ಅಕ್ಯುಪಂಚರ್‌ ಚಿಕಿತ್ಸೆ

ಅಕ್ಯುಪಂಚರ್‌ ಚಿಕಿತ್ಸೆ

ಬದಲಾಯಿಸಿ

ಅಕ್ಯಪಂಚರ್‌ಚಿಕಿತ್ಸೆಯು ಸಂಪೂರ್ಣವಾಗಿ ನಿರೌಷಧ ಚಿಕಿತ್ಸಾ ಪದ್ಧತಿಯಾಗಿದ್ದು, ಪ್ರಕೃತಿ ಚಿಕಿತ್ಸೆಯ ಭಾಗವಾಗಿದೆ. ಈ ಚಿಕಿತ್ಸೆಯುಯಾವುದೇ ರೀತಿಯ ಪಾರ್ಶ್ವ ಅಥವಾ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಇದು ಪ್ರಾಚೀನ ವೈದ್ಯಕೀಯ ಪದ್ಧತಿಯ ಒಂದು ಭಾಗ. ಅಕ್ಯುಪಂಚರ್‌ ಎನ್ನುವ ಈ ಪದವು ಲ್ಯಾಟಿನ್ ಭಾಷೆಯಿಂದ ಬಂದ ಪದ. ಅಕ್ಯು ಎಂದರೆ ಸೂಜಿ ಪಂಕ್ಚರ್‌ ಎಂದರೆ ಚುಚ್ಚುವುದು. ಮಧು ಮೇಹಕ್ಕೆ ಅಕ್ಯುಪಂಕ್ಚರ್‌ ಚಿಕಿತ್ಸೆಯನ್ನು ನೀಡುತ್ತಿರುವುದು ಇಂದು ನೆನ್ನೆಯ ಪದ್ಧತಿಯಲ್ಲ ಸರಿಸುಮಾರು ಸಾವಿರ ವರ್ಷಗಳ ಹಿಂದೆಯೇ ಮಧುಮೇಹದ ಬಿಂದುಗಳನ್ನು ಗುರುತಿಸಿ ಚಿಕಿತ್ಸೆಯನ್ನು ನೀಡುವ ಪದ್ಧತಿರೂಢಿಯಲ್ಲಿದೆ. ಇದರ ಅರಿವು ಜನಸಾಮಾನ್ಯರಲ್ಲಿ ಕಡಿಮೆಯಿದ್ದಿದ್ದರಿಂದ ಇಂದು ಮಧುಮೇಹವು ಈ ಮಟ್ಟಿಗೆ ಬೆಳೆಯಲು ಕಾರಣವಾಗಿದೆ. ಈ ಚಿಕಿತ್ಸೆಯಲ್ಲಿ ತೆಳುವಾದ ಶುದ್ಧ ಸೂಜಿಗಳನ್ನು ಗುರುತಿಸಿ ಅವುಗಳಿಗೆ ನಿರ್ದಿಷ್ಟ ಬಿಂದುಗಳನ್ನು ಗುರುತಿಸಿ ಅವುಗಳಿಗೆ ಚುಚ್ಚಿ ಪ್ರಚೋದಿಸುವುದುದರಿಂದ ಮೆರಿಡಿಯನ್‌ಗಳ ಮೂಲಕ ‘ಛೀ’ ಶಕ್ತಿಯು ಪ್ರವಹಿಸಿ ಮಧುಮೇಹಕ್ಕೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ವಿಶೇಷ ಶಕ್ತಿ

