ಅಜಯ ಡಾಟ ಮಾಹಿತಿ ತಂತ್ರಜ್ಞಾನ ಮತ್ತು ಆಹಾರದ ಎಣ್ಣೆಗಳ ಕ್ಷೇತ್ರದ ಭಾರತೀಯ ಉದ್ಯಮಿ. ಅವರ ಸಾರ್ವತ್ರಿಕ ಸ್ವೀಕೃತಿ ಗುಂಪಿ (ಯೂನಿವರ್ಸಲ್ ಅಕ್ಸೆಪ್ಟೆನ್ಸ್ ಸ್ಟೀರಿಂಗ್ ಗ್ರೂಪ್ (UASG)) ಅಧ್ಯಕ್ಷರು. [೨][೩] ಅಂತರರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಒಳಗೊಂಡ ಪ್ರಪಂಚದ ಮೊದಲ ಭಾಷಾ ಇಮೈಲ್ ವಿಳಾಸವುಳ್ಳ ಮೊಬೈಲ್ ಅಪ್ಲಿಕೇಶನ್‌ಗಳ ರಚನೆಯನ್ನು ಅಜಯ ಡಾಟ ಮಾಡಿದ್ದರು. [೪] [೫] ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭಾರತೀಯ ಭಾಷೆಗಳಲ್ಲಿ ಉನ್ನತ ಮಟ್ಟದ ಡೊಮೈನ್ (TLD) ಅನ್ನು ರೂಟ್ ಸರ್ವರ್‌ಗಳಿಗೆ ತರಲು ಅವರು ನಾಯಕತ್ವ ವಹಿಸಿದರು. ಈ ಸಾಧನೆಗಳಿಗಾಗಿ ಅವರು [೬] ಗ್ರಹಾಂ ಬೆಲ್ ಪ್ರಶಸ್ತಿ ಹಾಗೂ ಭಾಷೆ ಮತ್ತು ಲಿಪಿಗಳಿಗಾಗಿ ಮಾಡಿದ ಕೆಲಸಕ್ಕಾಗಿ ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಸ್ತಿಗಳನ್ನು ಪಡೆದರು.[೭] ಅವರು ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳನ್ನು ಅಡ್ಡಹೆಸರುಗಳೊಂದಿಗೆ ಬಳಸಲು ಮಾನದಂಡವನ್ನು ಪ್ರಸ್ತಾಪಿಸಿದ್ದರು. ಇದನ್ನು ಸಾರ್ವತ್ರಿ ಸ್ವೀಕೃತಿಯ ನಾಯಕತ್ವ ತಂಡದವರು ಉತ್ತಮ ಅಭ್ಯಾಸವೆಂದು ಸ್ವೀಕರಿಸಿದರು.[೮] ಅವರ ಮೊಬೈಲ್ ಅಪ್ಲಿಕೇಶನ್ ಸಿರಿಲಿಕ್, [೯] ಅರೇಬಿಕ್, [೧೦] ಥಾಯ್, ಮ್ಯಾಂಡರಿನ್, [೧೧] ಕೊರಿಯನ್ [೧೨] ಮತ್ತು 15 ಭಾರತೀಯ [೧೩] ಭಾಷೆಗಳನ್ನು ಒಳಗೊಂಡಂತೆ ಜಗತ್ತಿನ ೧೯ ಭಾಷೆಗಳಲ್ಲಿ ಇಮೈಲ್ ಸೌಲಭ್ಯವನ್ನು ಒದಗಿಸುತ್ತದೆ. ಇದು DataMail ಅಪ್ಲಿಕೇಶನ್ ಮೂಲಕ ಲಭ್ಯವಿದೆ.

