ಅಕ್ಷಯ್ ವೆಂಕಟೇಶ್

ಗಣಿತಜ್ಞ

ಡಾ. ಅಕ್ಷಯ್ ವೆಂಕಟೇಶ್, (೨೧, ನವೆಂಬರ್, ೧೯೮೧) ಭಾರತೀಯ ಮೂಲದ ಆಸ್ಟ್ರೇಲಿಯ ರಾಷ್ಟ ನಿವಾಸಿ. ಈಗ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿದ್ದಾರೆ. ಅಕ್ಷಯ್ ಗಣಿತ ಶಾಸ್ತ್ರದಲ್ಲಿ ಮಾಡಿದ ಉನ್ನತ ಸಾಧನೆಗಳಿಗಾಗಿ ೩೬ ನೆಯ ವಯಸ್ಸಿನಲ್ಲಿ ಫೀಲ್ಡ್ಸ್ ಪದಕ ಪುರಸ್ಕೃತರಾದರು. ಈ ಪುರಸ್ಕಾರ ಗಣಿತ ಕ್ಷೇತ್ರದ ನೋಬೆಲ್ ಪ್ರಶಸ್ತಿ ಎಂದು ಖ್ಯಾತಿ ಪಡೆದಿದೆ. ಅಕ್ಷಯ್ ವೆಂಕಟೇಶ್ ಜೊತೆಗೆ ನಾಲ್ಕು ಸಾಧಕರಿಗೆ ಪ್ರಶಸ್ತಿ ದೊರೆತ್ಗಿದೆ.[೧] ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪ್ರದಾನಮಾಡುವ ಈ ಪ್ರಶಸ್ತಿ ೪೦ ವರ್ಷಪ್ರಾಯದ ಒಳಗಿನ ಮ್ಯಾಥೆಮೆಟಿಕ್ಸ್ ಸಾಧಕರಿಗೆ ಪ್ರದಾನಮಾಡಲಾಗುತ್ತದೆ. ೨೦೧೮ ರ ಆಗಸ್ಟ್ ೧ ರಂದು ರಯೋಡಿ ಜನೈರೋ ನಗರದ 'ಇಂಟರ್ನ್ಯಾಶನಲ್ ಸೈನ್ಸ್ ಆಫ್ ಕಾಂಗ್ರೆಸ್' ನ ಸಮಾರಂಭದಲ್ಲಿ ಪ್ರದಾನಮಾಡಲಾಯಿತು. ವಿಜೇತರಿಗೆ ೧೫ ಸಾವಿರ ಡಾಲರ್ ನಗದು ಹಣ ದೊರೆತಿದೆ. ಈ ಪ್ರತಿಷ್ಠಿತ ಪುರಸ್ಕಾರವನ್ನು ೧೯೩೨ ರಲ್ಲಿ ಸ್ಥಾಪಿಸಲಾಯಿತು. [೨]

  1. ಅಕ್ಷಯ್ ವೆಂಕಟೇಶ್, ಭಾರತೀಯ ಮೂಲದ ಆಸ್ಟ್ರೇಯ ನಿವಾಸಿ,[೩]
  2. ಕೌಚರ್ ಬರ್ಕರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಇರಾನಿಯನ್ ಕುರ್ಡಿಶ್ ಮೂಲದವರು. [೪]
  3. ಪೀಟರ್ ಶೋಲಜ್,ಜರ್ಮನಿ ಮೂಲದ ಬಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ.
  4. ಅಲೆಸಿಯೋ ಫಿಗಾಲಿ, ಇಟಲಿ ಮೂಲದ ಐಟಿಯುಝಡ್,ಇಟಾಲಿಯನ್ ಗಣಿತಜ್ಞ, ಝುರಿಚ್ ನಲ್ಲಿ ಕೆಲಸಮಾಡುತ್ತಿದ್ದಾರೆ. [೫]

