ಅಗೆಲು

ಅಗೆಲು ಬಡಿಸುವುದು

ಅಸುರಕ್ರಿಯದಲ್ಲಿ ಅತ್ಯಂತ ಸಾಮಾನ್ಯ ಚಟುವಟಿಕೆಗಳಲ್ಲಿ ಅಗೆಲು ಕೂಡಾ ಒಂದಾಗಿದೆ. ಮನುಷ್ಯರು, ತಾವು ನಂಬಿದ ದೈವಗಳಿಗೆ ಅಥಾವೋ ಪ್ರೇತಾತ್ಮಗಳಿಗೆ ಬಾಳೆ ಎಲೆಯಲ್ಲಿ ಸಮರ್ಪಿಸುವ ನೈವೇದ್ಯ ಇದು. ಅಲ್ಲದೆ, ಗುರು ಹಿರಿಯರನ್ನು ನೆನಪಿಸಿಕೊಳ್ಳುವ ಒಂದು ರೀತಿಯಲ್ಲಿ ಅವರನ್ನು ಸಂತೋಷ ಪಡಿಸುವ ಒಂದು ಹಬ್ಬ.

ಅಗೆಲು

ಅಗೆಲಿನ ಕ್ರಮಗಳು

ಬದಲಾಯಿಸಿ

ಅಗೆಲು ಒಂದು ಸಣ್ಣ ಸಮಾರಂಭವಾಗಿದೆ, ಅದರಲ್ಲಿ ಅನ್ನ, ಕೋಳಿ ಮತ್ತು ಮೀನು ಪದಾರ್ಥಗಳನ್ನು ಬಡಿಸಲು ಬಾಳೆ ಎಲೆಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರು ಒಟ್ಟಾಗಿ ದೈವದ ಸೇವೆಗಳನ್ನು ಮಾಡುತ್ತಾರೆ.[] ಭೂತಾರಧಾನೆಯಲ್ಲಿ ಅಗೆಲಿನ ನೈವೇದ್ಯ ಬಹಳ ಮುಖ್ಯ. ಕೋಲ ಕೊಡಲು ಆಗದಿದ್ದರೂ ಅಗೆಲು ಕೊಡಲೇ ಬೇಕು. ಮತ್ತು ಅದನ್ನು ಯಾರೂ ಕೊಡದೆ ಇರಲಾರರು. ಇದರಲ್ಲಿ ಕೋಳಿಯ ಊಟ ಇದ್ಧೇ ಇರುತ್ತದೆ. ತುಳುವರ ಬೇಸ ಮಾಸದಲ್ಲಿ ಅಂದರೆ ವೈಶಾಕ ತಿಂಗಳಲ್ಲಿ ಭ್ಯರವ ದೈವರಿಗೆ ಅಗೆಲು ಹಾಕುವುದು. ತುಳುವರ ಕಾರ್ತೇಲು ಮಾಸದಲ್ಲಿ ಅಂದರೆ ಜೇಸ್ಥ ತಿಂಗಳಲ್ಲಿ ಕಲ್ಲುಟ್ಟಿ ದೈವರಿಗೆ ಅಗೆಲು ಹಾಕುವುದು. ಹಾಗೆಯೇ ಆಶಾಢ ತಿಂಗಳಲ್ಲಿ ಗುಳಿಗನಿಗೆ ಅಗೆಲನ್ನು ಅರ್ಪಿಸುತ್ತಾರೆ.

ಅಗೆಲಿನ ವಿಶೇಷತೆ

ಬದಲಾಯಿಸಿ

ಅಗೆಲಿನಲ್ಲಿ ದೈವಗಳಿಗೆ ಮತ್ತು ಸತ್ತವರಿಗೆ ಮಾಡುವ ವಿಶೇಷ ಕೊಡುಗೆಯಾಗಿದೆ. ಅನ್ನ, ಸಾರು, ಪಲ್ಯ, ಮೀನು ಸಾರು, ಅಕ್ಕಿ ಪುಡಿ, ರೊಟ್ಟಿ, ಕೋಳಿ, ಪದಾರ್ಥ ಹೀಗೆ ವಿವಿಧ ಖಾದ್ಯಗಳನ್ನು ತಯಾರಿಸಿ ಅಗೆಲು ಬಡಿಸುತ್ತಾರೆ.

ವಿಧಗಳು

ಬದಲಾಯಿಸಿ

ದೈವಗಳಿಗೆ ಅಗೆಲು ಬಡಿಸುವುದು,

ಹದಿನಾರು ಅಗೆಲು ಬಡಿಸುವುದು,

ಆಟಿಯ ಅಥಾವೊ ಆಶಾಢದಲ್ಲಿ ಅಗೆಲು ಬಡಿಸುವುದು,

ಜೈನರ ಅಗೆಲು ಬಡಿಸುವುದು,

ಹದಿನಾರಕ್ಕೆ ಸೇರಿಸುವುದು.

ಕಲ್ಲಿಗೆ ಬಡಿಸುವುದು

ಬದಲಾಯಿಸಿ
 
ಕಲ್ಲಿಗೆ ಬಡಿಸುದು

ಕಲ್ಲಿಗೆ ಅರ್ಪಣೆ - ಪ್ರತಿ ದೈವಗಳು ನೆಲೆಯಾಗುವುದು ಕಲ್ಲಿನಲ್ಲಿ. ಹಾಗಾಗಿ ಕಲ್ಲಿಗೆ ಬಲಿ ಕೊಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಕಲ್ಲು ಹಾಕದವರು ಅಂದರೆ ಕಲ್ಲಿನಲ್ಲಿ ದೈವವನ್ನು ಪೂಜಿಸದವರು, ದೈವ ಇರುವ ಕೋಣೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಗಾದೆ ಮಾತುಗಳು

ಬದಲಾಯಿಸಿ
  • ಆಟಿಯಲ್ಲಿ ಅಗೆಲು ಸೋಣದಲ್ಲಿ ಕೋಲ.
  • ಸೋಣದಲ್ಲಿ ದೀಪ
  • ಆಟಿಯಲ್ಲಿ ಆಟಿ ಕಲೆಂಜೆ, ಸೋಣದಲ್ಲಿ ಸೋಣದ ಜೋಗಿ

ಉಲ್ಲೇಖಗಳು

ಬದಲಾಯಿಸಿ
  1. ತುಳು ನಿಘಂಟು (TULU LEXICON), ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ - ಉಡುಪಿ


"https://kn.wikipedia.org/w/index.php?title=ಅಗೆಲು&oldid=1279591" ಇಂದ ಪಡೆಯಲ್ಪಟ್ಟಿದೆ