ಅಖಿಲಭಾರತ ಮಾನಸಿಕ ಆರೋಗ್ಯ ಸಂಸ್ಥೆ

ಅಖಿಲಭಾರತ ಮಾನಸಿಕ ಆರೋಗ್ಯ ಸಂಸ್ಥೆ ಬದಲಾಯಿಸಿ

ಆಲ್ ಇಂಡಿಯ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ಥ್ ಎಂದು ಕರೆಯಲಾಗುವ ಈ ಸಂಸ್ಥೆಯನ್ನು 1954ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಮಾನಸಿಕ ಆರೋಗ್ಯದಲ್ಲಿ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ಕೊಡುತ್ತಿರುವುದಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಾನಸಿಕ ಆರೋಗ್ಯ ಸೇವೆಯ ಬಗ್ಗೆ ಆದೇಶಗಳನ್ನು ಕೊಟ್ಟು, ಮಾನಸಿಕ ಆರೋಗ್ಯದ ಬಗ್ಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯೋಗಿಗಳ ಸಹಕಾರದೊಂದಿಗೆ ಇದು ಕೆಲಸ ಮಾಡುತ್ತಿದೆ. 1955ರಿಂದೀಚೆಗೆ ಮಾನಸಿಕ ವೈದ್ಯದಲ್ಲಿ ಒಂದು ಡಿಪ್ಲೋಮಾ ತರಗತಿಯನ್ನು ನಡೆಸುತ್ತಿರುವುದಲ್ಲದೆ ವೈದ್ಯಕೀಯ ಮನಶ್ಯಾಸ್ತ್ರದಲ್ಲಿ ತರಬೇತಿ ಶಿಕ್ಷಣವನ್ನೂ ನೀಡುತ್ತಿದೆ.