ಬದಲಾಯಿಸಿ

ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿಯೂ ಜನ್ಮತಃ ಬಂದಿರುವಂತಹ ‘ಛೀ’ ಎನ್ನುವ ವಿಶೇಷ ಶಕ್ತಿಯು ಪ್ರವಹಿಸುತ್ತಿರುತ್ತದೆ. ಹೇಗೆ ನಗರಗಳಲ್ಲಿ ನರಗಳ ಇಂಪಲ್ಸ್ ಪ್ರವಹಿಸುತ್ತವೆಯೋ ಅದೇರೀತಿಯಲ್ಲಿ ‘ಮೆರಿಡಿಯನ್’ಗಳೆಂಬ ನಾಳಗಳಲ್ಲಿ ಈ ‘ಛೀ’ ಶಕ್ತಿಯುದೇಹದಲ್ಲೆಲ್ಲಾ ಪ್ರವಹಿಸುತ್ತದೆ. ಮೆರಿಡಿಯನ್‌ಗಳೆಂದರೆ ಈ ‘ಛೀ’ ಪ್ರವಹಿಸುವ ದಾರಿಗಳು. ಅವುಗಳ ಮುಖ್ಯಕಾರ್ಯವೆಂದರೆ ದೇಹದ ಎಲ್ಲಾ ಭಾಗಗಳಿಗೂ ಸಮಾನ ರೀತಿಯಲ್ಲಿ ಈ ಶಕ್ತಿಯನ್ನು ಪ್ರವಹಿಸುವುದು. ಅಂದರೆ ದೇಹದ ಮೇಲ್ಭಾಗಕ್ಕೂ ಮತ್ತು ಒಳಬಾಗಕ್ಕೂ ಈ ಶಕ್ತಿಯನ್ನು ಪ್ರಸರಿಸುವುದರೊಂದಿಗೆ ಹೊಂದಾಣಿಕೆಯನ್ನು ಉಂಟು ಮಾಡಿ ದೇಹದ ಸಮತೋಲನವನ್ನು ಕಾಪಾಡುತ್ತದೆ.

ಮಧುಮೇಹಕ್ಕೆ ಫಿಲಿಫಾರ್ಮ್ ಸೂಜಿ

ಬದಲಾಯಿಸಿ

ಈವರೆಗೆ ದೇಹದಲ್ಲಿ ಸಾವಿರ ಸಂಖ್ಯೆಯಲ್ಲಿ ಬಿಂದುಗಳು ಹಾಗೂ ಇಪ್ಪತ್ತಕ್ಕೂ ಅಧಿಕ ಮೆರಿಡಿಯನ್‌ಗಳನ್ನು ಕಂಡುಹಿಡಿಯಲಾಗಿದೆ. ಮಧುಮೇಹವೊಂದಕ್ಕೇ ಹತ್ತರಿಂದ ಹನ್ನೆರಡು ಬಿಂದುಗಳನ್ನು ಆರಿಸಿಕೊಂಡು ಚಿಕಿತ್ಸೆಯನ್ನು ನೀಡಲಾಗುವುದು .ಇವಲ್ಲದೆ, ಮೆರಿಡಿಯನ್‌ಗೆ ಒಳಪಡದ ಅನೇಕ ರೋಗ ನಿವಾರಕ ಬಿಂದುಗಳನ್ನು ಕೂಡ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಫಿಲಿಫಾರ್ಮ್ ಸೂಜಿಯನ್ನು ಮಧುಮೇಹ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಸೂಜಿಯು ೦.೫ ಇಂಚಿನಿಂದ ಎಂಟು ಇಂಚಿನವರೆಗೂ ಸಿಗುತ್ತದೆ ಮತ್ತುಇದರ ಸುತ್ತಳತೆಯು ೨೬ರಿಂದ೩೨ ಗೇಜ್‌ನಷ್ಟಿರುತ್ತದೆ. ಒಂದರಿಂದ ಒಂದೂವರೆ ಇಂಚು ಮತ್ತು ೩೦ ಗೇಜ್ ಹೊಂದಿರುವ ಸೂಜಿಯನ್ನು ಹೆಚ್ಚಾಗಿ ಮಧುಮೇಹ ಕಾಯಿಲೆ ಚಿಕಿತ್ಸೆಗೆ ಬಳಸಲಾಗುತ್ತದೆ. ಇದರ ಜೊತೆಯಲ್ಲಿ ದೇಹದ ಕೆಲವು ಭಾಗಗಳಿಗೆ ಮತ್ತು ಚುಚ್ಚಬೇಕಾದ ಆಳಕ್ಕೆ ಅನುಗುಣವಾಗಿ ಸೂಜಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ.