ಅಜಯ ಡಾಟ
ಚಿತ್ರ:Ajay Data picture.jpg
ಜನನ (1973-03-22) ೨೨ ಮಾರ್ಚ್ ೧೯೭೩ (ವಯಸ್ಸು ೫೦)
ಖೈರ್ತಾಲ, ಭಾರತ
ರಾಷ್ಟ್ರೀಯತೆಭಾರತೀಯ
ಉದ್ಯೋಗಡಾಟಾ ಇಂಜೀನಿಯಸ್ ಗ್ಲೋಬಲ್ ಲಿ. ಕಂಪೆನಿ ಮುಖ್ಯಸ್ಥ
ಜೀವನ ಸಂಗಾತಿನಿಧಿ ಎ. ಡಾಟ
ಮಕ್ಕಳು2
ಪ್ರಶಸ್ತಿಗಳು೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ[೧]

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಅಜಯ ಡಾಟ ಅವರು ೨೨ ಮಾರ್ಚ್ ೧೯೭೩ ರಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಖೈರ್ತಾಲ್‌ನಲ್ಲಿ ಜನಿಸಿದರು. ಖೈರ್ತಾಲ್‌ನ ಇಂದ್ರ ಹ್ಯಾಪಿ ಶಾಲೆ ಮತ್ತು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಕಾಲೇಜು ಅಧ್ಯಯನಕ್ಕಾಗಿ ಜೈಪುರಕ್ಕೆ ತೆರಳಿದರು.

೧೯೯೯ ರಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅಜಯ ಅವರು ಡಾಟ ಇನ್ಫೋಸಿಸ್ ಲಿಮಿಟೆಡ್ ಎಂಬ ಕಂಪೆನಿಯನ್ನು ರಾಜಸ್ಥಾನದಲ್ಲಿ ಸ್ಥಾಪಿಸಿದರು. ಈಗ ಅದನ್ನು ಡೇಟಾ ಇಂಜಿನಿಯಸ್ ಗ್ಲೋಬಲ್ ಲಿಮಿಟೆಡ್ ಎಂದು ಕರೆಯಲಾಗುತ್ತಿದೆ.

ಐಕಾನ್‍ನಲ್ಲಿ ಅಜಯ ಡಾಟ ಬದಲಾಯಿಸಿ

ಅಜಯ ಅವರು ICANN ನ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್‌ನ ಸಹ-ಅಧ್ಯಕ್ಷರಾಗಿದ್ದಾರೆ. ಅವರು UASG ನಲ್ಲಿ EAI ಸಂಯೋಜಕರಾಗಿದ್ದರು. TECH ಮತ್ತು ISPCP ಕ್ಷೇತ್ರದ ಸದಸ್ಯರಾಗಿದ್ದರು. ಅವರು ರೂಟ್ ಝೋನ್ LGR ಅಪ್ಲಿಕೇಶನ್‌ಗಾಗಿ ಎಕ್ಸ್‌ಪರ್ಟ್ ಪ್ಯಾನೆಲ್ [೧೪] ನ ಸದಸ್ಯರೂ ಆಗಿದ್ದಾರೆ. ಅವರು ೨೦೨೧ ರಿಂದ ೨೦೨೩ ರವರೆಗೆ UASG [೧೫] ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಾಗೆದಾರಿಯಾದ ಇತರೆ ಸಂಘ ಸಂಸ್ಥೆಗಳು ಬದಲಾಯಿಸಿ

  • ರಾಜಸ್ಥಾನ ಐಟಿ ಉದ್ಯಮಿಗಳ ಗುಂಪು,
  • ಸಂಸ್ಥಾಪಕ ಮತ್ತು ಅಧ್ಯಕ್ಷ TiE ರಾಜಸ್ಥಾನ
  • ಸಂಸ್ಥಾಪಕ ಅಧ್ಯಕ್ಷ YEO ಜೈಪುರ (ಈಗ EO ಎಂದು ಕರೆಯಲಾಗುತ್ತಿದೆ)
  • Nasscom
  • ಡಾಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ
  • ಜೈಪುರ ಸಿಟಿಜನ್ ಫೋರಮ್
  • AIESEC ನ ಸಲಹಾ ಮಂಡಳಿ
  • ಮಂಡಳಿಯ ಸದಸ್ಯ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಪೊದ್ದಾರ್ ಕಾಲೇಜ್) - ರಾಜಸ್ಥಾನ ವಿಶ್ವವಿದ್ಯಾಲಯ
  • ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, FICCI - ರಾಜಸ್ಥಾನ.
  • ಸದಸ್ಯ - ರಾಜಸ್ಥಾನ ಏಂಜೆಲ್ ಇನ್ವೆಸ್ಟರ್ಸ್ ನೆಟ್ವರ್ಕ್ (RAIN). [೧೬]

