ಅಖಮನಿಸ್ಪ್ರ.ಶ.ಪು. ಸು. 7ನೆಯ ಶತಮಾನ. ಪರ್ಷಿಯ ರಾಜವಂಶದ ಮೂಲಪುರುಷ. ಡೇರಿಯಸ್ಸನ ಬೆಹಿಸ್ತನ್ ಶಾಸನದ ಪ್ರಕಾರ ತೆಸ್ಪಿಸ್ಸನ ತಂದೆ ಮತ್ತು ಕೈರಸ್ನ ತಾತ. ಮೀಡರಿಗೆ ಅಧೀನವಾಗಿದ್ದ ಔಷಾನ್ ಎಂಬ ಪ್ರಾಂತವನ್ನಾಳುತ್ತಿದ್ದ ಈತ ಸ್ವತಂತ್ರವಾಗಿ ಪರ್ಷಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನ ವಿಷಯವಾಗಿ ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ. ಇವನು ಸ್ಥಾಪಿಸಿದ ಈ ಸಾಮ್ರಾಜ್ಯವನ್ನು ಇವನ ಮನೆತನದವರು ಪ್ರ.ಶ.ಪು. 330ರವರೆಗೂ (ಅಂದರೆ ಅಲೆಗ್ಸಾಂಡರನು ಆಗಿನ ಪರ್ಷಿಯದ ದೊರೆ 3ನೆಯ ಡೇರಿಯಸ್ನನ್ನು ಸೋಲಿಸಿ ದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವವರೆಗೂ) ವೈಭವದಿಂದ ಆಳಿದರು.

ಅಖಮನೀಸ್
ಪರ್ಷಿಯನ್ನರ ಪ್ರಥಮ ರಾಜ
ರಾಜ್ಯಭಾರಪ್ರ ಶ ೭೦೦.
Old PersianHaxāmaniš
ಜನನUnknown
ಜನ್ಮ ಸ್ಥಳUnknown
ಮರಣUnknown
ಮರಣ ಸ್ಥಳAchaemenid Kingdom
ಉತ್ತರಾಧಿಕಾರಿತೆಸ್ಪಿಸ್ಸ
ಮಕ್ಕಳುತೆಸ್ಪಿಸ್ಸ
ಅರಮನೆಅಖಮನಿಡ್
ಧಾರ್ಮಿಕ ನಂಬಿಕೆಗಳುUnconfirmed
"https://kn.wikipedia.org/w/index.php?title=ಅಖಮನಿಸ್&oldid=678121" ಇಂದ ಪಡೆಯಲ್ಪಟ್ಟಿದೆ