ಅಗ್ರೋಮೈಸಿಡೆಯು ನೊಣಗಳ ಕುಟುಂಬವಾಗಿದ್ದು,ಈ ಕುಲಕ್ಕೆ ಸೇರಿದ ನೊಣದ ಮರಿಗಳು ಎಲೆಗಳಲ್ಲಿ ಸುರಂಗ ಮಾಡಿಕೊಂಡು ಜೀವಿಸುವುದರಿಂದ ಇವನ್ನು ಎಲೆಸುರಂಗದ ನೊಣಗಳು (ಲೀಫ್ ಮೈನರ್ಸ್) ಎಂದು ಕರೆಯುತ್ತಾರೆ.

ಎಲೆಸುರಂಗದ ನೊಣಗಳು
Napomyza lateralis
Scientific classification e
Unrecognized taxon (fix): Agromyzidae
Subfamilies

ಲಕ್ಷಣಗಳು

ಬದಲಾಯಿಸಿ

ಈ ನೊಣಗಳ ಶರೀರ ಸೂಕ್ಷ್ಮವಾಗಿದ್ದು ಕಪ್ಪು ಅಥವಾ ಹಳದಿ ಬಣ್ಣದ್ದಾಗಿರುತ್ತದೆ. ಮರಿಗಳ ಶರೀರ ಆಕಾರದಲ್ಲಿ ದುಂಡಗಿದ್ದು ಮುಂಭಾಗದಲ್ಲಿ ಚೂಪಾಗಿರುತ್ತದೆ. ಕೊನೆಯ ಉಂಗುರದ ಕೆಳಭಾಗದಲ್ಲಿ ಹೀರುನಳಿಕೆಯಂಥ ಅಂಗವಿರುತ್ತದೆ.

ಸಂತಾನೋತ್ಪತ್ತಿ

ಬದಲಾಯಿಸಿ

ಮರಿಗಳು ತಾವು ಎಲೆಗಳಲ್ಲಿ ಮಾಡಿದ ಸುರಂಗದಲ್ಲಿ ಅಥವಾ ಮಣ್ಣಿನಲ್ಲಿ ಕೋಶಾವಸ್ಥೆ ಕಳೆಯುತ್ತವೆ. ಈ ಕುಲದ ನಾನಾ ಜಾತಿಗಳಿಗೆ ಸೇರಿದ ನಾನಾ ಪ್ರಭೇದಗಳನ್ನು ಗುರುತಿಸಲು ಆಯಾ ಜಾತಿ ಮತ್ತು ಪ್ರಭೇದಗಳಿಗೆ ಸೇರಿದ ನೊಣಗಳ ಪರಿಶೀಲನೆಗಿಂತ ಮರಿಗಳು ಎಲೆಗಳಲ್ಲಿ ಮಾಡುವ ಸುರಂಗಗಳ ಮಾದರಿಯ ಪರಿಶೀಲನೆ ಹೆಚ್ಚು ಸಹಕಾರಿಯೆನಿಸಿದೆ. ಸಾಮಾನ್ಯವಾಗಿ ಮರಿಗಳು ವಿವಿಧ ರೀತಿಯ ನುಲಿಕೆಗಳಾಗಿ ಎಲೆಗಳಲ್ಲಿ ಸುರಂಗ ಮಾಡುತ್ತವೆ. ಆದರೆ ತೊಗರಿಕಾಯಿಗೆ ಬೀಳುವ ಅಗ್ರೋಮಿಕ್ಟೋಸ್ ಅಬ್ಟ್ಸುಸ ಎಂಬ ನೊಣ ತನ್ನ ಸೂಕ್ಷ್ಮವಾದ ಮೊಟ್ಟೆಗಳನ್ನು ಎಳೆ ತೊಗರಿಕಾಯಿಯೊಳಗೆ ಇಡುತ್ತದೆ.

 
Larval mines of European holly leaf miner, Phytomyza ilicis

ಈ ಮೊಟ್ಟೆಗಳಿಂದ ಹೊರ ಬಂದ ಮರಿಗಳು ಕಾಳಿಗೆ ಹೋಗಿ ಅದನ್ನು ತಿಂದು ಜೀವಿಸುತ್ತವೆ. ಕ್ರಿಪ್ಟೋಕೀಟು ಮುಂತಾದ ಜಾತಿಯ ಮರಿಗಳು ಕಾಕ್ಸಿಡಿ ಕುಲಕ್ಕೆ ಸೇರಿದ ಕೀಟಗಳ ಶರೀರದಲ್ಲಿ ಸೇರಿಕೊಂಡು ಜೀವನ ನಡೆಸುತ್ತವೆ. ಕ್ರಿಪ್ಪೋಕೀಟಂ ಐಸೆರ್ಯ ಎಂಬ ನೊಣ ಕಿತ್ತಳೆ ಮತ್ತು ಸರ್ವೆ ಮರಕ್ಕೆ ಬಿದ್ದು ಹಾನಿಮಾಡುವ ಐಸೆರ್ಯ ಪರ್ಚೇಸಿ ಎಂಬ ಕಾಕ್ಸಿಡಿ ಕುಲದ ಕೀಟಗಳ ಶರೀರದಲ್ಲಿ ಮೊಟ್ಟೆಯಿಡುತ್ತದೆ. ಅದರಿಂದ ಬಂದ ಮರಿಗಳು ಆ ಕೀಟಗಳ ಶರೀರದೊಳಗೆ ಸೇರಿಕೊಂಡು ತಮ್ಮ ಜೀವನ ನಡೆಸುತ್ತವೆ. ಹಾಗೂ ಆಶ್ರಯದಾತ ಕೀಟವನ್ನು ನಾಶಪಡಿಸುತ್ತವೆ.

ನೀಲಗಿರಿ ಮತ್ತು ಕೊಡೈಕನಾಲ್ ಪ್ರದೇಶಗಳ ಕಿತ್ತಳೆ ತೋಟಗಳಿಗೆ ಐಸೆರ್ಯ ಪರ್ಚೇಸಿ ಒಂದು ಅಪಾಯಕಾರಿ ಕೀಟವಾಗಿ ಪರಿಣಮಿಸಿದೆ; ಅದನ್ನು ನಿವಾರಿಸಲು ಈಚೆಗೆ ಈ ಕ್ರಿಪ್ಪೋಕೀಟಂ ಐಸೆರ್ಯವನ್ನು ಬಳಸಿಕೊಳ್ಳುತ್ತಿರುವರು. ಇದು ಒಂದು ಜೈವಿಕ ನಿಯಂತ್ರಣ ವಿಭಾಗ.

ಉಲ್ಲೇಖಗಳು

ಬದಲಾಯಿಸಿ