ಕೆ.ವಿ. ಅಕ್ಷರ ಅವರು ಕನ್ನಡ ಭಾಷೆಯ ನಾಟಕಕಾರರು, ನಿರ್ದೇಶಕರು , ಬರಹಗಾರರು, ಅನುವಾದಕರು, ಕವಿಯಾಗಿ ಪ್ರಸಿದ್ಧರಾಗಿದ್ದಾರೆ. ಇವರು 24 ಏಪ್ರಿಲ್ 1960 ಜನಿಸಿದರು.ತಂದೆ ಕೆ.ವಿ.ಸುಬ್ಬಣ್ಣ, ತಾಯಿ ಶೈಲಜಾ. ಪದವಿ ಶಿಕ್ಷಣವನ್ನು ಸಾಗರದಲ್ಲಿ ಪೂರೈಸಿ ನಂತರ ರಾಷ್ಟ್ರೀಯ ನಾಟಕ ಶಾಲೆಯನ್ನು ಸೇರಿದರು.[] ರಂಗ ಕಲೆಯ ಕುರಿತು ಪದವಿಯನ್ನು ಲಂಡನ್ ನಲ್ಲಿ ನಂತರ ನೀನಾಸಂ ತಂಡದ ನಿರ್ದೇಶಕರಾಗಿ ತರಬೇತುದಾರರಾಗಿ ಆಡಳಿತ ಅಧಿಕಾರಿಯಾಗಿ ಅಕ್ಷರ ಪ್ರಕಾಶನದ ಮೂಲಕ ಮುದ್ರಣ ಕಾರ್ಯವನ್ನು ಆರಂಭಿಸಿದರು[] ಐದು ನಾಟಕಗಳನ್ನು ಬರೆದಿದ್ದಾರೆ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಸಾಹಿತ್ಯ ರಂಗ ಕಲೆ ಸಿನೆಮಾ ಸಂಸ್ಕೃತಿ ಹಾಗೇನೆ ಅನುವಾದ ಕಾರ್ಯ ಗಳನ್ನು ಸಹ ಮಾಡಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಕೆ ವಿ ಸುಬ್ಬಣ್ಣ ಅವರ ಮಗನಾಗಿ ಜನಿಸಿದ ಅಕ್ಷರ[]

ಅಕ್ಷರ ಕೆ ವಿ

ಶಿಕ್ಷಣ

ಬದಲಾಯಿಸಿ

ಪ್ರೌಢ ಶಿಕ್ಷಣವನ್ನು ಹೆಗ್ಗೋಡಿನಲ್ಲಿ ಪೂರೈಸಿ ಪದವಿ ಶಿಕ್ಷಣವನ್ನು ಎಲ್.ಎಲ್. ಬಿ ಮತ್ತು ಎಸ್ ಪಿ ಎಸ್ ಕಾಲೇಜು ಸಾಗರ ಗಂಗ ತರಬೇತಿಯನ್ನು ದೆಹಲಿಯಲ್ಲಿ ಪಡೆದುಕೊಂಡರು ಎಂ ಎ ಡ್ರಾಮಾ ಬ್ರಿಟಿಷ್ ಕೌನ್ಸಿಲ್ ಸ್ಕಾಲರ್ಶಿಪ್ ಪಡೆದುಕೊಂಡಿದ್ದಾರೆ

ನಿರ್ವಹಿಸಿದ ಹುದ್ದೆಗಳು

ಬದಲಾಯಿಸಿ
  1. ನೀನಾಸಂನ ಕಾರ್ಯದರ್ಶಿಯಾಗಿ ಹಾಗೇನೆ ನಿರ್ದೇಶಕರಾಗಿ ಸಲ್ಲಿಸಿದ್ದಾರೆ
  2. ನೀನಾಸಂನ ಆಡಳಿತ ಮಂಡಳಿಯ ಸದಸ್ಯರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ
  3. ಮಣಿಪಾಲದ ಮಾನವಿಕ ಮತ್ತು ತತ್ವಶಾಸ್ತ್ರ ವಿಭಾಗದ ಸದಸ್ಯರಾಗಿದ್ದಾರೆ