ಅಕ್ಯುಂಪಕ್ಚರ್ ಬಿಂದು

ಬದಲಾಯಿಸಿ

ಆಯಾ ರೋಗಗಳಿಗೆ ತಕ್ಕಂತೆ ಅವಕ್ಕೆ ಸಂಬಂಧಪಟ್ಟ ಆಯಾಮ, ಅಂಗಗಳ ಬಿಂದುಗಳನ್ನು ಸೂಕ್ತ ರೀತಿಯಲ್ಲಿ ಆರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದೇ ಬಿಂದುಗಳಿಗೆ ಸೂಕ್ತ ರೀತಿಯಲ್ಲಿ ಆರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದೇ ಬಿಂದುಗಳಿಗೆ ಎಲೆಕ್ಟ್ರಿಕ್ ಸ್ಟಮ್ಯುಲೇಷಣ್‌ಕೂಡ ನೀಡಲಾಗುವುದು. ಈ ಆಯ್ದ ಬಿಂದುಗಳನ್ನು ಹೆಚ್ಚಿನದಾಗಿ ಪ್ರಚೋದಿಸಲು ಸೂಜಿಯನ್ನ ಹಾಕಿದ ನಂತರ ಎಲೆಕ್ಟ್ರಿಕ್ ವೈರನ್ ಬಳಸಿ ನಿಗದಿತ ಪ್ರಮಾಣದಲ್ಲಿ ಸ್ಟಮ್ಯುಲೇಷನ್ ನೀಡಿ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಚಿಕಿತ್ಸೆಯು ಸಂಪೂರ್ಣವಾಗಿ ವೈದ್ಯರ ಸಮ್ಮುಖದಲ್ಲಿಯೇ ಹಾಗೂ ಪರಿಣತ ವೈದ್ಯರೇ ನೀಡಬೇಕಾಗಿರುತ್ತದೆ. ಈ ಅಕ್ಯಪಂಕ್ಚರ್‌ ಚಿಕಿತ್ಸೆಯು ಕೇವಲ ಮಧುಮೇಹಕ್ಕೆ ಮಾತ್ರವಲ್ಲದೆ, ವಿಶ್ವಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಚಿಕಿತ್ಸಾ ಪದ್ಧತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಪಂಚದಾದ್ಯಂತ ಇದು ನೋವು ಹಾಗೂ ಅನೇಕ ಕಾಯಿಲೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹಕ್ಕೆ ಬಳಸುವ ಅಕ್ಯುಪಂಕ್ಚರ್ ಬಿಂದುಗಳು. ಮಧುಮೇಹದ ಲಕ್ಷಣಗಳನ್ನು ಸರಿಪಡಿಸುವಲ್ಲಿ ಹೆಚ್ಚಿನ ಸಂಶೋಧನೆಗಳಿಂದ ದೃಢ ಪಟ್ಟಿರುವ ಅಕ್ಯುಂಪಕ್ಚರ್ ಬಿಂದು ಸಿವಿ-೧೨ ಮಧುಮೇಹ ನಿವಾರಣೆಗೆ ಹೆಚ್ಚಿನ ಪರಿಣತ ಪ್ರಕೃತಿಚಿಕಿತ್ಸೆ ವೈದ್ಯರುಗಳು ಆಯ್ದುಕೊಳ್ಳುವ ಸೂಜಿ ಚಿಕಿತ್ಸೆಗಾಗಿ ಸಂಶೋಧನೆಗಳಿಂದ ದೃಢಪಟ್ಟಿರುವ ನಿರ್ದಿಷ್ಟ ಮತ್ತು ಆಯ್ದ ಬಿಂದುಗಳೆಂದರೆ. ಎಸ್.ಪಿ-೬, ಎಸ್.ಟಿ-೩೬, ಗಳನ್ನು ಮಾತ್ರ ಉಪಯೋಗಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಬಿಂದುಗಳು ಪ್ರಯೋಗಾತ್ಮಕವಾಗಿಯೂ ಕೂಡರುಜುಗೊಂಡಿವೆ ಮತ್ತು ವ್ಯಕ್ತಿಯ ಮೂಲಕಾರಣದನ್ವಯ ಬಿಂದುಗಳನ್ನು ಆಯ್ದಚಿಕಿತ್ಸೆಯನ್ನು ನೀಡಲಾಗುತ್ತದೆ.[] []

  • (ಕಸ್ತೂರಿ ಜನವರಿ ೨೦೧೬ , ಸೌಖ್ಯ ಸಂಪದ)

ಉಲ್ಲೇಖಗಳು

ಬದಲಾಯಿಸಿ
  1. ಕಸ್ತೂರಿ ೨೦೧೬,
  2. ಸೌಖ್ಯ ಸಂಪದ


ಕಸ್ತೂರಿ ಫೆಬ್ರವರಿ ೨೦೧೯,ಸೌಖ್ಯ ಸಂಪದ ವಿಭಾಗ ಡಾ.ಗಂಗಾಧರ ವರ್ಮ ಪುಟ ಸಂಖ್ಯೆ ೨೬