ಬಹುಭಾಷಾ ಅಂತರಜಾಲ ಬದಲಾಯಿಸಿ

ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದ ಅಧಿಕೃತ ಭಾಷೆಗಳನ್ನು ಅಂತರಜಾಲದ ವಿಳಾಸಗಳಲ್ಲಿ ಅಳವಡಿಸಲು ಉನ್ನತ ಮಟ್ಟದ ಡೊಮೈನ್ ಹೆಸರುಗಳಿಗೆ ನಿಯಮಗಳನ್ನು ರಚಿಸಿರುವ ನಿಯೋ ಬ್ರಾಹ್ಮಿ ಜನರೇಷನ್ ಪ್ಯಾನೆಲ್ ಎಂಬ ಹೆಸರಿನ ICANN ನಿಂದ ರಚಿಸಲಾದ ಸ್ವಯಂಸೇವಕರ ತಂಡದಲ್ಲಿ ಡಾಟ ಭಾಗವಾಗಿದ್ದಾರೆ.

ಸಾರ್ವತ್ರಿಕೆ ಸ್ವೀಕೃತಿ ಮತ್ತು ಬಹುಭಾಷಾ ಅಂತರಜಾಲಕ್ಕಾಗಿ ಸ್ಟೇಕ್ ಹೋಲ್ಡರ್ ಗ್ರೂಪ್‌ನಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಚಿವಾಲಯದಿಂದ ಅಜಯರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಪ್ರಶಸ್ತಿಗಳು ಮತ್ತು ಗೌರವಗಳು ಬದಲಾಯಿಸಿ

  • ಟೈಮ್ಸ್ ಆಫ್ ಇಂಡಿಯಾದ "ಮ್ಯಾನ್ ಟು ವಾಚ್ ಇನ್ 2004"
  • ಲುಫ್ಥಾನ್ಸ "ಪಯೋನಿಯರಿಂಗ್ ಸ್ಪಿರಿಟ್" - ET ನೌ - 2011
  • "ರಾಜಸ್ಥಾನ ಗೌರವ" - ಸಂಸ್ಕೃತಿ - ಜೈಪುರ, ರಾಜಸ್ಥಾನ - 2013
  • ವರ್ಷದ ಐಟಿ ಇನ್ನೋವೇಟರ್ - ಪೀಟರ್ ಹ್ಯಾಸ್, ಯುಎಸ್ ಇಂಡೋ ಅಮೇರಿಕನ್ ಸೊಸೈಟಿ. 2013
  • ಈಟಿವಿ ರಾಜಸ್ಥಾನದಿಂದ ರಾಜಸ್ಥಾನ ಕೀ ಸೂಪರ್‌ಸ್ಟಾರ್. 2013
  • ವರ್ಷದ ಐಟಿ ಇನ್ನೋವೇಟರ್ - ಬಿಸಿನೆಸ್ ರ‍್ಯಾಂಕರ್ಸ್ ಮ್ಯಾಗಜೀನ್ 2015
  • ಶಾನ್-ಇ-ರಾಜಸ್ಥಾನ - ರಾಜಸ್ಥಾನದ ರಾಜ್ಯಪಾಲರಿಂದ ಸನ್ಮಾನ
  • ೨೦೧೭ರ ಎಂಟರ್‌ಪ್ರೈಸ್ ಸೊಲ್ಯೂಷನ್ ವಿಭಾಗದಲ್ಲಿ [೧೭] ಅತ್ಯುತ್ತಮ ನಾವೀನ್ಯತೆಗಾಗಿ ಗ್ರಹಾಂ ಬೆಲ್ ಪ್ರಶಸ್ತಿ
  • ಸಹ-ಅಧ್ಯಕ್ಷ NBGP - ನಿಯೋ ಬ್ರಾಹ್ಮಿ ಜನರಲ್ ಪ್ಯಾನೆಲ್ - ICANN [೧೮]
  • ಅಧ್ಯಕ್ಷ ಅಸೋಚಾಮ್ ರಾಜಸ್ಥಾನ

