರಸ್ತೆಗಳು, ರೈಲುಹಳಿಗಳು, ಜಲಮಾರ್ಗಗಳು ಅಥವಾ ವಾಯುನೆಲೆಗಳ ಮೇಲೆ ದೊಡ್ಡ ವಸ್ತುಗಳು, ಬಿದ್ದ ಮರಗಳು ಅಥವಾ ಕುಸಿತಗಳು; ಮುಕ್ತ ಸಮುದ್ರಯಾನವನ್ನು ಪ್ರತಿರೋಧಿಸುವ ಮರಳು ದಿಣ್ಣೆಗಳು, ಬಂಡೆಗಳು ಅಥವಾ ಹವಳ ದಿಬ್ಬಗಳು; ವಿಮಾನಗಳ ಮುಕ್ತ ಸಂಚಾರವನ್ನು ಪ್ರತಿರೋಧಿಸುವ ಗುಡ್ಡಗಳು, ಪರ್ವತಗಳು ಮತ್ತು ಹವಾಮಾನ ವಿದ್ಯಮಾನಗಳು; ಬಾಹ್ಯಾಕಾಶದಲ್ಲಿ ಬಾಹ್ಯಾಕಾಶನೌಕೆಯು ಮುಕ್ತವಾಗಿ ಸಂಚರಿಸಲು ಪ್ರತಿರೋಧ ಉಂಟುಮಾಡುವ ಉಲ್ಕೆಗಳು, ಉಲ್ಕಾಶಿಲೆಗಳು, ಬ್ರಹ್ಮಾಂಡದ ದೂಳು, ಧೂಮಕೇತುಗಳು, ಬಾಹ್ಯಾಕಾಶ ಭಗ್ನಾವಶೇಷ, ಪ್ರಬಲ ವಿದ್ಯುತ್ಕಾಂತೀಯ ವಿಕಿರಣ ಅಥವಾ ಗುರುತ್ವ ಕ್ಷೇತ್ರ.

ಆರ್ಥಿಕ ಅಡೆತಡೆಗಳು ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಜನರಿಗೆ ಅಗತ್ಯವಾಗಿರುವ ಭೌತಿಕ ಅಭಾವದ ಅಂಶಗಳು. ಉದಾಹರಣೆಗೆ, ನಿರ್ದಿಷ್ಟ ಯೋಜನೆಗಳ ಅಭಿವೃದ್ಧಿಯಲ್ಲಿ ಒಂದು ಅಡೆತಡೆಯಾದ ಹಣದ ಕೊರತೆ; ಭೂಮಿಯ ಮೇಲೆ ನಿರ್ದಿಷ್ಟ ಬೆಳೆಗಳನ್ನು ಉತ್ಪಾದಿಸುವ ಮತ್ತು ಸ್ವಂತ ಉಳಿವಿನ ಮಾನವ ಸಾಮರ್ಥ್ಯಕ್ಕೆ ಒಂದು ಅಡೆತಡೆಯಾದ ನೀರಿನ ಕೊರತೆ; ರಾತ್ರಿಯಲ್ಲಿ ಚಲನಶೀಲತೆಗೆ ಒಂದು ಅಡೆತಡೆಯಾದ ಬೆಳಕಿನ ಕೊರತೆ; ವಿದ್ಯುನ್ಮಾನ ಸಾಧನಗಳು ಮತ್ತು ವಿದ್ಯುತ ಯಂತ್ರಗಳು ಒದಗಿಸುವ ಪ್ರಯೋಜನಗಳಿಗೆ ಒಂದು ಅಡೆತಡೆಯಾದ ವಿದ್ಯುಚ್ಛಕ್ತಿಯ ಕೊರತೆ; ಶಿಕ್ಷಣ ಮತ್ತು ಪೌರತ್ವ ಪೂರ್ಣತೆಗೆ ಅಡೆತಡೆಗಳಾದ ಶಾಲೆಗಳು ಮತ್ತು ಶಿಕ್ಷಕರ ಕೊರತೆ; ಸಾರ್ವಜನಿಕ ಆರೋಗ್ಯದ ಸುಧಾರಣೆಯ ವ್ಯವಸ್ಥೆಗೆ ಅಡೆತಡೆಗಳಾದ ಆಸ್ಪತ್ರೆಗಳು ಮತ್ತು ವೈದ್ಯರ ಕೊರತೆ; ವ್ಯಾಪಾರ, ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳು, ಮತ್ತು ಆರ್ಥಿಕ ಅಭಿವೃದ್ಧಿಗೆ ಅಡೆತಡೆಗಳಾದ ಸಾರಿಗೆ ಮೂಲ ಸೌಕರ್ಯಗಳ ಕೊರತೆ.

"https://kn.wikipedia.org/w/index.php?title=ಅಡೆತಡೆ&oldid=797312" ಇಂದ ಪಡೆಯಲ್ಪಟ್ಟಿದೆ