ಬಾಲ್ಯ ಹಾಗೂ ವಿದ್ಯಾಭ್ಯಾಸ ಬದಲಾಯಿಸಿ

ವೆಂಕಟೇಶ್​ ಮೂಲತಃ ದೆಹಲಿಯವರು. ತಮ್ಮ ಎರಡನೇ ವಯಸ್ಸಿನಲ್ಲಿ ಪಾಲಕರ ಜತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. 20ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಅಕ್ಷಯ್ ತಮ್ಮ 13ನೇ ವಯಸ್ಸಿನಿಂದಲೇ ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪ್ರಾರಂಭ ಮಾಡಿದರು. 16ನೇ ವರ್ಷದಲ್ಲಿ ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಪ್ರಿನ್ಸನ್​ ಯೂನಿವರ್ಸಿಟಿ ಸೇರಿದರು. ಎಂಐಟಿಯಲ್ಲಿ ಡಾಕ್ಟರಲ್ ನಂತರದ ಸ್ಥಾನಕ್ಕೇರಲು ಕ್ಲೇ ರಿಸರ್ಚ್​ನಲ್ಲಿ ತೊಡಗಿದರು. ಈಗ ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್​ ಆಗಿದ್ದಾರೆ.

ಅಕ್ಷಯ್ ವೆಂಕಟೇಶ್ ರವರ ಕೊಡುಗೆಗಳು ಬದಲಾಯಿಸಿ

ಅಕ್ಷಯ್​ ವೆಂಕಟೇಶ್ ರವರು ಸಂಖ್ಯಾ ಸಿದ್ಧಾಂತ, ಅಂಕಗಣಿತ, ರೇಖಾಗಣಿತ, ಟೋಪೋಲೊಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೊಡಿಕ್ ಸಿದ್ಧಾಂತಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ಮಾಡಿದ್ದಾರೆ..[೬][೭]

ಪ್ರಶಸ್ತಿಗಳು ಬದಲಾಯಿಸಿ

  1. ಓಸ್ಟ್ರೋಸ್ಕಿ ಪ್ರಶಸ್ತಿ,
  2. ಇನ್ಫೋಸಿಸ್​ ಪ್ರಶಸ್ತಿ, [೮]
  3. ಸೇಲಂ ಪ್ರಶಸ್ತಿ,
  4. ರಾಮಾನುಜನ್ ಪ್ರಶಸ್ತಿ,
  5. ಫೀಲ್ಡ್ಸ್ ಮೆಡಲ್ (೨೦೧೮)

ಉಲ್ಲೇಖಗಳು ಬದಲಾಯಿಸಿ

  1. ಆಗಸ್ಟ್, ೨೦೧೮, ಕನ್ನಡಪ್ರಭ, 'ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ ಗಣಿತದ ನೋಬೆಲ್ ಫೀಲ್ಡ್ಸ್ ಮೆಡಲ್ ಪ್ರಶಸ್ತಿ'[ಶಾಶ್ವತವಾಗಿ ಮಡಿದ ಕೊಂಡಿ]
  2. name="IndiaTVNews">"Indian-origin mathematician Akshay Venkatesh maths 'Nobel' Fields Medal". India TV News. 2 August 2018. Retrieved 4 August 2018.
  3. Mathematician Akshay venkatesh gets the Fields medal,The Nobel prize for Mathematics, scroll.in, Sun, 5th, Aug, 2018
  4. An nnovator Who Brings Order to an Infinitude of Equations , Quanta magazine
  5. "Akshay Venkatesh". claymath.org. Clay Mathematics Institute. 2 August 2018. Retrieved 4 August 2018.
  6. "Former IMO Olympians". amt.edu.au. Australian Mathematics Trust. 2017. Archived from the original on 13 ಡಿಸೆಂಬರ್ 2018. Retrieved 4 August 2018.
  7. MacDonald, Janine (15 July 2011). "Maths boy wonder shows how to stack oranges" (Press release). University of Western Australia. Retrieved 4 August 2018.
  8. The better world, Jan,11, 2017, Meet Mathematician Akshay venkatesh, who won The Infosys Prize for his Research in Number Theory

ಪೂರಕ ಓದಿಗೆ ಬದಲಾಯಿಸಿ