ಉಲ್ಲೇಖಗಳು ಬದಲಾಯಿಸಿ

  1. "Innovation in Enterprise Solution - Data Ingenious- Aegis Graham Bell Awards". bellaward.com (in ಅಮೆರಿಕನ್ ಇಂಗ್ಲಿಷ್). Retrieved 2017-03-14.[ಶಾಶ್ವತವಾಗಿ ಮಡಿದ ಕೊಂಡಿ]
  2. Kurup, Rajesh. "Ajay Data elected Chairman of UASG". @businessline (in ಇಂಗ್ಲಿಷ್). Retrieved 2019-03-14.
  3. Catania, Simone. "It's all about domains with Dr Ajay Data (UASG)". InterNetX (in ಇಂಗ್ಲಿಷ್). Retrieved 2021-02-09.
  4. "DataMail: World's first free linguistic email service supports eight India languages". The Economic Times. Retrieved 2017-03-19.
  5. "Made In India 'Datamail' Empowers Russia With Email Address In Russian Language - Digital Conqueror". Digital Conqueror (in ಅಮೆರಿಕನ್ ಇಂಗ್ಲಿಷ್). 2016-12-07. Retrieved 2017-03-19.
  6. "GRAHAM BELL AWARD Archives - Hello Rajasthan:Hindi News,Latest News in Hindi,News in Hindi,Hindi News Paper". Hello Rajasthan:Hindi News,Latest News in Hindi,News in Hindi,Hindi News Paper (in ಅಮೆರಿಕನ್ ಇಂಗ್ಲಿಷ್). Archived from the original on 2017-03-19. Retrieved 2017-02-12.
  7. "Documents".
  8. Hollander, Don. "Universal Acceptance Group" (PDF). uasg.tech.
  9. "After Indic languages, DataMail now offers Russian language email ids". www.medianama.com (in ಅಮೆರಿಕನ್ ಇಂಗ್ಲಿಷ್). 8 December 2016. Retrieved 2018-02-10.
  10. "Now, write emails in eight major Indian languages courtesy DataMail". The News Minute. 2016-10-19. Retrieved 2018-02-10.
  11. "Datamail starts e-mail service in Chinese language". outlookindia.com/. Retrieved 2018-02-10.
  12. "Indian firm develops email service in Korean script". The Quint (in ಇಂಗ್ಲಿಷ್). Retrieved 2018-06-02.
  13. "BSNL, Datamail to Offer Free Email Addresses in 8 Indian Languages". NDTV Gadgets360.com (in ಇಂಗ್ಲಿಷ್). Retrieved 2018-02-10.
  14. "Study Group on Technical Use of RZ-LGR - LGR Procedure - Confluence". community.icann.org. Retrieved 2018-08-06.
  15. Bureau, Bharat (2019-03-16). "Ajay Data becomes first Asian to be elected as Chairman of UASG". NRInews24x7 (in ಅಮೆರಿಕನ್ ಇಂಗ್ಲಿಷ್). Retrieved 2022-06-12.[ಶಾಶ್ವತವಾಗಿ ಮಡಿದ ಕೊಂಡಿ]
  16. "3 Startups Raises Funding From Rajasthan Angel Investor Network". Inc42 Media (in ಇಂಗ್ಲಿಷ್). 2014-11-07. Retrieved 2022-06-12.
  17. "Innovation in Enterprise Solution - Data Ingenious- Aegis Graham Bell Awards". bellaward.com (in ಅಮೆರಿಕನ್ ಇಂಗ್ಲಿಷ್). Retrieved 2017-03-14.[ಶಾಶ್ವತವಾಗಿ ಮಡಿದ ಕೊಂಡಿ]
  18. "Neo-Brahmi GP - LGR Procedure - Confluence". community.icann.org. Retrieved 2017-08-15.
"https://kn.wikipedia.org/w/index.php?title=ಅಜಯ_ಡಾಟ&oldid=1191862" ಇಂದ ಪಡೆಯಲ್ಪಟ್ಟಿದೆ