ಕೃತಿಗಳು

ಬದಲಾಯಿಸಿ
  1. ವಿಶ್ವಾತ್ಮಕ ದೇಶ ಭಾಷೆ (೨೦೦೩)
  2. ಮಾವಿನ ಮರದಲ್ಲಿ ಬಾಳೆಯ ಹಣ್ಣು (೨೦೦೨)
  3. ರಂಗಭೂಮಿ ಪೂರ್ವ ಪಶ್ಚಿಮ
  4. ಪ್ರತಿಭೆಯ ಒಂದು ಪ್ರವಾಹ.
  5. ಭಾರತದ ಸಾಂಪ್ರದಾಯಿಕ ರಂಗಭೂಮಿಗೆ ಪಶ್ಚಿಮದ ಪ್ರತಿಕ್ರಿಯೆ
  6. ಕನ್ನಡ ರಂಗಭೂಮಿಯ ಕನಸುಗಳು
  7. ಹದಿಹರೆಯದ ಹಾಡುಗಳು
  8. ರಂಗ ಪ್ರಪಂಚ
  9. ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು.[]

ನಿರ್ದೇಶನ ಮಾಡಿದ ನಾಟಕಗಳು

ಬದಲಾಯಿಸಿ
  • ಬೆಟ್ಟಕ್ಕೆ ಚಳಿಯಾದರೆ
  • ಗವರ್ಮೆಂಟ್ ಇನ್ಸ್ಪೆಕ್ಟರ್
  • 3 ಕನಸಿನ ಸಂಗೀತ ನಾಟಕ
  • ತಾಯಿ
  • ಮಹಿಮಾಪುರ
  • ಆಲಿಬಾಬ
  • ನೀಲಿ ಕುದುರೆ
  • ಸಾಂಬಶಿವ ಪ್ರಹಸನ
  • ಆಷಾಢದ ಒಂದು ದಿನ
  • ಮ್ಯಾಕ್ ಬೆತ್
  • ತುಘಲಕ್
  • ತುಕ್ರನ ಕನಸು
  • ಸಂಗ್ಯಾ ಬಾಳ್ಯ
  • ಸ್ವಪ್ನ ನಾಟಕ
  • ಕಿರಗೂರಿನ ಗಯ್ಯಾಳಿಗಳು
  • ಶಹಜಹಾನ್
  • ಹೊಸ ಸಂಸಾರ
  • ಸಹ್ಯಾದ್ರಿ ಕಾಂಡ
  • ಅಹಲ್ಯೆ
  • ಸಕ್ಕರೆ ಗೊಂಬೆ
  • ಸಂಸನ ಕುರುಕ್ಷೇತ್ರ
  • ಮಂತ್ರ ಶಕ್ತಿ
  • ಚೂರಿ ಕಟ್ಟೆ ಅರ್ಥಾತ್ ಕಲ್ಯಾಣಪುರ
  • ನೂರ್ ಜಹಾನ್
  • ಅಮನಿ
  • ಸಂಸಾರದಲ್ಲಿ ಸನಿದಪ
  • ವೆನಿಸ್ಸಿನ ವ್ಯಾಪಾರ
  • ಭೂತ
  • ಪಾತರಗಿತ್ತಿ ಪಕ್ಕ
  • ಕರ್ಮ ವಿಕ್ರಮ
  • ಸ್ವಯಂವರ ಲೋಕ
  • ಲಹರಿ
  • ತಾಳಿ ಕಟ್ಟಿ ಕೊಳ್ಳಿನಿ
  • ಶಿಶಿರ ವಸಂತ
  • ನಮಗೂ ನಿಮಗೂ ಹರಿ ಉದಯದ ಬಾಗಿಲು ತೆರೆದವರೇ ಅಲ್ಲ
  • ಬಹು ಗಿರಿ
  • ಭಾರತ ಯಾತ್ರಾ
  • ಆಂಗ್ಲ ನೌಕಾ ಕ್ಯಾಪ್ಟನ್
  • ಗೂಡಿನ ಒಳಗೆ ಒಂದು ಅಕ್ಕಿ
  • ಹೇಗೆ ಬೇಕೋ ಹಾಗೆ
  • ಕವಿತೆ ಅಂದ್ರೆ ಏನ್ರೀ
  • ಸೇತು ಬಂಧನ
  • ಮಾಲತಿ ಮಾಧವ.

ಪ್ರಶಸ್ತಿಗಳು

ಬದಲಾಯಿಸಿ
  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[]
  2. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
  3. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
  4. ರಂಗಮನೆ ಪ್ರಶಸ್ತಿ[]

ಉಲ್ಲೇಖಗಳು

ಬದಲಾಯಿಸಿ



ಉಲ್ಲೇಖ

ಬದಲಾಯಿಸಿ