ಅಜೀಗರ್ತ
ಜೀಗರ್ತ ಭೃಗುವಂಶದ ಒಬ್ಬ ದೊಡ್ಡ ಋಷಿ. ಕ್ಷಾಮಕಾಲದಿಂದಲೇ ತನ್ನ ಸಂಸಾರವನ್ನು ಕಾಪಾಡಲು ಅಶಕ್ತನಾದಾಗ ಈತ ತನ್ನ ಮಗ ಶುನಶ್ಯೇಪನನ್ನು ನರಯಜ್ಞಪಶುವಾಗಿ ಹರಿಶ್ಚಂದ್ರನಿಗೆ ಮಾರಿದ. ಈ ಪಾಪದ ಸಲುವಾಗಿ ಪಿಶಾಚಿಯಾಗಬೇಕಾಯಿತು. ಶುನಶ್ಯೇಪ ತನ್ನ ತಪೋಬಲದಿಂದ ತಂದೆಯ ಈ ದುರವಸ್ಥೆಯನ್ನು ಹೋಗಲಾಡಿಸಿದ. (ನೋಡಿ- ಐತರೇಯ)