ಅಟಾಶ್ ಬೆಹ್ರಾಮ್ ಅಘಿಯಾರಿ, ಚೀರ ಬಜಾರ್, ಮುಂಬಯಿ.

ಪಾರ್ಸಿ ಸಮುದಾಯದ ಡ್ಯಾಡಿ ಸೇಠ್,'ಅಟಾಶ್ ಬೆಹ್ರಾಮ್ ಅಗಿಯಾರಿ/ಅಘಿಯಾರಿ ',[] ದಕ್ಷಿಣ ಮುಂಬಯಿನ 'ಚಿರಾ ಬಜಾರ್' ನ ಬಳಿ ಇದೆ. ಸೋಮವಾರ ೨೩೨ ವರ್ಷ ಮುಗಿಸುತ್ತಿದೆ. ಈ 'ಅಟಾಶ್ ಬೆಹ್ರಾಮ್ ಟೆಂಪಲ್' ಅತಿ ಪುರಾತನ ಆಘಿಯಾರ್ ಗಳಲ್ಲೊಂದೆಂದು ಪರಿಗಣಿಸಲಾಗಿದೆ.(the highest grade of fire temple for Zoroastrians)[]

ನಿರ್ಮಾಣಕಾರ್ಯ

ಬದಲಾಯಿಸಿ

ಈ ಪವಿತ್ರ ಅಗಿಯಾರಿಯನ್ನು(ದೇವಾಲಯವನ್ನು)'ಮುಲ್ಲಾ ಕೌಸ್ ರುಸ್ತುಂ ಜಲಾಲ್' ಎನ್ನುವವರು, ೧೭೮೩ ರಲ್ಲಿ ನಿರ್ಮಿಸಿದರು. ಈಗ ವಿಶ್ವಸಂಸ್ಥೆಯಿಂದ, ಈ ಮಂದಿರವನ್ನು ಹೆರಿಟೇಜ್ ಕಟ್ಟಡವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ, 'ಬಿಳಿ ಎತ್ತಿನ ಬದಲು,' 'ಗೋಟ್ ಪೆನ್' ಇದೆ. ಈ ಭವ್ಯ ಕಟ್ಟಡಕ್ಕೆ ಒಂದು ಸುಂದರ ಪೋರ್ಟಿಕೋ ಇದೆ. ನಡೆಯಲು ಚಾವಣಿಯನ್ನು ಹೊಂದಿದ ಉದ್ದವಾದ ರಸ್ತೆಮಾರ್ಗವಿದೆ. ಆಗಿನ ಸಮಯದ ಪಾರ್ಸಿ ಪ್ರಕಾಶ್ ಪ್ರಕಾರ, 'ಜಶನ್'(prayers) ಮಳೆಯ ದೇವತೆಯನ್ನು ಪ್ರಾರ್ಥಿಸುತ್ತಿದ್ದರು.[] ಇದನ್ನು 'ಪಾರ್ಸಿ ಪಂಚಾಯತ್'ಆಯೋಜಿಸುತ್ತಿತ್ತು. ಜುನ್ ೩೦, ೧೮೨೪ ರಂದು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದ ಮಾರನೆಯ ದಿನ ಬೆಳಿಗ್ಯೆ ೫ ಗಂಟೆಗೆ ೧೦ ನಿಮಿಷ ಭಾರಿ ಮಳೆ ಬಂದಿದ್ದ ದಾಖಲೆಯಿದೆ. ಹಾಗೆಯೇ ಹಿಂದುಗಳು ಭುಲೆಶ್ವರ್ ದೇವಾಲಯದಲ್ಲಿ ಹವನ-ಹೋಮಗಳನ್ನು ೪ ದಿನಗಳ ಕಾಲ ಸತತವಾಗಿ ನೆರೆವೇರಿಸಿದ್ದರು. ಮಾಹಿಮ್ ನ, ಪೋಚುಗಿಸ್ ಚರ್ಚ್ ನಲ್ಲಿ ಕ್ರಿಶ್ಚಿಯನ್ ಬಾಂಧವರು ಸಹಿತ ತಮ್ಮ ವಿಶೇಷ ಸಾಮೂಹಿಕ ಪ್ರಾರ್ಥೆನಾ ಸಭೆಯನ್ನು ಇಟ್ಟುಕೊಂಡಿದ್ದರು.

ಉಲ್ಲೇಖಗಳು

ಬದಲಾಯಿಸಿ
  1. Pictures of some important Aghiyars of Mumbai
  2. 'ಅಟಾಶ್ ಬೆಹ್ರಾಮ್ ಅಗಿಯಾರಿ, ಚೀರಾ ಬಜಾರ್, ಮುಂಬಯಿ
  3. 'ಅಗಿಯಾರ್ ಗಳ ವಿವರಗಳು'